Shivanna: ಕ್ರಿಸ್ ಗೇಲ್ ಸುರೇಶ್ ರೈನಾರನ್ನು ಬೋಲ್ಡ್ ಮಾಡಲು ರೆಡಿಯಾದ ಶಿವಣ್ಣ. ವೀಡಿಯೋ ವೈರಲ್.

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravatthy Shivanna) 35 ವರ್ಷಗಳಿಗಿಂತಲೂ ಅಧಿಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಕನ್ನಡ ಚಿತ್ರರಂಗದ ಲೀಡರ್ ಆಗಿ ಕಾಣಿಸಿಕೊಂಡವರು. ಮೂರು ಜನರೇಷನ್ ನಿಂದಲೂ ಕೂಡ ನಟಿಸಿಕೊಂಡು ಬರುತ್ತಿರುವ ಸ್ಟಾರ್ ನಟರಲ್ಲಿ ಸದ್ಯದ ಮಟ್ಟಿಗೆ ಶಿವಣ್ಣ(Shivanna) ಮಾತ್ರ ಕಂಡು ಬರಬಹುದು ಎಂದು ಹೇಳಬಹುದಾಗಿದೆ.

ಡ್ಯಾನ್ಸಿಂಗ್ ನಟನೆ ಸ್ಟಂಟ್ ಯಾವುದನ್ನೇ ಆಗಲಿ 65ರ ಈ ಹರೆಯದಲ್ಲೂ ಕೂಡ ನ್ಯಾಚುರಲ್ ಆಗಿ ಮಾಡುವಂತಹ ಏಕೈಕ ಕನ್ನಡ ಚಿತ್ರರಂಗದ ಸ್ಟಾರ್ ನಟ ಎಂದರೆ ಅದು ನಮ್ಮೆಲ್ಲರ ನೆಚ್ಚಿನ ಹ್ಯಾಟ್ರಿಕ್ ಹೀರೋ ಶಿವಣ್ಣ(Hattrick Hero Shivanna) ಅಲ್ಲದೆ ಬೇರೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ಇನ್ನು ಈಗ ಸದ್ಯಕ್ಕೆ ಶಿವಣ್ಣ ಕ್ರಿಸ್ ಗೇಲ್(Chris Gayle) ಹಾಗೂ ಸುರೇಶ್ ರೈನಾ(Suresh Raina) ಅವರನ್ನು ಬೋಲ್ಡ್ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

shivanna

ಇದೇನಪ್ಪಾ ಕ್ರಿಕೆಟ್ ಸ್ಟಾರ್ ಗಳಿಗೂ ಶಿವಣ್ಣನಿಗೂ ಏನು ಸಂಬಂಧ ಎಂಬುದಾಗಿ ನೀವು ಭಾವಿಸಬಹುದು. ಇದೇ ಫೆಬ್ರವರಿ ಅಂತ್ಯದಲ್ಲಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಸಾಗಿ ಬರುವಂತಹ ಕಿಚ್ಚ ಸುದೀಪ್(Kiccha Sudeep) ಮುಂದಾಳತ್ವದಲ್ಲಿ ಮೂಡಿ ಬರಲಿರುವ ಕೆಸಿಸಿ ಸೀಸನ್ 3(KCC Season 3) ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟಿಗರ ಜೊತೆಗೆ ಕನ್ನಡ ಚಿತ್ರರಂಗದ ನಟರು ಸೇರಿ ಕ್ರಿಕೆಟ್ ಆಡಳಿದ್ದು ಈಗಾಗಲೇ ದಿನಾಂಕ ಕೂಡ ನಿಗದಿಯಾಗಿದೆ. ಅದಕ್ಕಾಗಿಯೇ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ಗಳು ಕೂಡ ಕ್ರಿಕೆಟ್ ತರಬೇತಿಯಲ್ಲಿ ನಿರತರಾಗಿದ್ದಾರೆ.

ಇನ್ನು ಶಿವಣ್ಣನ ವಿಚಾರಕ್ಕೆ ಬರುವುದಾದರೆ ಕಳೆದ ಬಾರಿ ಕೂಡ ಅದ್ಬುತವಾಗಿ ಪರ್ಫಾರ್ಮೆನ್ಸ್ ನೀಡಿದ್ದ ಶಿವಣ್ಣ(Srk) ಈ ಬಾರಿ ಕೂಡ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದು ಆ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬೋರ್ಗರೆಯುತ್ತಿದೆ. ಎಲ್ಲರೂ ಕೂಡ ಈ ಹರಯದ ಲೋಕೇಟೆಗರು ಕೂಡ ನಾಚುವಂತೆ ಶಿವಣ್ಣ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಈ ಸಲ ಕಪ್ ನಮ್ದೇ ಅನ್ನೋದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಸಲ ಕೆಸಿಸಿ ಕಪ್(KCC Cup) ಅನ್ನು ಯಾರು ಗೆಲ್ತಾರೆ ಎಂಬುದನ್ನು ತಪ್ಪದೇ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ

Leave a Comment

error: Content is protected !!