Kantara 2: ರಿಷಬ್ ಶೆಟ್ಟಿ ಅವರ ಕಾಂತರಾ 2 ಸಿನಿಮಾದಲ್ಲಿ ರಜನಿಕಾಂತ್! ಇದು ನಿಜಾನಾ?
Rajinikanth ಕಾಂತಾರ(Kantara) ಸಿನಿಮಾ ಯಾವ ರೀತಿಯಲ್ಲಿ ಯಶಸ್ಸನ್ನು ಪಡೆದಿದೆ ಎನ್ನುವುದಕ್ಕೆ ವಿಶೇಷವಾಗಿ ವ್ಯಾಖ್ಯಾನ ಕೊಟ್ಟು ವಿವರಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಯಾಕೆಂದರೆ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ 450 ಕೋಟಿ ಅಧಿಕ ಕಲೆಕ್ಷನ್ ಅನ್ನು ಕೆಲವೇ ದಿನಗಳಲ್ಲಿ ಮಾಡಿ ಮುಗಿಸುತ್ತದೆ ಎಂಬ ಚಿಕ್ಕ ಅಂದಾಜು ಕೂಡ ಯಾರೊಬ್ಬರಿಗೂ ಇರಲಿಲ್ಲ.
ಇದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಒಂದು ಅದ್ಭುತ ಸಿನಿಮಾ ಎಂದು ಎರಡನೇ ಮಾತಿಲ್ಲದೆ ನೇರವಾಗಿ ಹೇಳಬಹುದಾಗಿದೆ. ಕಲಾವಿದರ ನಟನೆ ಸಿನಿಮಾದ ಕಥೆಯಿಂದ ಹಿಡಿದು ಅದ್ಭುತ ಮೇಕಿಂಗ್(Marvellous making) ಹಾಗೂ ಅದನ್ನು ಪ್ರೇಕ್ಷಕರು ಎದುರು ಕರೆತಂದಿರುವ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬರು ಮೂಕ ವಿಸ್ಮಿತರಾಗುವಂತೆ ಮಾಡಿದೆ. ಪ್ರತಿಯೊಂದು ವರ್ಗದ ಅಭಿಮಾನಿಗಳು ಕುಟುಂಬದ ಜೊತೆಗೆ ಕುಳಿತು ನೋಡುವಂತಹ ಸಿನಿಮಾ ಇದಾಗಿದೆ.

ಇನ್ನು ಇತ್ತೀಚಿಗಷ್ಟೇ ಶತದಿನೋತ್ಸವವನ್ನು ಪೂರೈಸಿದ ನಂತರ ಕಾಂತಾರ 2 ಸಿನಿಮಾವನ್ನು ಅಧಿಕೃತವಾಗಿ ಮಾಡಲಿದ್ದೇವೆ ಎನ್ನುವ ಘೋಷಣೆಯನ್ನು ರಿಷಬ್ ಶೆಟ್ಟಿ(Rishab Shetty) ಮಾಡಿದ್ದರು. ಆದರೆ ಇತ್ತೀಚಿಗಷ್ಟೇ ರಜನಿಕಾಂತ್(Rajinikanth) ಅವರು ಕೂಡ ಕಾಂತಾರ 2(Kantara 2) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಬಲವಾಗಿ ಹರಡುತ್ತಿವೆ. ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ತಿಳಿಯೋಣ ಬನ್ನಿ.
ಕಾಂತಾರ ಸಿನಿಮಾದ ತಮಿಳು ಅವತಾರಣಿಕೆಯ ಯಶಸ್ಸಿನ ನಂತರ ರಜನಿಕಾಂತ್(Rajinikanth) ಅವರನ್ನು ಭೇಟಿಯಾಗಲು ಹೋಗಿದ್ದ ಸಂದರ್ಭದಲ್ಲಿ ಈ ವಿಚಾರ ಗಾಳಿ ಸುದ್ದಿಯಾಗಿ ಹರಡಲು ಆರಂಭವಾಗಿತ್ತು. ಈಗ ಈ ಗಾಳಿ ಸುದ್ದಿಗೆ ರೆಕ್ಕೆ ಪುಕ್ಕ ಕಟ್ಟಿ ಎಲ್ಲಾ ಕಡೆ ಹರಿದಾಡುವಂತೆ ಕೆಲವರು ಮಾಡುತ್ತಿದ್ದಾರೆ. ಆದರೆ ಬಲ್ಲ ಮೂಲಗಳ ಪ್ರಕಾರ ಹೇಳುವುದಾದರೆ ರಜನಿಕಾಂತ್ ರವರು ಕಾಂತಾರ 2(Kantara 2) ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಚಾರ ಸತ್ಯಕ್ಕೆ ದೂರವಾಗಿರುವಂತಹ ಮಾತಾಗಿದೆ. ಬಹುತೇಕ ಕಾಂತಾರ ಚಿತ್ರದ ಎರಡನೇ ಭಾಗದಲ್ಲಿ ಕನ್ನಡದ ನಟರೆ ಇರುವಂತಹ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.