Kriti Shetty: ಕಾಂಪಿಟೇಶನ್ ಇದೆ ಎಂದು ಮಂಗಳೂರು ಮೂಲದ ತೆಲುಗು ನಟಿ ಕೃತಿ ಶೆಟ್ಟಿ ಮಾಡಿದ್ದೆನು ಗೊತ್ತಾ? ನಿಜಕ್ಕೂ ಶಾ’ ಕಿಂಗ್.

Krithi Shetty ರಶ್ಮಿಕ ಮಂದಣ್ಣ ಅವರ ನಂತರ ಕರ್ನಾಟಕ ಮೂಲದ ಮತ್ತೊಬ್ಬ ನಟಿ ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದ್ದಾರೆ ಎಂದರೆ ಅದು ಕರಾವಳಿ ಮೂಲದ ಯುವ ಉದಯೋನ್ಮುಖ ನಟಿಯಾಗಿರುವ ಕೃತಿ ಶೆಟ್ಟಿ. ಉಪ್ಪೇನಾ(Uppena) ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಡುವ ಇವರು ಇಂದು ಸಾಕಷ್ಟು ಸ್ಟಾರ್ ನಟರೊಂದಿಗೆ ನಟಿಸುವ ಮೂಲಕ ಚಿತ್ರರಂಗದಲ್ಲಿ ಟಾಪ್ ನಾಯಕ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಕೇವಲ 19 ವರ್ಷ ವಯಸ್ಸಿನ ನಟಿ ಕೃತಿ ಶೆಟ್ಟಿ(Krithi Shetty Telugu Actress) ಎಂದು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಬಹುಬೇಡಿಕೆಯ ನಾಯಕ ನಟಿಯಾಗಿ ಗುರುತಿಸಿಕೊಂಡಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿ ಕೊಳ್ಳಬೇಕಾಗಿರುವಂತಹ ವಿಚಾರ. ಆದರೆ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ಕಾಂಪಿಟೇಶನ್ ಹೆಚ್ಚಾಗಿದೆ ಎಂದು ಅವರು ಮಾಡಲು ಹೊರಟಿರುವ ಕೆಲಸ ನೋಡಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ.

krithi Shetty

ಕೃತಿ ಶೆಟ್ಟಿ ತಮ್ಮ ಮೊದಲ ಸಿನಿಮಾ ಆಗಿರುವ ಉಪ್ಪೇನ ಸಿನಿಮಾಗಾಗಿ 6 ಲಕ್ಷ ರೂಪಾಯಿ ಸಂಬವನೆಯನ್ನು ಪಡೆದಿದ್ದರು. ಅದಾದ ನಂತರ ನಟ ನಾನಿ(Nani Actor) ಅವರ ಜೊತೆಗೆ ಶ್ಯಾಮ ಸಿಂಗರಾಯ(Shyama Singha Roy) ಸಿನಿಮಾದಲ್ಲಿ ನಟಿಸಲು 60 ಲಕ್ಷ ಸಂಭಾವನೆಯನ್ನು ಪಡೆಯುತ್ತಾರೆ. ಎರಡನೇ ಸಿನಿಮಾಗೆ ಅವರ ಸಂಭಾವನೆ 10 ಪಟ್ಟು ಹೆಚ್ಚಳವಾಗುತ್ತದೆ. ಇದಾದ ನಂತರ ಚಿತ್ರರಂಗದಲ್ಲಿ ಅವರ ಸಂಭಾವನೆ ಒಂದು ಸಿನಿಮಾಗೆ ಒಂದು ಕೋಟಿ ರೂಪಾಯಿ ಇತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ತೆಲುಗು ಚಿತ್ರರಂಗದಲ್ಲಿ ನಾಯಕ ನಟಿಯರ ನಡುವೆ ಕಾಣಿಸಿಕೊಳ್ಳುತ್ತಿರುವ ಕಾಂಪಿಟೇಶನ್ ನಿಂದ ಬಚಾವ್ ಆಗಲು ಕೃತಿ ಶೆಟ್ಟಿ(Krithi Shetty) ಮತ್ತೆ ತಮ್ಮ ಸಂಭಾವನೆಯನ್ನು ಒಂದು ಕೋಟಿ ರೂಪಾಯಿಯಿಂದ 60 ಲಕ್ಷ ರೂಪಾಯಿಗೆ ಇಳಿಸಿಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅದೇನೇ ಇರಲಿ 19 ವರ್ಷ ವಯಸ್ಸಿಗೆ ಚಿತ್ರರಂಗದಲ್ಲಿ ಸಂಚಲನವನ್ನು ಸೃಷ್ಟಿಸುತ್ತಿರುವ ಕೃತಿ ಶೆಟ್ಟಿ ಅವರ ಪ್ರತಿಭೆಗೆ ನಾವು ಸಲಾಂ ಹೊಡೆಯಲೇಬೇಕು.

Leave A Reply

Your email address will not be published.