ಭಾರತದ ಟಾಪ್ 10 ನಾಯಕರ ಪಟ್ಟಿಯಲ್ಲಿ ಯಶ್.. ಹಾಗಾದರೆ ಯಶ್ ಎಷ್ಟನೇ ಸ್ಥಾನದಲ್ಲಿದ್ದಾರೆ?

2022ರ ಭಾರತದ ಟಾಪ್ 10 ಹೀರೋಗಳ ಪಟ್ಟಿ ರಿಲೀಸ್ ಆಗಿದೆ. ಸಿನಿಪ್ರಿಯರು ತಮ್ಮ ನೆಚ್ಚಿನ ನಾಯಕನ ಹೆಸರನ್ನು ಈ ಪಟ್ಟಿಯಲ್ಲಿ ನೋಡಲು ಉತ್ಸುಕರಾಗಿದ್ದಾರಂತೆ. ಭಾರತದಲ್ಲಿ ಹಲವು ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳು ತೆರೆ ಕಾಣುತ್ತವೆ. ಟಾಲಿವುಡ್, ಸ್ಯಾಂಡಲ್ ವುಡ್, ಕಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಇಂಡಸ್ಟ್ರಿಗಳಿವೆ.

ನಾಯಕರು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಹಾವ ಭಾವಗಳನ್ನು ಪ್ರೇಕ್ಷಕರ ಮನ ಗೆಲ್ಲುವಂತೆ ವ್ಯಕ್ತಪಡಿಸಿ, ಸಿನಿಮಾದ ಗೆಲುವಿಗೆ ಕಾರಣರಾಗುತ್ತಾರೆ. ಹೊಸ ಹೊಸ ಕತೆಗಳೊಂದಿಗೆ ಚಿತ್ರಗಳು ಸಿದ್ಧಗೊಂಡು, ಒಂದರ ಹಿಂದೊಂದರಂತೆ ಚಿತ್ರ ಮಂದಿರದಲ್ಲಿ ತೆರೆ ಕಾಣುತ್ತವೆ. ಹೆಚ್ಚೆಚ್ಚು ಲಾಭಗಳಿಂದ ಚಿತ್ರರಂಗವು ಸಾಗುತ್ತಿದೆ. ಚಿತ್ರದೊಂದಿಗೆ ನಾಯಕ – ನಾಯಕಿಯರು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಒಂದೇ ಚಿತ್ರವು ಹಲವು ಭಾಷೆಗಳಲ್ಲಿ ಪ್ರದರ್ಶನಗೊಂಡು ಇಡೀ ದೇಶದಾದ್ಯಂತ ಫ್ಯಾನ್ಸ್ ಅನ್ನು ಹೊಂದುತ್ತದೆ.

ಕನ್ನಡ ಚಿತ್ರರಂಗದ ಯಶ್ ತಮ್ಮ ಕೆ.ಜಿ.ಎಫ್.ಚಿತ್ರದ ಮೂಲಕ ಅಭಿಮಾನಿ ಬಳಗವನ್ನು ವಿಸ್ತರಿಸಿಕೊಂಡಿದ್ದಾರೆ. ಕೋಟಿ ಕೋಟಿ ಲಾಭಗಳಿಸಿರುವ ಈ ಚಿತ್ರವು ಹಲವು ಭಾಷೆಗಳಲ್ಲಿ ತೆರೆಕಂಡು ಯಶ್ ಅವರನ್ನು ಎತ್ತರಕ್ಕೇರಿಸಿದೆ. ಇದೀಗ Ormax ಸಂಸ್ಥೆಯು ರಿಲೀಸ್ ಮಾಡಿರುವ ಟಾಪ್ 10 ಹೀರೋಗಳ ಪಟ್ಟಿಯಲ್ಲಿ ಯಶ್ ಅವರು 5 ನೇ ಸ್ಥಾನದಲ್ಲಿದ್ದು ಕನ್ನಡ ಚಿತ್ರರಂಗದ ಹಿರಿಮೆಯನ್ನು ಸಾರಿದೆ.ಬಾಲಿವುಡ್ ನಟರನ್ನು ಹಿಂದಿಕ್ಕಿದ ಯಶ್ ನಟನೆಗೆ ಅಭಿಮಾನಿಗಳು ಖುಷ್ ಆಗಿದ್ದು ಹೆಚ್ಚೆಚ್ಚು ಸಿನಿಮಾಗಳನ್ನು ನೋಡಲು ಹಾತೊರೆಯುತ್ತಿದ್ದಾರಂತೆ.

ಈ ಪಟ್ಟಿಯಲ್ಲಿ ದಳಪತಿ ವಿಜಯ್ ವೊದಲ ಸ್ಥಾನದಲ್ಲಿದ್ದು, ಬಾಹುಬಲಿ ಪ್ರಖ್ಯಾತಿಯ ಪ್ರಭಾಸ್ ಎರಡನೇ ಸ್ಥಾನದಲ್ಲಿದ್ದಾರೆ. ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಇವರಿಗೆ ಹೆಚ್ಚು ವೋಟ್ ಬಿದ್ದಿದ್ದು ವೊದಲೆರಡು ಸ್ಥಾನವನ್ನು ಕಾಯ್ದಿರಿಸಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ಜ್ಯೂನಿಯರ್ ಎನ್.ಟಿ.ಆರ್. ಮತ್ತು ನಾಲ್ಕನೆಯ ಸ್ಥಾನದಲ್ಲಿ ಪುಷ್ಪ ಚಿತ್ರದ ಅಲ್ಲು ಅರ್ಜುನ್ ಇದ್ದಾರೆ. 5 ನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು 6 ನೇ ಸ್ಥಾನದಲ್ಲಿ ನಟ ಅಕ್ಷಯ್ ಕುಮಾರ್ ಇದ್ದಾರೆ. 7 ರಲ್ಲಿ ರಾಮ್ಚರಣ್, 8 ರಲ್ಲಿ ಮಹೇಶ್ ಬಾಬು, 9 ರಲ್ಲಿ ನಟ ಸೂರ್ಯ ಹಾಗೂ10 ರಲ್ಲಿ ಅಜಿತ್ ಕುಮಾರ್ ಇದ್ದಾರೆ.

Leave a Comment

error: Content is protected !!