ಜಗ್ಗೇಶ್ ಅವರ ಕಾರನ್ನು ಪಡೆದು ಹಿಂತಿರುಗಿಸದೆ ಸತಾಯಿಸಿದ ಸ್ಟಾರ್ ನಟ ಯಾರು ಗೊತ್ತಾ??ಯಾರೆಂದು ತಿಳಿದರೆ ನೀವು ಖಂಡಿತಾ ಶಾಕ್ ಆಗ್ತೀರಾ….

ಕೆಲವು ವಸ್ತುಗಳನ್ನು ಬೇರೆಯವರಲ್ಲಿ ನೋಡಿಯೋ ಅಥವಾ ಕೇಳಿಯೋ ಇಷ್ಟ ಪಟ್ಟಿರುತ್ತೇವೆ. ಅಂತಹ ವಸ್ತುಗಳನ್ನು ಖರೀದಿಸಿ ನಮ್ಮದಾಗಿಸಿಕೊಳ್ಳಲು ಪ್ರಯತ್ನ ಪಡುತ್ತೀರುತ್ತೇವೆ. ನಾವಿಷ್ಟಪಟ್ಟ ವಸ್ತುವನ್ನು ಆಪ್ತರು ಅಥವಾ ಸಂಬಂಧಿಗಳು ಬಂದು ಕೇಳಿದಾಗ ಇಲ್ಲವೆನ್ನಲಾಗದೆ ನೀಡಿರುತ್ತೇವೆ. ಕೆಲವೊಮ್ಮೆ ಪಡೆದುಕೊಂಡವರು ಅದನ್ನು ಹಿಂತಿರುಗಿಸಲು ಮರೆತು ಬಿಡುತ್ತಾರೆ. ಇಂತಹ ಸನ್ನಿವೇಶದಲ್ಲಿ ನಾವು ಅಡಗತ್ತರಿಯಲ್ಲಿ ಸಿಕ್ಕಂತಾಗುತ್ತೇವೆ.

ಕಲೆ ಎಲ್ಲರಲ್ಲೂ ಒಂದೆತರವಾಗಿ ಇರುವುದಿಲ್ಲ. ಜನರಲ್ಲಿ ಹೊಸ ಹೊಸ ಕಲೆಯನ್ನು ಕಂಡಾಗ ನಮಗೂ ಆ ಕಲೆ ಒಲಿಯಲಿ ಎಂದು ಆಸೆ ಪಡುತ್ತೇವೆ. ಹೀಗೆ ನವರಸ ನಾಯಕ ಜಗ್ಗೇಶ್ ಅವರಿಗೆ ನಟ ಶಶಿಕುಮಾರ್ ಅವರ ಅಭಿನಯ, ನೃತ್ಯವು ಬಹಳ ಇಷ್ಟವಾಗುತ್ತಿತ್ತಂತೆ. ‘ವಯಸ್ಸಿನಲ್ಲಿ ಕಿರಿಯರಾದ ಶಶಿಕುಮಾರ್ ಅವರಂತೆ ನಟಿಸಲು ಡಾನ್ಸ್ ಮಾಡಲು ನನಗೂ ಅವಕಾಶ ಕಲ್ಪಿಸಿಕೊಡಪ್ಪಾ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ’ ಎಂದು ಸ್ವತಃ ಜಗ್ಗೇಶ್ ಅವರೇ ಹೇಳಿಕೊಂಡಿದ್ದಾರೆ.

ಆಗಿನ ಕಾಲದಲ್ಲಿ ವಾಹನಗಳು ಇಂದಿನಷ್ಟಿರಲಿಲ್ಲ. ಯಾರು ಕಾರು ಜೀಪುಗಳ ಮೇಲೆ ಓಡಾಡುತ್ತಾರೊ ಅವರನ್ನೇ ಶ್ರೀಮಂತರು ಎಂದು ಭಾವಿಸುತ್ತಿದ್ದರು. ಕಾರು ಎಂಬುದು ಸಾಮಾನ್ಯ ಜನರಿಗೆ ಕೈಗೆಟುಕದ ವಾಹನವಾಗಿತ್ತು. ತಮ್ಮ ಪಂಚಿಂಗ್ ಡೈಲಾಗ್ಗಳಿಂದ ಜನಪ್ರಿಯರಾಗಿರುವ ನವರಸ ನಾಯಕ ಜಗ್ಗೇಶ್ ಅವರು ಕಾರನ್ನು ಖರೀದಿಸುವ ಕನಸಿನಿಂದ, ನಿರ್ಮಾಪಕರಲ್ಲಿ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಹಣದ ಬದಲಾಗಿ ಫೈನಾನ್ಸ್ ನಿಂದ ಒಂದು ಕಾರನ್ನು ಕೊಡಿಸುವಂತೆ ಕೇಳಿದರು. ಈ ರೀತಿಯಾಗಿ ಪಡೆದ ಕಾರಿನಲ್ಲಿ ಜಗ್ಗೇಶ್ ಹಾಗೂ ಅವರ ಪತ್ನಿ ಚಿತ್ರೀಕರಣದ ಸ್ಥಳಕ್ಕೆ ಖುಷಿಯಿಂದ ಬಂದು, ತಮ್ಮ ಆತ್ಮೀಯ ಗೆಳೆಯರಾದ ನಟ, ಶಶಿಕುಮಾರವರಲ್ಲಿ ಹೊಸದಾಗಿ ಕಾರುಕೊಂಡಿರುವ ವಿಷಯವನ್ನು ತಿಳಿಸಿದರಂತೆ.

ಶಶಿಕುಮಾರ್ ಅವರು ಒಂದು ಬಾರಿ ನಾನು ಕಾರನ್ನು ಓಡಿಸುತ್ತೇನೆ ಎನ್ನುತ್ತಾ ಜಗ್ಗೇಶ್ ಅವರಿಂದ ಕಾರನ್ನು ಪಡೆದು ರೈಡ್ ಹೋದರಂತೆ. ಎರಡು ದಿನವಾದರೂ ಕಾರಿನೊಂದಿಗೆ ಮರಳದ ಗೆಳೆಯನನ್ನು ನೆನೆದು ಜಗ್ಗೇಶ್ ಅವರು ಗಾಬರಿಗೊಂಡರಂತೆ. ಕಾರನ್ನು ಸರಿಯಾಗಿ ಓಡಿಸಲು ಶಶಿಕುಮಾರ್ ಅವರಿಗೆ ಬರುತ್ತೋ ಇಲ್ಲವೋ ಎಂಬ ಸಂದೇಹ ಕಾಡಿತಂತೆ. ಈ ವಿಚಾರವಾಗಿ ಜಗ್ಗೇಶ್ ಅವರು ನಿರ್ದೇಶಕರಲ್ಲಿ ಹೇಳಿಕೊಂಡರಂತೆ. ಅವರು ‘ಇನ್ನೊಂದೆರಡು ದಿನ ಕಾಯೋಣ ಶಶಿಕುಮಾರ್ ಅವರು ವಾಪಸ್ ಬಾರದಿದ್ದಲ್ಲಿ ಪೊಲೀಸ್ ಇಲಾಖೆಯ ಮೊರೆ ಹೋಗೋಣ’ ಎಂದರಂತೆ. ಅದೇ ದಿನ ಮೈಸೂರಿನ ಚಿತ್ರಿಕರಣದಲ್ಲಿ ಶಶಿಕುಮಾರ್ ಅವರು ಜಗ್ಗೇಶ್ ಅವರ ಕಾರನ್ನು ಬಳಸಿಕೊಂಡಿರುವ ವಿಚಾರವಾಗಿ ಸುದ್ದಿಯು ಮಾಧ್ಯಮಗಳಲ್ಲಿ ಬಿತ್ತರವಾಯಿತಂತೆ. ಅದನ್ನು ನೋಡಿದ ಬಳಿಕ ಜಗ್ಗೇಶ್ ಅವರು ನಿಟ್ಟುಸಿರು ಬಿಟ್ಟು ಕುಳಿತರಂತೆ. ನಂತರ ಶಶಿಕುಮಾರ್ ಅವರು ಜಗ್ಗೇಶ್ ಅವರ ಕಾರನ್ನು ಮರಳಿ ನೀಡಿದರಂತೆ.

Leave a Comment

error: Content is protected !!