ದಯವಿಟ್ಟು ಶೇರ್ ಮಾಡಿ ಗೆಳೆಯರೇ

ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗ ಕಂಡಂತಹ ಅಮೋಘ ನಿರ್ದೇಶಕ ಹಾಗೂ ನಟ ಮತ್ತು ತಂತ್ರಜ್ಞಾನ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಇದಕ್ಕೆ ನಿದರ್ಶನ ಎನ್ನುವಂತೆ ರಿಷಬ್ ಶೆಟ್ಟಿ ನಟ ಹಾಗೂ ನಿರ್ದೇಶಕನಾಗಿ ಕಾಣಿಸಿಕೊಂಡಿರುವ ಕಾಂತಾರ ಸಿನಿಮಾ ಇದೇ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ.

ಕಿರಿಕ್ ಪಾರ್ಟಿ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಬಾರಿಗೆ ದೊಡ್ಡ ಮಟ್ಟದ ಯಶಸ್ಸನ್ನು ಕಂಡ ರಿಷಬ್ ಶೆಟ್ಟಿ, ನಂತರದ ದಿನಗಳಲ್ಲಿ ಸಹಿಪ್ರಾ ಶಾಲೆ, ಕಾಸರಗೋಡು ಸಿನಿಮಾದ ಮೂಲಕ ಮತ್ತೆ ತಮ್ಮ ನಿರ್ದೇಶನದ ಗ್ರಿಪ್ ಅನ್ನು ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಮತ್ತೊಮ್ಮೆ ಮಗದೊಮ್ಮೆ ಸಾಬೀತು ಪಡಿಸುತ್ತಾರೆ. ಈಗ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾದ ಮೂಲಕ ತಮ್ಮ ನಿರ್ದೇಶನದ ಮಜಲುಗಳನ್ನು ಪ್ರಚುರ ಪಡಿಸಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಕನ್ನಡ ಚಿತ್ರರಂಗಕ್ಕೆ ರಿಯಲ್ ಸ್ಟಾರ್ ಉಪೇಂದ್ರ ಅವರ ಹಾಗೆ ಮತ್ತೊಬ್ಬ ಭರವಸೆಯ ನಟ ಹಾಗೂ ನಿರ್ದೇಶಕ ಸಿಕ್ಕಿದ್ದಾರೆ ಎಂದು ಹೇಳುವುದಕ್ಕೆ ಹೆಮ್ಮೆಯಾಗುತ್ತದೆ. ಇನ್ನು ರಿಷಬ್ ಶೆಟ್ಟಿ ಅಭಿಮಾನಿಗಳ ಜೊತೆಗೆ ಸಿನಿಮಾವನ್ನು ನೋಡಲು ಮುಖ್ಯ ಥಿಯೇಟರ್ ಗೆ ಬಂದು ತಿಳಿಯುತ್ತಾರೆ.

ಆ ಕಾರಿನ ಬೆಲೆ ಈಗ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಸುದ್ದಿ ಮಾಡುತ್ತಿದೆ. ಹೌದು ಮಿತ್ರರೇ ವೃಷಭ ಶೆಟ್ಟಿ ಥಿಯೇಟರ್ ಗೆ ಬಂದು ಇಳಿದಿರುವುದು ಆಡಿ ಕ್ಯೂ7 ಕಾರಿನಲ್ಲಿ. ಇನ್ನು ಈ ಕಾರಿನ ಬೆಲೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಆಗಿದೆ. ಒಂದು ಕಾಲದಲ್ಲಿ ಅವಕಾಶಗಳಿಗಾಗಿ ಕಷ್ಟಪಡುತ್ತಿದ್ದ ರಿಶಬ್ ಶೆಟ್ಟಿ ಇಂದು ಕನ್ನಡ ಚಿತ್ರರಂಗವನ್ನು ಹಾಗೂ ಕನ್ನಡ ಚಿತ್ರರಂಗದ ಪ್ರೇಕ್ಷಕರು ಹೆಮ್ಮೆಪಡುವ ರೀತಿಯಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ ಎನ್ನುವುದು ನಿಜಕ್ಕೂ ಕೂಡ ಸಂತೋಷದ ವಿಚಾರವಾಗಿದ್ದು ಇನ್ನಷ್ಟು ಯಶಸ್ಸು ಅವರಿಗೆ ಸಿಗಲಿ ಎಂಬುದಾಗಿ ಹಾರೈಸೋಣ.

By admin

Leave a Reply

Your email address will not be published.