Dr Rajkumar: ಈ ವಿಚಾರದಲ್ಲಿ ಇಡೀ ಭಾರತಕ್ಕೆ ನಂಬರ್ ವನ್ ನಮ್ಮ ರಾಜ್ ಕುಮಾರ್. ಅಣ್ಣಾವ್ರ ಗತ್ತು ಇಡೀ ದೇಶಕ್ಕೆ ಗೊತ್ತು.

Dr Rajkumar ಕನ್ನಡ ಚಿತ್ರರಂಗ ಎಂದರೆ ಅಣ್ಣಾವ್ರು ಅಣ್ಣಾವ್ರು ಎಂದರೆ ಕನ್ನಡ ಚಿತ್ರ ರಂಗ ಎನ್ನುವ ಮಾತು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ನಿಜಕ್ಕೂ ಕೂಡ ಇದನ್ನು ಪರಭಾಷಾ ಲೆಜೆಂಡರಿ ನಟರು ಕೂಡ ಒಪ್ಪಿಕೊಳ್ಳುತ್ತಾರೆ. ಇನ್ನು ಅಣ್ಣಾವ್ರು(Annavru) ನಮ್ಮನ್ನೆಲ್ಲ ಆಗಲು ಇಷ್ಟೊಂದು ವರ್ಷಗಳಾಗಿದ್ದರೂ ಕೂಡ ಅವರ ಹಲವಾರು ದಾಖಲೆಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ.

ಕನ್ನಡ ಚಿತ್ರರಂಗಕ್ಕೆ ಮೂರು ಮುತ್ತುಗಳನ್ನು ನೀಡಿರುವಂತಹ ಶ್ರೇಯ ಕೂಡ ಅಣ್ಣಾವ್ರಿಗೆ(Dr Rajkumar) ಸಲ್ಲುತ್ತದೆ. ಇನ್ನು ಅಣ್ಣಾವ್ರು ಮಾಡಿರುವಂತಹ ಇದೊಂದು ದಾಖಲೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿದ್ದು ಮಾಡುತ್ತಿದ್ದು ಇಡೀ ಭಾರತೀಯ ಚಿತ್ರರಂಗದಲ್ಲಿ ಇದುವರೆಗೂ ಆ ದಾಖಲೆಯನ್ನು ಮುರಿಯುವಂತಹ ಸಾಹಸಕ್ಕೆ ಯಾರು ಕೂಡ ಕೈ ಹಾಕಿಲ್ಲ ಮುಂದೆ ಆಗೋದು ಕೂಡ ಇಲ್ಲ ಎಂಬುದನ್ನು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಇಷ್ಟಕ್ಕೂ ನಿಜವಾಗಿ ಆ ದಾಖಲೆಯಾದರೂ ಏನು ಎಂಬುದನ್ನು ಎಲ್ಲವನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಇಡೀ ಭಾರತದ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಇಂಡಸ್ಟ್ರಿ ಹಿಟ್ ಫಿಲಂ(Industry Hit Films) ಗಳನ್ನು ಹೊಂದಿರುವ ದಾಖಲೆಯನ್ನು ನಮ್ಮ ಕನ್ನಡ ಚಿತ್ರರಂಗದ ನಟಸಾರ್ವಭೌಮ ಆಗಿರುವ ಅಣ್ಣಾವ್ರು ಹೊಂದಿದ್ದಾರೆ. ಹಾಗಿದ್ದರೆ ಈ ಲಿಸ್ಟ್ ನಲ್ಲಿ ಯಾರೆಲ್ಲ ಇದ್ದಾರೆ ಹಾಗೂ ಯಾವ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ರಾಜಕುಮಾರ್(Rajkumar) ಅವರು 15 ಸಿನಿಮಾಗಳೊಂದಿಗೆ ಮೊದಲ ಸ್ಥಾನದಲ್ಲಿ, 14 ಸಿನಿಮಾಗಳೊಂದಿಗೆ ರಜನಿಕಾಂತ್(Rajinikanth) 2ನೇ ಸ್ಥಾನದಲ್ಲಿ, 10 ಸಿನಿಮಾಗಳೊಂದಿಗೆ ಮೋಹನ್ ಲಾಲ್ ಮೂರನೇ ಸ್ಥಾನದಲ್ಲಿ, ಎಂಟು ಸಿನಿಮಾಗಳೊಂದಿಗೆ ಚಿರಂಜೀವಿ ನಾಲ್ಕನೇ ಸ್ಥಾನದಲ್ಲಿ, ಆರು ಸಿನಿಮಾಗಳೊಂದಿಗೆ ಕಮಲ್ ಹಾಸನ್ ಹಾಗೂ ಆಮೀರ್ ಖಾನ್(Aamir Khan) ಐದನೇ ಸ್ಥಾನದಲ್ಲಿ, ಐದು ಸಿನಿಮಾಗಳೊಂದಿಗೆ ಮುಮ್ಮುಟ್ಟಿ ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಷ್ಟೆಲ್ಲ ದಿಗ್ಗಜರ ನಡುವೆ ಕೂಡ ಅಣ್ಣಾವ್ರು ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಇಂಡಸ್ಟ್ರಿ ಹಿಟ್ ಫಿಲಂ ಗಳನ್ನು ಹೊಂದಿರುವ ದಾಖಲೆಯನ್ನು ಹಲವಾರು ವರ್ಷಗಳ ನಂತರವೂ ಕೂಡ ಹೊಂದಿದ್ದಾರೆ ಎನ್ನುವುದು ಕನ್ನಡಿಗರು ಹೆಮ್ಮೆ ಪಡಬೇಕಾಗಿರುವ ವಿಚಾರ.

Leave a Comment

error: Content is protected !!