ಟ್ವಿಟರ್ ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಭಾರತೀಯ ಸಿನಿಮಾಗಳು ಯಾವುವು ಗೊತ್ತಾ? ಟಾಪ್ 5 ಸ್ಥಾನದಲ್ಲಿ ಇರೋ ನಮ್ಮ ಕನ್ನಡದ ಹೆಮ್ಮೆಯ ಸಿನಿಮಾ ಯಾವುದು ನೋಡಿ

ಈ ವರ್ಷ ಹಲವಾರು ಚಿತ್ರಗಳು ಬಿಡುಗಡೆಯಾಗಿದ್ದು ಪ್ರತಿಷ್ಠಿತ ಸೋಶಿಯಲ್ ಮೀಡಿಯಾ ಫ್ಲಾಟ್ ಫಾರ್ಮ್ ಆಗಿರುವ ಟ್ವಿಟರ್ ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ಅಥವಾ ಹೆಚ್ಚು ಮೆನ್ಷನ್ ಆಗಿರುವ ಭಾರತದ ಚಿತ್ರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

5ನೇ ಸ್ಥಾನದಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸೂಪರ್ ಹಿಟ್ ಸಿನಿಮಾ ಸರ್ಕಾರು ವಾರಿ ಪಾಠ ಇದೆ. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೂಡ ಸಖತ್ ಸೌಂಡ್ ಮಾಡಿದೆ.

ನಾಲ್ಕನೇ ಸ್ಥಾನದಲ್ಲಿ ರಾಜ ಮೌಳಿ ನಿರ್ದೇಶನದ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ನಾಯಕರಾಗಿ ನಟಿಸಿರುವ ಸೂಪರ್ ಹಿಟ್ ಸಿನಿಮಾ ಆರ್ ಆರ್ ಆರ್ ಕಾಣಿಸಿಕೊಳ್ಳುತ್ತದೆ. ಸಾವಿರ ಕೋಟಿಗೂ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿರುವ ಹೆಗ್ಗಳಿಕೆ ಈ ಸಿನಿಮಾಗಿದೆ.

ಮೂರನೇ ಸ್ಥಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಸೂಪರ್ ಹಿಟ್ ಸಿನಿಮಾ ಕೆಜಿಎಫ್ ಚಾಪ್ಟರ್ 2 ಇದೆ. ಇದು ಒಟ್ಟಾರೆಯಾಗಿ 1250 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಎರಡನೇ ಸ್ಥಾನದಲ್ಲಿ ಲೋಕೇಶ್ ಕನಕ ರಾಜ್ ನಿರ್ದೇಶನದ ಉಳೆಗನಯಗನ್ ಕಮಲ್ ಹಾಸನ್ ನಾಯಕನಾಗಿ ನಟಿಸಿರುವ ವಿಕ್ರಂ ಸಿನಿಮಾ ಇದೆ. ತಮಿಳು ಚಿತ್ರರಂಗದ ಈ ವರ್ಷದ ಅತ್ಯಂತ ಹೆಚ್ಚು ಕಲೆಕ್ಷನ್ ಮಾಡಿರುವ ಸಿನಿಮಾ ಇದಾಗಿದೆ.

ಮೊದಲನೇ ಸ್ಥಾನದಲ್ಲಿ ತಮಿಳು ಚಿತ್ರರಂಗದ ತಲಪತಿ ವಿಜಯ್ ನಟನೆಯ ಬೀಸ್ಟ್ ಸಿನಿಮಾ ಇದೆ. ಪೂಜಾ ಹೆಗ್ಡೆ ನಾಯಕಿಯಾಗಿ ಹಾಗೂ ನೆಲ್ಸನ್ ಅವರ ನಿರ್ದೇಶನ ಇರುವ ಈ ಸಿನಿಮಾ ಕೆಜಿಎಫ್ ಚಾಪ್ಟರ್ 2 ಸಿನಿಮಾದ ವಿರುದ್ಧವಾಗಿ ಬಿಡುಗಡೆಯಾಗಿತ್ತು ಹಾಗೂ ಟ್ವಿಟರ್ ನಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾದ ಸಿನಿಮಾ ಇದಾಗಿದೆ.

Leave a Comment

error: Content is protected !!