ವಿಷ್ಣುವರ್ಧನ್ ಕುಟುಂಬದವರೆಲ್ಲಾ ಸೇರಿ ಕಟ್ಟಿಸಿದ ಅರಮನೆಯ ಒಳಗೆ ಹೇಗಿದೆ ಗೊತ್ತಾ? ಒಮ್ಮೆ ನೋಡಿ ಕಣ್ಣ್ತುಂಬಿಕೊಳ್ಳಿ


ಕನ್ನಡ ಚಿತ್ರರಂಗದ ಸಾಹಸಸಿಂಹ ಅಭಿನಯ ಭಾರ್ಗವ ಎಂಬ ಬಿರುದಾಂಕಿತ ವಿಷ್ಣುವರ್ಧನ್ ಅವರು ತಾವು ಬದುಕಿರುವವರೆಗೂ ಕೂಡ ಬೇರೆಯವರಿಗೆ ಮಾದರಿಯಾಗುವಂತೆ ಬದುಕಿ ತೋರಿಸಿದವರು. ಇನ್ನು ಈಗ ವಿಷ್ಣುವರ್ಧನ್ ಅವರ ಕುಟುಂಬ ಸದ್ದು ಮಾಡುತ್ತಿರುವುದು ಹೊಸ ಮನೆಯ ವಿಚಾರಕ್ಕಾಗಿ.

ಅವರ ಮಗಳಾಗಿರುವ ಕೀರ್ತಿ ಮತ್ತು ಅಳಿಯ ಅನಿರುದ್ಧ್ ಹಾಗೂ ಪತ್ನಿ ಭಾರತಿ ವಿಷ್ಣುವರ್ಧನ್ ರವರು ಸೇರಿ ಸಾಹಸಸಿಂಹ ಅವರ ಖರೀದಿಸಿರುವ ಜಾಗದಲ್ಲಿ ಹೊಸ ಐಷಾರಾಮಿ ಮನೆಯನ್ನು ಈಗಾಗಲೇ ಕಟ್ಟಿಸಿದ್ದು ಗೃಹಪ್ರವೇಶಕ್ಕೆ ಗಣ್ಯಾತಿ ಗಣ್ಯರು ಆಗಮಿಸಿದ್ದಾರೆ. ಈ ಮನೆಗೆ ವಲ್ಮೀಕ ಎನ್ನುವ ಹೆಸರನ್ನು ಕೂಡ ಇರಿಸಲಾಗಿದೆ.

ಈ ಅದ್ದೂರಿ ಗೃಹಪ್ರವೇಶ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ನವರಸ ನಾಯಕ ಜಗ್ಗೇಶ್ ಸುಮಲತಾ ಅಂಬರೀಶ್ ಮತ್ತು ಜೊತೆ ಜೊತೆಯಲಿ ಧಾರವಾಹಿ ತಂಡ ಸೇರಿದಂತೆ ಹಲವಾರು ಕಿರುತೆರೆ ಹಾಗೂ ಸಿನಿಮಾರಂಗಕ್ಕೆ ಸೇರಿದಂತಹ ಸೆಲೆಬ್ರೆಟಿಗಳು ಆಗಮಿಸಿದ್ದಾರೆ.

ಇನ್ನು ಅದ್ದೂರಿಯಾಗಿ ನಿರ್ಮಿತವಾಗಿರುವ ವಿಷ್ಣುವರ್ಧನ್ ಕುಟುಂಬದ ಅದ್ದೂರಿ ಮನೆಯ ದೃಶ್ಯದ ತುಣುಕುಗಳನ್ನು ನೀವು ಈ ವಿಡಿಯೋದಲ್ಲಿ ಕೂಡ ನೋಡಬಹುದಾಗಿದ್ದು ಮನೆ ಹೇಗಿದೆ ಎಂಬುದನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ. ಇಷ್ಟು ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಅನಿರುದ್ಧ ಅವರು ಏನು ಮಾಡಬೇಕು ಎಂಬ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ವ್ಯಕ್ತಪಡಿಸಬಹುದಾಗಿದೆ.

Actor Vishnuvardhan new house video

Leave A Reply

Your email address will not be published.