Rishab Shetty: ರಿಷಬ್ ಶೆಟ್ಟಿ ರವರ ಕಾಲೇಜ್ ಕೃಷ್ ಯಾರ್ ಗೊತ್ತಾ? ಕನ್ನಡದ ಸ್ಟಾರ್ ನಟಿಯಂತೆ!

Kannada Actress ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ(Rishab Shetty) ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದುವರೆಗೂ ತಮ್ಮ ಕಡಿಮೆ ಬಜೆಟ್ ಸಿನಿಮಾಗಳ ಅತ್ಯಂತ ಹೆಚ್ಚು ಲಾಭದ ಬಾಕ್ಸ್ ಆಫೀಸ್ ಕಲೆಕ್ಷನ್ ಮೂಲಕ ಸುದ್ದಿಯಾಗಿದ್ದರು ಆದರೆ ಈಗ ಕಾಂತಾರ(Kantara) ಸಿನಿಮಾದ ಮೂಲಕ ಕೇವಲ ಇವಿಷ್ಟು ಮಾತ್ರವಲ್ಲದೆ ಇಡೀ ಭಾರತವೇ ಮೆಚ್ಚುವಂತಹ ಕಂಟೆಂಟ್ ಅನ್ನು ಕೂಡ ನೀಡುವ ಮೂಲಕ ಸುದ್ದಿ ಆಗುತ್ತಿದ್ದಾರೆ.

ನಮ್ಮ ಕನ್ನಡ ಮಣ್ಣಿನ ಕರಾವಳಿಯ ಆಚರಣೆಗಳನ್ನು ಇಡೀ ಭಾರತ ದೇಶಕ್ಕೆ ಪರಿಚಯ ಮಾಡಿರುವಂತಹ ಶ್ರೇಯ ನಟ ರಿಷಬ್ ಶೆಟ್ಟಿ ಅವರಿಗೆ ತಲುಪುತ್ತದೆ. ಕಾಂತಾರ(Kantara) ಸಿನಿಮಾ 19 ಕೋಟಿಗೂ ಕಡಿಮೆ ಬಜೆಟ್ ನಲ್ಲಿ ಮೂಡಿಬಂದಿದ್ದು ಭರ್ಜರಿ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲದ ಇಡೀ ಭಾರತೀಯ ಚಿತ್ರರಂಗ ಇಂತಹ ಸಿನಿಮಾವನ್ನು ಹೊಂದಿರುವುದಕ್ಕೆ ಹೆಮ್ಮೆಪಡುವಂತೆ ಮಾಡಿದೆ.

ಇನ್ನು ಇಂತಹ ಖ್ಯಾತಿಗೆ ಒಳಗಾಗಿರುವಂತಹ ನಟ ರಿಷಬ್ ಶೆಟ್ಟಿ(Rishab Shetty) ಅವರು ಕಾಲೇಜ್ ದಿನಗಳಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟಿ ಒಬ್ಬರ ದೊಡ್ಡ ಅಭಿಮಾನಿಯಾಗಿದ್ದರಂತೆ. ಅವರೇ ರಿಷಬ್ ಶೆಟ್ಟಿ ಅವರ ಸೆಲೆಬ್ರಿಟಿ ಕ್ರಶ್ ಆಗಿದ್ದರೂ ಎನ್ನುವುದಾಗಿ ಕೂಡ ತಿಳಿದು ಬಂದಿದೆ. ಅಷ್ಟಕ್ಕೂ ರಿಷಬ್ ಶೆಟ್ಟಿ ಅವರ ಮನಸ್ಸನ್ನು ಗೆದ್ದಿದ್ದ ಆ ಖ್ಯಾತ ನಟಿ ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೇ ಅದು ಇನ್ಯಾರು ಅಲ್ಲ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ(Ramya Actress) ಅವರು. ಇಬ್ಬರೂ ಕೂಡ ಒಂದೇ ಕಾರ್ಯಕ್ರಮದ ಒಂದೇ ವೇದಿಕೆ ಮೇಲೆ ಇದ್ದ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಅವರು ರಮ್ಯಾ(Ramya) ಅವರ ಮುಂದೆ ಈ ವಿಚಾರವನ್ನು ಬಹಿರಂಗಪಡಿಸುತ್ತಾರೆ. ರಮ್ಯಾ ಅವರು ಕೂಡ ಮುಗುಳ್ನಕ್ಕು ಸಂತೋಷವನ್ನು ವ್ಯಕ್ತಪಡಿಸುತ್ತಾರೆ.

Leave A Reply

Your email address will not be published.