KD Film: ಜೋಗಿ ಪ್ರೇಮ್ – ಧ್ರುವ ಸರ್ಜಾ ಕೆಡಿ ಫಿಲಂನಲ್ಲಿ ನಟಿಸೋದಕ್ಕೆ ಶಿಲ್ಪಾ ಶೆಟ್ಟಿ ಪಡೆಯುತ್ತಿರೋ ಸಂಭಾವನೆ ಕೇಳಿದ್ರೆ ನೀವು ಕೂಡ ಶಾ’ ಕ್ ಆಗ್ತೀರಾ!

Shilpa Shetty ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದ ಬಾಲಿವುಡ್ ಚಿತ್ರರಂಗದ ಬೆಡಗಿಯಾಗಿರುವ ಶಿಲ್ಪಾ ಶೆಟ್ಟಿ ಈಗ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಬಾಲಿವುಡ್(Bollywood) ನಲ್ಲಿ ಸಾಕಷ್ಟು ಬೇಡಿಕೆ ಇದ್ದರೂ ಕೂಡ ಕನ್ನಡವನ್ನು ಮರೆಯದೆ ಮತ್ತೆ ಮರಳಿ ಬಂದಿರುವ ಬಾಲಿವುಡ್ ಬೆಡಗಿಗೆ ದೊಡ್ಡ ಮಟ್ಟದಲ್ಲಿಯೇ ಸ್ವಾಗತ ಸಿಕ್ಕಿದೆ. ಪ್ರತಿಯೊಬ್ಬರೂ ಕೂಡ ಶಿಲ್ಪ ಶೆಟ್ಟಿ(Shilpa Shetty) ಅವರ ಕಂಬ್ಯಾಕ್ ನಿಂದಾಗಿ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಈಗಾಗಲೇ ಕನ್ನಡದಲ್ಲಿ ಒಂದು ಕಾಲದಲ್ಲಿ ಮೂರು ಸಿನಿಮಾಗಳನ್ನು ಮಾಡಿದ್ದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಶಿಲ್ಪ ಶೆಟ್ಟಿ ಜೋಗಿ ಪ್ರೇಮ್(Jogi Prem) ನಿರ್ದೇಶನದಲ್ಲಿ ಹಾಗೂ ಧ್ರುವ ಸರ್ಜಾ(Dhruva Sarja) ನಾಯಕ ನಟನಾಗಿ ಕಾಣಿಸಿಕೊಂಡಿರುವ ಕೆ.ಡಿ. ಸಿನಿಮಾದಲ್ಲಿ(KD Film) ಸತ್ಯವತಿ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಯುಗಾದಿ ಹಬ್ಬದ ಶುಭ ಸಂದರ್ಭದಂದು ತಿಳಿದು ಬಂದಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಸಾಕಷ್ಟು ವರ್ಷಗಳ ನಂತರ ಮತ್ತೊಮ್ಮೆ ಶಿಲ್ಪ ಶೆಟ್ಟಿ(Shilpa Shetty) ಅವರು ತಮ್ಮ ಮಾತ್ರ ಭಾಷೆಯ ಸಿನಿಮಾದಲ್ಲಿ ನಟಿಸುತ್ತಿರುವುದು ಅವರ ಕನ್ನಡದ ಅಭಿಮಾನಿಗಳಿಗೆ ಕೂಡ ಸಂತೋಷವನ್ನು ತಂದಿದೆ. ಇನ್ನು ಈ ಸಿನಿಮಾದಲ್ಲಿ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅವರು ಪಡೆಯುತ್ತಿರುವ ಸಂಭಾವನೆಯಷ್ಟು ಕೋಟಿ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ, ಈ ಬಹುನಿರೀಕ್ಷಿತ ಪಂಚಭಾಷೆ ಸಿನಿಮಾ ಆಗಿರುವ ಕೆಡಿ ಸಿನಿಮಾದಲ್ಲಿ ನಟಿಸಲು ಬಾಲಿವುಡ್ ಬೆಡಗಿ ಆಗಿರುವ ಶಿಲ್ಪಾ ಶೆಟ್ಟಿ(Actress Shilpa Shetty) ಅವರು ಭರ್ಜರಿ ಒಂದರಿಂದ ಎರಡು ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯಲಿದ್ದಾರೆ ಎಂಬುದಾಗಿ ಸುದ್ದಿ ತಿಳಿದು ಬಂದಿದೆ. ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎನ್ನುವುದನ್ನು ಕಾಯಲು ಸಿನಿಮಾದಿಂದ ಟ್ರೈಲರ್ ಬಿಡುಗಡೆ ಆದ ಮೇಲಷ್ಟೇ, ಈ ವಿಚಾರದ ಕುರಿತಂತೆ ಇನ್ನಷ್ಟು ವಿವರಗಳು ತಿಳಿದು ಬರಬೇಕಾಗಿದೆ.

Leave a Comment

error: Content is protected !!