Sadhu Kokila: ಸಾಧು ಕೋಕಿಲ ದಿನವೊಂದಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ಲಕ್ಷಾಧೀಶ್ವರ ಸಾಧು ಮಹಾರಾಜ್!

Sadhu Kokila ನಟ ಸಾಧುಕೋಕಿಲ್(Sadhu Kokila Actor) ಕನ್ನಡ ಚಿತ್ರರಂಗದಲ್ಲಿ ವಿಶೇಷವಾದ ಸ್ಥಾನಮಾನವನ್ನು ಹಲವಾರು ವರ್ಷಗಳಿಂದ ಕಾಯ್ದುಕೊಂಡು ಬಂದಿದ್ದಾರೆ. ಕೇವಲ ಕನ್ನಡ ಚಿತ್ರರಂಗದಲ್ಲಿ ಕಲಾವಿದನಾಗಿ ಮಾತ್ರವಲ್ಲದೆ ಸಂಗೀತ ನಿರ್ದೇಶಕನಾಗಿ ಕೂಡ ಅಷ್ಟೇ ದೊಡ್ಡ ಮಟ್ಟದ ಹೆಸರನ್ನು ಸಂಪಾದಿಸಿದ್ದಾರೆ. ಇದಕ್ಕಾಗಿ ಅವರು ಕನ್ನಡ ಚಿತ್ರರಂಗದ ವಿಶೇಷ ಪ್ರತಿಭೆಗಳಲ್ಲಿ ಮೊದಲಿಗರಾಗಿ ಕಾಣಿಸಿಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಾಕಷ್ಟು ಸಂಗೀತ ವಾದ್ಯಗಳನ್ನು ಅತ್ಯಂತ ವೇಗವಾಗಿ ನುಡಿಸುವಂತಹ ಕಲೆಯನ್ನು ಕೂಡ ಇವರು ಹೊಂದಿದ್ದಾರೆ. ಇದಕ್ಕಾಗಿ ಕೇವಲ ಹಾಸ್ಯ ಕಲಾವಿದನಾಗಿ ಮಾತ್ರವಲ್ಲದೆ ಇಂದಿಗೂ ಕೂಡ ಸಂಗೀತ ನಿರ್ದೇಶಕನಾಗಿ(Music Director) ಕೂಡ ಸಾಧುಕೋಕಿಲ್ ಕಾಣಿಸಿಕೊಳ್ಳುತ್ತಾರೆ. ಇನ್ನು ನಾವು ಇಂದು ಮಾತನಾಡಲು ಹೊರಟಿರುವುದು ಸಾಧುಕೋಕಿಲ ಅವರ ನಟನೆಯಲ್ಲಿ ಅವರು ಪಡೆಯುವ ಸಂಭಾವನೆಯ ಕುರಿತಂತೆ.

90ರ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವ ಸಾಧುಕೋಕಿಲ ಅವರು ಇಂದಿಗೂ ಕೂಡ ಕನ್ನಡದ ಟಾಪ್ ಕಾಮಿಡಿ ಆಕ್ಟರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇದುವರೆಗೂ ಸಾಕಷ್ಟು ಜನ ಬಂದು ಮಿಂಚಿಹ ಹೋಗಿದ್ದಾರೆ ಆದರೆ ಸಾಧುಕೋಕಿಲ(Sadhukokila) ಅವರ ಕಾಮಿಡಿ ಬೇಡಿಕೆಯ ಮುಂದೆ ಯಾರು ಕೂಡ ನಿಲ್ಲಲು ಸಾಧ್ಯವಿಲ್ಲ ಎನ್ನುವುದನ್ನು ಯಾವುದ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ಅವರು ದಿನವೊಂದಕ್ಕೆ ಪಡೆಯುವ ಸಂಭಾವನೆ ಬಗ್ಗೆ ಕೇಳಿದರೆ ಖಂಡಿತವಾಗಿ ನೀವು ಕೂಡ ಆಶ್ಚರ್ಯ ಪಡ್ತೀರಾ.

ಹೌದು ಗೆಳೆಯರೇ ಕನ್ನಡ ಚಿತ್ರರಂಗದ ಅತ್ಯಂತ ಬಹು ಬೇಡಿಕೆಯ ಕಾಮಿಡಿ ಕಲಾವಿದ ಆಗಿರುವ ಸಾಧುಕೋಕಿಲ ಅವರು ಪ್ರತಿ ದಿನದ ಚಿತ್ರೀಕರಣಕ್ಕೆ ಭರ್ಜರಿ ಎರಡರಿಂದ ಮೂರುವರೆ ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಾರಂತೆ. ಸಿನಿಮಾದಲ್ಲಿ ಕೂಡ ಅವರ ಕಾಮಿಡಿಯನ್ನು ನೋಡಲೆಂದೇ ಚಿತ್ರಮಂದಿರಗಳಿಗೆ ಹಲವಾರು ಪ್ರೇಕ್ಷಕರು ಕೂಡ ಬರುತ್ತಾರೆ. ಹೀರೋಗಳಿಗಿಂತ ಹೆಚ್ಚಾಗಿ ಚಪ್ಪಾಳೆಯನ್ನು ಗಿಟ್ಟಿಸಿಕೊಳ್ಳಬಲ್ಲಂತಹ ಹಾಸ್ಯ ಕಲಾವಿದ(Comedian) ಎಂದರೆ ಸಾಧುಕೋಕಿಲ ಎಂದು ಹೇಳಬಹುದಾಗಿದೆ.

Leave a Comment

error: Content is protected !!