ಉಪೇಂದ್ರ ಮತ್ತು ಶಿವಣ್ಣ ಜೋತೆ ನಟಿಸಿದ್ದ ಪ್ರೀತ್ಸೇ ಚಿತ್ರದ ಹೀರೋಯಿನ್ ಗೆ ಬಂದ ಪರಿಸ್ಥಿತಿ ಬೇರಾವ ನಟಿ ಗೂ ಬರೋದು ಬೇಡ

ನಮ್ಮ ಜೀವನದ ದಿಕ್ಕು ಯಾವಾಗ ಬದಲಾಗುತ್ತದೆ ಅಂತ ಯಾರಿಗೂ ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ. ಬಡವನೇ ಇರಲಿ ಶ್ರೀಮಂತನೇ ಆಗಿರಲಿ ಕಷ್ಟಗಳು ಪ್ರತಿಯೊಬ್ಬರಿಗೂ ಬರುತ್ತೆ. ಮನುಷ್ಯನಿಗೆ ಕಷ್ಟಗಳನ್ನು ಎದುರಿಸುವಂಥ ಆತ್ಮಶಕ್ತಿ ಇರಬೇಕು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ದೊಡ್ಡ ದೊಡ್ಡ ರೋಗಗಳಿಗೆ ತುತ್ತಾದ ಹಲವು ಉದಾಹರಣೆಗಳಿವೆ. ನಟಿ ಸೋನಾಲಿ ಬೇಂದ್ರೆ ಅವರ ಜೀವನವೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ .

ನಟಿ ಸೋನಾಲಿ ಬೇಂದ್ರೆ ಅವರ ಹೆಸರು ನಿಮಗೆ ನೆನಪಿಲ್ಲ ಅನ್ಸುತ್ತೆ. ಪ್ರೀತ್ಸೆ ಚಿತ್ರದ ಹೀರೋಯಿನ್ ಎಂದರೆ ನಿಮಗೆಲ್ಲಾ ಇವರ ನೆನಪು ಬರುತ್ತೆ. ಉಪೇಂದ್ರ ಮತ್ತು ಶಿವಣ್ಣ ಅವರ ಒಟ್ಟಿಗೆ ಸೋನಾಲಿ ಬೇಂದ್ರೆ ಅವರು ನಟನೆ ಮಾಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಿಂದ ತಮ್ಮ ವೃತ್ತಿಜೀವನವನ್ನು ಇವರು ಪ್ರಾರಂಭಿಸಿದ್ದರು. ತದನಂತರ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹಿಂದಿ ಕನ್ನಡ ತಮಿಳು ತೆಲುಗು ಮರಾಠಿ ಚಿತ್ರಗಳಲ್ಲಿ ಇವರು ಅಭಿನಯಿಸುವ ಮೂಲಕ ಬಹುಬೇಡಿಕೆಯ ನಟಿಯಾಗಿ ಮಿಂಚಿದರು.

ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಂಡ ಸೋನಾಲಿ ಬೇಂದ್ರೆ ಅವರಿಗೆ ವೈಯಕ್ತಿಕ ಜೀವನದಲ್ಲಿ ದೊಡ್ಡದಾದ ಸಂಕಷ್ಟ ಎದುರಾಗುತ್ತೆ. ಸೋನಾಲಿ ಬೇಂದ್ರೆ ಅವರಿಗೆ ಈಗ 45 ವರ್ಷ ವಯಸ್ಸಾಗಿದೆ. 2018 ರಲ್ಲಿ ದುರದೃಷ್ಟವಶಾತ್ ಸೋನಾಲಿ ಬೇಂದ್ರೆ ಅವರು ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದಾರೆ. ಸತತ 2 ವರ್ಷಗಳ ಕಾಲ ಇವರು ಕ್ಯಾನ್ಸರ್ ರೋಗದ ವಿರುದ್ಧ ಹೋರಾಟ ನಡೆಸಿದ್ದಾರೆ. ಆದರೆ ಇವರ ಈಗಿನ ಪರಿಸ್ಥಿತಿ ಹೇಗಿದೆ ಗೊತ್ತಾ ನಿಜಕ್ಕೂ ನಿಮಗೆ ಆಶ್ಚರ್ಯವಾಗುತ್ತೆ.

ಕ್ಯಾನ್ಸರ್ ಬಂದರೆ ಮನುಷ್ಯ ಬದುಕುವುದೇ ಅನುಮಾನ. ಹಣ ಆಸ್ತಿ ಇದ್ದರೂ ಕೂಡ ಈ ರೋಗದಿಂದ ಬಚಾವ್ ಆಗುವುದು ಸುಲಭದ ಮಾತಲ್ಲ. ಜಗತ್ತಿನಲ್ಲಿ ಕೆಲವೇ ಅದೃಷ್ಟವಂತರು ಮಾತ್ರ ಈ ರೋಗದಿಂದ ವಾಸಿ ಆಗುತ್ತಾರೆ. ಹಣ ಇದ್ದರೆ ಮಾತ್ರ ರೋಗದಿಂದ ನಿವಾರಣೆ ಪಡೆಯಲು ಸಾಧ್ಯವಿಲ್ಲ ನಮಗೆ ಆತ್ಮಬಲ ಮತ್ತು ಆತ್ಮಸ್ಥೈರ್ಯ ಬೇಕು. ನಟಿ ಸೋನಾಲಿ ಬೇಂದ್ರೆಗೆ ಕ್ಯಾನ್ಸರ್ ರೋಗ ಇದೆಯೆಂದು ತಿಳಿದ ತಕ್ಷಣವೇ ಇವರು ಸ್ವಲ್ಪ ಕೂಡ ಕುಗ್ಗಲಿಲ್ಲ. ಆತ್ಮ ವಿಶ್ವಾಸ ಕಳೆದುಕೊಂಡಿಲ್ಲ. ಬದಲಾಗಿ ಅದರ ವಿರುದ್ಧ ಹೇಗೆ ಹೋರಾಡುವ ಮನೋಬಲವನ್ನು ಅಳವಡಿಸಿಕೊಂಡರು.

ರೋಗ ಬಂದ ತಕ್ಷಣ ಸೋನಾಲಿಯವರು ವಿದೇಶಕ್ಕೆ ಹಾರಿ ಹೋಗಿದ್ದಾರೆ. ನ್ಯೂಯಾರ್ಕ್ ಗೆ ಹೋಗಿ ಟ್ರೀಟ್ ಮೆಂಟ್ ಪಡೆದಿದ್ದಾರೆ. ಸತತ 6 ತಿಂಗಳುಗಳ ಕಾಲ ಆಸ್ಪತ್ರೆಯಲ್ಲೇ ಇದ್ದು ಅತ್ಯಾಧುನಿಕ ಚಿಕಿತ್ಸೆಗಳನ್ನು ಪಡೆದಿದ್ದಾರೆ. ಸೋನಾಲಿ ಬೇಂದ್ರೆ ಅವರು ಹೇಳುವ ಪ್ರಕಾರ ಧನಾತ್ಮಕ ಚಿಂತನೆ ಮತ್ತು ಆತ್ಮಸ್ಥೈರ್ಯದಿಂದಲೇ ನಾನು ಈ ರೋಗದ ವಿರುದ್ಧ ಹೋರಾಡುತ್ತೇನೆ ಮತ್ತು ಇದೀಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಈ ಒಂದು ರೋಗ ದಿಂದ ಸೋನಾಲಿ ಬೇಂದ್ರೆ ಯವರ ಸೌಂದರ್ಯವೇ ಹಾಳಾಗಿತ್ತು ಆದರೂ ಕೂಡ ಸೋನಾಲಿ ಇದ್ಯಾವುದಕ್ಕೂ ಚಿಂತೆ ಮಾಡಿಲ್ಲ. ಇನ್ನು ಮುಂದೆ ತಾನು ನಟನೆಯನ್ನೇ ಮಾಡೋದಿಕ್ಕೆ ಸಾಧ್ಯವಿಲ್ಲ ಎಂದು ಹಲವಾರು ಜನರು ಅಂದುಕೊಂಡಿದ್ದರು ಆದರೆ ಈ ರೋಗದ ವಿರುದ್ಧ ಹೋರಾಡಿ ಗೆದ್ದು ಇದೀಗ ಸೋನಾಲಿ ಮತ್ತೆ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ ತಮ್ಮ ಹಳೆಯ ಸೌಂದರ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಛಲ ಇದ್ದರೆ ಧನಾತ್ಮಕ ಮನೋಭಾವ ಇದ್ದರೆ ಜೀವನದಲ್ಲಿ ಎಂಥ ಕಷ್ಟ ಬಂದರೂ ಕೂಡ ನಮ್ಮ ಕಡೆ ಇರುತ್ತೆಂದು ಸೋನಾಲಿಯವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

Leave a Comment

error: Content is protected !!