Shivanna: ಶಿವಣ್ಣನ ಮನೆಯಲ್ಲಿ ಆಗ್ತಿದೆ ರಾಜಕೀಯ ಪ್ರವೇಶ! ರಾಜಕೀಯ ಬೇಡ ಎಂದ ಅಭಿಮಾನಿಗಳು.

Shivanna ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅಣ್ಣಾವ್ರ ಮಗನಾಗಿ ಅಣ್ಣ ಅವರಿಗೆ ಒಳ್ಳೆಯ ಹೆಸರು ತರುವಂತ ಹಲವಾರು ಕೆಲಸಗಳನ್ನು ಕಳೆದ ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬಂದವರು ಹಾಗೂ ಅದಕ್ಕಾಗಿ ಅವರಿಗೆ ಇಂದು ಲಕ್ಷಾಂತರ ಅಭಿಮಾನಿಗಳಿದ್ದಾರೆ. ಯಾವತ್ತೂ ಕೂಡ ಅಣ್ಣಾವ್ರ ಮನೆ ರಾಜಕೀಯ ಕ್ಷೇತ್ರಕ್ಕೆ ಹೆಸರಾದಂತಹ ಮನೆ ಅಲ್ಲ.

ಆದರೆ ಈಗ ಮೊದಲ ಬಾರಿಗೆ ಶಿವಣ್ಣನ ಮನೆಯಲ್ಲಿ ರಾಜಕೀಯ ಪ್ರವೇಶ ನಡೆಯಲಿದೆ ಎನ್ನುವುದಾಗಿ ಸುದ್ದಿಗಳು ಕೇಳಿ ಬರುತ್ತಿದ್ದು. ಈ ಬಾರಿಯ ಚುನಾವಣೆಯಲ್ಲಿ ಖಂಡಿತವಾಗಿ ರಾಜಕೀಯ ಪ್ರವೇಶ ಆಗಲಿದೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಅದು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಮಿತ್ರರೇ, ರಾಜಕೀಯ ಪ್ರವೇಶ ಮಾಡುತ್ತಿರುವುದು ಶಿವಣ್ಣ(Shivanna) ಅಲ್ಲ ಬದಲಾಗಿ ಅವರ ಪತ್ನಿ ಆಗಿರುವಂತಹ ಗೀತಕ್ಕ(Geethakka). ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅವರ ಕಿರಿಯ ಸಹೋದರ ಆಗಿರುವಂತಹ ಮಧು ಬಂಗಾರಪ್ಪ ಹಾಗೂ ಬಿಜೆಪಿ ಪಕ್ಷದಿಂದ ಮತ್ತೊಬ್ಬ ಸಹೋದರ ಆಗಿರುವಂತಹ ಕುಮಾರ್ ಬಂಗಾರಪ್ಪ ಪರಸ್ಪರ ವಿರುದ್ಧವಾಗಿ ಸ್ಪರ್ಧಿಸುತ್ತಿದ್ದಾರೆ.

ಇದೇ ಕಾರಣಕ್ಕಾಗಿ ತಮ್ಮ ಕಿರಿಯ ಸಹೋದರ ಆಗಿರುವಂತಹ ಮಧು ಬಂಗಾರಪ್ಪ ಅವರಿಗೆ ಬೆಂಬಲವನ್ನು ನೀಡುವ ಸಲುವಾಗಿ ಗೀತಕ್ಕ(Geethakka) ಅವರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು ಇನ್ನು ಕೆಲವೇ ದಿನಗಳಲ್ಲಿ ಇದು ಅಧಿಕೃತವಾಗಿ ಘೋಷಣೆ ಕೂಡ ಆಗಲಿದೆ ಎಂಬುದಾಗಿದೆ.

Leave a Comment

error: Content is protected !!