ಸಂಗಾತಿ ಬೇಕನಿಸುತ್ತೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ ಖ್ಯಾತ ನಟಿ.

Telugu actress Pragathi statement: ಈ ತಲೆಬರಹವನ್ನು ( Heading ) ನೋಡಿದ ಮೇಲೆ ಖಂಡಿತವಾಗಿ ಆ ನಟಿ ಯಾರಿರಬಹುದು ಎನ್ನುವುದಾಗಿ ನೀವು ತುಂಬಾನೇ ಕುತೂಹಲದಿಂದ ಕಾಯುತ್ತಿರುತ್ತೀರಿ. ಈ ರೀತಿ ಹೇಳಿಕೆ ನೀಡಿರುವುದು ಹಾಗೂ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಪ್ರಗತಿ ಅವರ ಕುರಿತಂತೆ. ಕ್ಯಾರೆಕ್ಟರ್ ಆರ್ಟಿಸ್ಟ್ ( Character Artist ) ಆಗಿ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಬಹು ಬೇಡಿಕೆ ನಟಿಯಾಗಿ ಕಾಣಿಸಿಕೊಂಡಿದ್ದಾರೆ.

ತೆಲುಗು ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೂ ಪ್ರಗತಿ ಅವರು ಕಾಣಿಸಿಕೊಂಡಿದ್ದು ಈಗಾಗಲೇ ಹಲವಾರು ವರ್ಷಗಳ ಹಿಂದೆಯೇ ಅವರು ತಮ್ಮ ಪತಿಯಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇನ್ನು ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ( Social Media ) ಕೂಡ ಸಖತ್ ಸಕ್ರಿಯರಾಗಿದ್ದು ಆಗಾಗ ತಮ್ಮ ಖಾಸಗಿ ಹಾಗೂ ಸಿನಿಮಾ ಜೀವನದ ವಿಡಿಯೋ ಹಾಗೂ ಫೋಟೋಗಳನ್ನು ಅಪ್ಲೋಡ್ (Upload) ಮಾಡುತ್ತಲೇ ಇರುತ್ತಾರೆ.

Telugu Actress Pragathi
Telugu Actress Pragathi

ಪ್ರಗತಿ ಅವರ ಪತಿ ಐಟಿ ಉದ್ಯಮದಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿ ಆಗಿದ್ದರು. ಇವರಿಬ್ಬರು ಪ್ರೀತಿಸಿ ಮದುವೆಯಾಗಿ ಇಬ್ಬರು ಮಕ್ಕಳ ಪೋಷಕರಾಗಿದ್ದರು. ಆದರೆ ಇವರಿಬ್ಬರ ನಡುವೆ ಬಂದಂತಹ ಮನಸ್ತಾಪಗಳಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡಿದ್ದರು. ಈಗ ಒಂಟಿ ತಾಯಿಯಾಗಿ ತಮ್ಮ ಮಕ್ಕಳನ್ನು ನೋಡಿಕೊಂಡು ಸಿನಿಮಾ ರಂಗದಲ್ಲಿ ಕೂಡ ಸಕ್ರಿಯರಾಗಿದ್ದಾರೆ. ಇನ್ನು ಇತ್ತೀಚಿಗಷ್ಟೇ ಸಂದರ್ಶನ ( Interview ) ಒಂದರಲ್ಲಿ ಎರಡನೆಯ ಮದುವೆ ಕುರಿತಂತೆ ಇವರು ಆಡಿರುವ ಹಾಗೂ ಇವರ ಮನಸ್ಸಿನಲ್ಲಿರುವ ವಿಚಾರಗಳನ್ನು ಹೇಗೆ ತಿಳಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ನಟಿ ಪ್ರಗತಿಯವರು ಈಗಲೂ ಕೂಡ ನನಗೆ ನನ್ನ ಜೀವನದಲ್ಲಿ ಸಂಗಾತಿ ಇದ್ದರೆ ಚೆನ್ನಾಗಿರುತ್ತಿತ್ತು ಎಂಬುದಾಗಿ ಭಾವನೆ ಇದೆ ಆದರೆ ಅದರ ಕುರಿತಂತೆ ಜನರಿಗೆ ವಿಭಿನ್ನ ಅಭಿಪ್ರಾಯಗಳು ಮೂಡಿ ಬರಬಹುದು ಹಾಗೂ ಮೊದಲಿನಂತೆ ನಾನು ಈಗ ಇಲ್ಲ ಅವರ ಜೊತೆಗೆ ಅಡ್ಜಸ್ಟ್ ( Adjust ) ಮಾಡಿಕೊಂಡು ಹೋಗಲು ಕೂಡ ಸಾಧ್ಯವಾಗದೇ ಇರಬಹುದು ಹೀಗಾಗಿ ಅದರ ಬಗ್ಗೆ ಅಷ್ಟೊಂದು ಯೋಚಿಸಿಲ್ಲ ಹಾಗೂ ಮಾಡಿಕೊಳ್ಳುವ ಆಲೋಚನೆ ಇಲ್ಲ ಎಂಬುದಾಗಿ ಹೇಳಿದ್ದಾರೆ. ಪ್ರಗತಿಯವರ ಹೇಳಿಕೆಯನ್ನು ನೋಡಿ ಜನರು ಕೂಡ ಆಶ್ಚರ್ಯಪಟ್ಟಿದ್ದಾರೆ ಎನ್ನುವುದು ಸುಳ್ಳಲ್ಲ.

Leave a Comment

error: Content is protected !!