Kiccha Sudeep: ತಂದೆ ಕಿಚ್ಚ ಸುದೀಪ್ ಜೊತೆಗೆ ಭರ್ಜರಿಯಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಾನ್ವಿ ಸುದೀಪ್ ರವರ ವಯಸ್ಸೆಷ್ಟು ಗೊತ್ತಾ?

Saanvi Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರ ಸಿನಿಮಾಗಳು ಕೇವಲ ಮನೋರಂಜನೆಯ ವಿಚಾರದಲ್ಲಿ ಮಾತ್ರವಲ್ಲದೆ ಸಮಾಜದಲ್ಲಿ ಏನಾದರೂ ಒಳ್ಳೆಯ ಸಂದೇಶವನ್ನು ನೀಡಲು ಕೂಡ ಪ್ರಯತ್ನ ಮಾಡುತ್ತವೆ ಎಂಬುದನ್ನು ಸಾಕಷ್ಟು ವರ್ಷಗಳಿಂದ ನೋಡಿಕೊಂಡು ಬಂದಿದ್ದೇವೆ.

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಅವರ ಮುಂದಿನ ಸಿನಿಮಾ ಯಾವುದು ಹಾಗೂ ಹೇಗಿರಬಹುದು ಎನ್ನುವ ಲೆಕ್ಕಾಚಾರದಲ್ಲಿ ಕುಳಿತುಕೊಂಡಿದ್ದು ಇನ್ನೂ ಕೂಡ ಸರಿಯಾದ ಅಪ್ಡೇಟ್ ಸಿಕ್ಕಿಲ್ಲ ಎಂಬುದಾಗಿ ಬೇಸರವನ್ನು ವ್ಯಕ್ತಪಡಿಸಿರುವ ನಡುವಲ್ಲಿಯೆ ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ನಿಂದ ಮತ್ತೊಂದು ಸಂತೋಷದ ಸುದ್ದಿ ಬಂದಿದೆ.

ನಾವು ಮಾತನಾಡುತ್ತಿರುವುದು ಅವರ ಸಿನಿಮಾ ಜೀವನದ ಬಗ್ಗೆ ಅಲ್ಲ ಬದಲಾಗಿ ಅವರ ವೈಯಕ್ತಿಕ ಜೀವನದ ಬಗ್ಗೆ. ತಿಳಿದಿರುವ ಹಾಗೆ ಪ್ರಿಯಾ(Priya Sudeep) ಅವರನ್ನು ಕಿಚ್ಚ ಸುದೀಪ್ ರವರು ಮದುವೆಯಾಗಿದ್ದು ಅವರಿಗೆ ಸಾನ್ವಿ ಸುದೀಪ(Saanvi Sudeep) ಎನ್ನುವಂತಹ ಮಗಳು ಕೂಡ ಇದ್ದಾರೆ. ಇತ್ತೀಚಿಗಷ್ಟೇ ಅವರ ಹುಟ್ಟು ಹಬ್ಬವನ್ನು ಕಿಚ್ಚ ಸುದೀಪ್ ರವರು ಅದ್ಧೂರಿಯಾಗಿ ಆಚರಿಸಿದ್ದಾರೆ.

ತಮ್ಮ ಮಗಳಾಗಿರುವ ಸಾನ್ವಿ ಸುದೀಪ್ ರವರ ಬರ್ತಡೆ ಯನ್ನು ಕಿಚ್ಚ ಸುದೀಪ್(Kiccha Sudeep) ರವರು ಆಚರಿಸಿಕೊಂಡಿರುವ ತರತಾನಗಳಲ್ಲಿ ಪೋಸ್ಟ್ ಮಾಡಿ ಮಗಳ ವಯಸ್ಸನ್ನು ಕೂಡ ಅದರಲ್ಲಿಯೇ ಮೆನ್ಷನ್ ಮಾಡಿದ್ದಾರೆ. ಹೌದು ಸಾನ್ವಿ ಸುದೀಪ್ ರವರು ಈ ಬರ್ತಡೆಯ ಮೂಲಕ ತಮ್ಮ 19ನೇ ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಿದ್ದಾರೆ.

Leave a Comment

error: Content is protected !!