Vinod Raj: ಅಂದು ಯಾರೂ ಸಹಾಯ ಮಾಡಲಿದ್ದ ಸಂದರ್ಭದಲ್ಲಿ ವಿನೋದ್ ರಾಜ್ ಗೆ ಸಾಹಸಸಿಂಹ ಮಾಡಿದ ಸಹಾಯ ಏನು ಗೊತ್ತಾ?

Dr Vishnuvardhan ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅಮ್ಮನವರ ಪುತ್ರ ವಿನೋದ್ ರಾಜ್(Vinod Raj) ಅವರು ನಿಮಗೆಲ್ಲ ತಿಳಿದಿರುವ ಹಾಗೆ ಚಿತ್ರರಂಗಕ್ಕೆ ಕಾಲಿಟ್ಟ ಆರಂಭಿಕ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಆತ ದೊಡ್ಡ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಾನೆ ಎಂಬುದಾಗಿ ಭಾವಿಸಿದ್ದರು. ಆದರೆ ಗಾಂಧಿನಗರದ ಕೆಲವೊಂದು ನಿರ್ದೇಶಕ ಹಾಗೂ ನಿರ್ಮಾಪಕರ ಕಾರಣದಿಂದಾಗಿ ಅವರು ಕೆಲವೇ ಕೆಲವು ಸಮಯಗಳಲ್ಲಿ ಚಿತ್ರರಂಗದಿಂದ ದೂರ ಉಳಿಯಬೇಕಾಗಿ ಬಂದಿತು. ಇದು ಅವರು ಹಾಗೂ ಅವರ ಕುಟುಂಬಕ್ಕೂ ಕೂಡ ಸಾಕಷ್ಟು ಬೇಸರವನ್ನು ಮೂಡಿಸುತ್ತದೆ.

ಇನ್ನು ಅದೊಂದು ಸಂದರ್ಭದಲ್ಲಿ ವಿನೋದ್ ರಾಜ್ ರವರಿಗೆ ಯಾರಿಂದಲೂ ಕೂಡ ಸಹಾಯ ಸಿಕ್ಕದಿದ್ದ ಸಂದರ್ಭದಲ್ಲಿ ಕೇವಲ ವಿಷ್ಣುವರ್ಧನ್(Dr Vishnuvardhan) ರವರಿಂದ ಮಾತ್ರ ಸಹಾಯ ಸಿಕ್ಕಿತು. ಅದಕ್ಕೆ ತಾನೆ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗದ ಕರ್ಣ ಎನ್ನುವುದಾಗಿ ಹೇಳುವುದು. ಅಷ್ಟಕ್ಕೂ ಆ ಸಂದರ್ಭ ಯಾವುದು ಹಾಗೂ ವಿಷ್ಣುವರ್ಧನ್ ರವರು ಮಾಡಿದಂತಹ ಸಹಾಯವಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಸಾಹಸಸಿಂಹ ವಿಷ್ಣುವರ್ಧನ್ ರವರು ವಿನೋದ್ ರಾಜ್ ಕನ್ನಡದ ಕಂದ(Kannadada Kanda) ಎನ್ನುವ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಯಾರಿಂದಲೂ ಸಹಾಯ ಹಾಗೂ ಪ್ರೋತ್ಸಾಹ ಸಿಗದೇ ಒಂಟಿಯಾಗಿ ಕನ್ನಡ ಚಿತ್ರರಂಗದಲ್ಲಿ ನಿಂತಿದ್ದರು. ಈ ಸಂದರ್ಭದಲ್ಲಿ ವಿಷ್ಣುವರ್ಧನ ರವರು ತಾವು ಮುಂದೆ ಬಂದು ನಿಮ್ಮ ಬೆಂಬಲಕ್ಕೆ ನಾನಿದ್ದೇನೆ ಎಂಬುದಾಗಿ ಧೈರ್ಯವನ್ನು ತುಂಬಿದ್ದರು.

ಇದನ್ನು ವಿನೋದ್ ರಾಜ್ ಹಾಗೂ ಲೀಲಾವತಿಯವರು(Leelavathi Actress) ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಥವಾ ಯಾವುದೇ ವೇದಿಕೆಯ ಮೇಲೆ ಹೋಗಲಿ ತಾಯಿ ಮಗ ಇಬ್ಬರೂ ಕೂಡ ಈ ಸಂದರ್ಭದಲ್ಲಿ ವಿಷ್ಣುವರ್ಧನ್(Vishnudada) ರವರು ಮಾಡಿರುವ ಸಹಾಯವನ್ನು ನೆನಪಿಸಿಕೊಳ್ಳುತ್ತಾರೆ. ಇದು ಸಾಹಸಸಿಂಹ ವಿಷ್ಣುವರ್ಧನ್ ರವರು ತಮ್ಮನ್ನು ನಂಬಿದವರ ಹಿಂದೆ ಬೆಂಬಲವಾಗಿ ನಿಲ್ಲುತ್ತಿದ್ದ ರೀತಿ ಎಂದು ಹೇಳಬಹುದಾಗಿದೆ. ವಿಷ್ಣುವರ್ಧನ್ ಅವರ ಈ ಹೃದಯವಂತಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Leave A Reply

Your email address will not be published.