Darshan Thoogudeepa: ಡಿಬಾಸ್ ಗೆ ವಯಸ್ಸಾಗುತ್ತಿದೆ ಎಂದು ಟ್ರೋಲ್ ಮಾಡಿದವರಿಗೆ ವಿಜಯಲಕ್ಷ್ಮಿ ಕೊಟ್ರು ಖಾರದ ಉತ್ತರ.


Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಈಗಾಗಲೇ 45 ವರ್ಷ ವಯಸ್ಸಾಗಿರುವಂತಹ ನಟ. ಆದರೆ ಅವರನ್ನು ಇತ್ತೀಚಿನ ದಿನಗಳಲ್ಲಿ ಗಮನಿಸಿದರೆ ಅವರ ಮುಖದಲ್ಲಿ ವಯಸ್ಸಾಗಿರುವಂತಹ ಲಕ್ಷಣಗಳು ಎದ್ದು ಕಾಣುತ್ತವೆ ಎಂಬುದಾಗಿ ಎಲ್ಲರೂ ಕೂಡ ಟೀಕೆ ಮಾಡುತ್ತಿದ್ದಾರೆ. ಅದರಲ್ಲೂ ಕ್ರಾಂತಿ(Kranti) ಸಿನಿಮಾದ ಸಂದರ್ಭದಲ್ಲಿ ಅವರ ಕೂದಲು ಕೂಡ ಉದುರುವಂತೆ ಕಂಡುಬರುತ್ತಿತ್ತು. ಒಟ್ಟಾರೆಯಾಗಿ ದರ್ಶನ್(Handsome) ಅವರು ಅಷ್ಟೊಂದು ಹ್ಯಾಂಡ್ಸಮ್ ಆಗಿ ಕಾಣಿಸಿಕೊಳ್ಳುತ್ತಿಲ್ಲ.

ಇದು ನಾವು ಹೇಳ್ತಿರೋ ಮಾತಲ್ಲ ಬದಲಾಗಿ ಕೆಲವೊಂದು ವ್ಯಕ್ತಿಗಳು ಸೇರಿದಂತೆ ಸ್ವತಹ ದರ್ಶನ್(Darshan) ಅವರ ಅಭಿಮಾನಿಗಳೇ ಹೇಳುವಂತಹ ಮಾತು ಇದಾಗಿದೆ. ದರ್ಶನ್ ಅವರು ಇತ್ತೀಚಿಗಷ್ಟೇ ಕೂದಲು ಸರ್ಜರಿಯನ್ನು ಕೂಡ ಮಾಡಿಸಿಕೊಂಡು ಬಂದಿದ್ದರು. ಆದರೆ ಮುಖದ ಕಾಂತಿ ಮಾತ್ರ ಕುಂದಿದಂತೆ ಕಂಡುಬಂದಿತ್ತು. ಇದು ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಎದ್ದು ಕಂಡು ಬರುತ್ತಿತ್ತು.

Darshan Thoogudeepa

ಇದರ ಕುರಿತಂತೆ ಟ್ರೋಲ್ ಮಾಡುತ್ತಿದ್ದವರಿಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಆಗಿರುವ ವಿಜಯಲಕ್ಷ್ಮಿ(Vijayalakshmi Darshan) ಅವರೇ ಹೇಟರ್ಸ್ಗಳಿಗೆ ಖಡಕ್ ಉತ್ತರವನ್ನು ಈಗ ನೀಡಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಬ್ಬ ವ್ಯಕ್ತಿಯ ಮುಖಕ್ಕೆ ಬೆಲೆ ಕೊಡಬೇಡಿ ಅವರ ವ್ಯಕ್ತಿತ್ವಕ್ಕೆ ಬೆಲೆ ಕೊಡಿ ಎಂಬುದಾಗಿ ಬರೆದುಕೊಂಡಿದ್ದಾರೆ. ಇದನ್ನು ಪರೋಕ್ಷವಾಗಿ ದರ್ಶನ್ ಅವರ ಮುಖದ ಕಾಂತಿಯನ್ನು ಇಟ್ಟುಕೊಂಡು ಟ್ರೋಲ್ ಮಾಡುತ್ತಿದ್ದವರಿಗೆ ಹೇಳಿದ್ದಾರೆ ಎಂಬುದಾಗಿ ಎಲ್ಲಾ ಕಡೆ ಸುದ್ದಿಯಾಗುತ್ತಿದೆ.

ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದಲ್ಲಿ ದರ್ಶನ್ ಅವರು ಅತ್ಯಂತ ಫಿಟ್ ಆಗಿ ಕಾಣಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ತಮ್ಮ ಮುಖದ ಸೌಂದರ್ಯದ ಕುರಿತಂತೆ ಕೂಡ ದರ್ಶನ್ ಅವರು ಖಂಡಿತವಾಗಿ ಏನಾದರೂ ಬದಲಾವಣೆ ತರುವಂತಹ ಪ್ರಯತ್ನವನ್ನು ಮಾಡಬಹುದು ಹೀಗಾಗಿ ಅಭಿಮಾನಿಗಳು ಹಾಗೂ ಇತರ ಸಿನಿಮಾ ಪ್ರೇಕ್ಷಕರು ಅವರನ್ನು ಈ ವಿಚಾರದ ಕುರಿತಂತೆ ಟೀಕೆ ಮಾಡುವುದು ಅನಗತ್ಯವಾಗಿದೆ ಎಂದು ಹೇಳಬಹುದಾಗಿದೆ. ಕ್ರಾಂತಿ(Kranti) ಸಿನಿಮಾದಲ್ಲಿ ದರ್ಶನ್(Darshan) ಅವರು ಹೊಂದಿರುವಂತಹ ದೈಹಿಕ ದಾರ್ಢ್ಯತೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ


Leave A Reply

Your email address will not be published.