Kiccha Sudeep: ಕಬ್ಜಾ ಸಿನಿಮಾದಲ್ಲಿ ಕಿಚ್ಚ ಸುದೀಪ್ ಪಾತ್ರ ನೋಡಿ ಅಭಿಮಾನಿಗಳು ಆಕ್ರೋಶ! ಸಂಕಷ್ಟದಲ್ಲಿ ಕಿಚ್ಚ ಸುದೀಪ್?

Kabzaa ಕಬ್ಜಾ ಸಿನಿಮಾ(Kabzaa Movie) ಈಗಾಗಲೇ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಹೇಗಿದ್ದರೂ ಕೂಡ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಬಿಡುಗಡೆ ಆದ ನಂತರ ಈಗ ಅಭಿಮಾನಿಗಳಲ್ಲಿ ಕೂಡ ಕೆಲವೊಂದು ಅಪಸ್ವರಗಳು ಎದ್ದು ಕಾಣುತ್ತಿವೆ. ಸಿನಿಮಾವನ್ನು ನೋಡಿದ ನಂತರ ಇದು ಹೆಚ್ಚಾಗಿದ್ದು ಅದರಲ್ಲೂ ವಿಶೇಷವಾಗಿ ಕಿಚ್ಚ ಸುದೀಪ್(Kiccha Sudeep) ಅಭಿಮಾನಿಗಳು ಈ ಕುರಿತಂತೆ ಸುದ್ದಿ ಆಗುತ್ತಿದ್ದಾರೆ.

ಹೌದು ಮಿತ್ರರೇ ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಕೇವಲ ಅವರಷ್ಟೇ ಮಾತ್ರವಲ್ಲದೆ ಅತಿಥಿ ಪಾತ್ರದಲ್ಲಿ ಅಥವಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಶಿವಣ್ಣ(Shivanna) ಹಾಗೂ ಕಿಚ್ಚ ಸುದೀಪ್ ಕೂಡ ಈ ಸಿನಿಮಾದಲ್ಲಿ ಸಕ್ಕತ್ ಸುದ್ದಿಯಲ್ಲಿದ್ದಾರೆ. ಅದರಲ್ಲೂ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕಿಚ್ಚ ಸುದೀಪ್ ರವರ ಬಗ್ಗೆ.

ಹೌದು ಮಿತ್ರರೇ ಕಿಚ್ಚ ಸುದೀಪ್ ರವರು ಭಾರ್ಗವ್ ಭಕ್ಷಿ(Bhargav Bakshi) ಎನ್ನುವ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದು ಕಿಚ್ಚ ಸುದೀಪ್ ಅಭಿಮಾನಿಗಳ ಅಸಮಾಧಾನ ಕ್ಕೆ ಕೂಡ ಕಾರಣವಾಗಿದ್ದು ಅದರಲ್ಲೂ ವಿಶೇಷವಾಗಿ ಸಿನಿಮಾ ನೋಡಿದ ನಂತರ ಈ ಅಸಮಾಧಾನ ಎನ್ನುವುದು ಭುಗಿಲೆದ್ದಿದೆ ಎಂದು ಹೇಳಬಹುದಾಗಿದೆ.

ಹೌದು ಗೆಳೆಯರೇ, ಸಿನಿಮಾದಲ್ಲಿ ಕಿಚ್ಚ ಸುದೀಪ್(Kiccha Sudeep ) ರವರ ಪಾತ್ರ ಮೆಚ್ಚುಗೆಗೆ ಒಳಗಾಗಿದ್ದ ನಿಜ ಆದರೆ ಅದು ಅಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿಲ್ಲ ನಮ್ಮದೇ ಭಾಷೆಯಲ್ಲಿ ಸಹ ನಟನಾಗಿ ನಟಿಸಲು ಇನ್ನು ಮುಂದೆ ಹೋಗಬೇಡಿ ಎಂಬುದಾಗಿ ಅಭಿಮಾನಿಗಳು ಕಿಚ್ಚ ಸುದೀಪ್ ಅವರಲ್ಲಿ ಮನವಿ ಮಾಡಿದ್ದಾರೆ. ನೀವು ನಮ್ಮೆಲ್ಲರ ನೆಚ್ಚಿನ ನಾಯಕನ ಪಾತ್ರವನ್ನೇ ಮಾಡಿ ಎಂಬುದಾಗಿ ಕೂಡ ಮನವಿ ಮಾಡಿಕೊಂಡಿದ್ದಾರೆ.

Leave a Comment

error: Content is protected !!