Radhika Pandit: 39ನೇ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ನಟಿ ರಾಧಿಕಾ ಪಂಡಿತ್ ಎಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ ಗೊತ್ತಾ?

Radhika Pandit ನಟಿ ರಾಧಿಕಾ ಪಂಡಿತ್ ಅವರು ಚಿತ್ರರಂಗಕ್ಕೆ ಕಾಲಿಟ್ಟು ಹಲವಾರು ವರ್ಷಗಳೇ ಕಳೆದಿದ್ದರೂ ಕೂಡ ಇಂದಿಗೂ ಕೂಡ ಅವರು ನಟಿಸದಿದ್ದರೂ ಕನ್ನಡ ಚಿತ್ರರಂಗದಲ್ಲಿ ಅವರ ಬೇಡಿಕೆ ಎನ್ನುವುದು ಟಾಪ್ ನಟಿಯರಿಗಿಂತಲೂ ಕೂಡ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು. ಅಷ್ಟಿಲ್ಲದೆ ಸುಮ್ಮನೆ ಅವರನ್ನು ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ಎನ್ನುವುದಾಗಿ ಕರೆಯುತ್ತಾರಾ ನೀವೇ ಹೇಳಿ. ನಿಜಕ್ಕೂ ಕೂಡ ರಾಧಿಕಾ ಪಂಡಿತ್(Radhika Pandit) ಅತ್ಯಂತ ಪ್ರತಿಭಾನ್ವಿತೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ರಾಧಿಕಾ ಪಂಡಿತ್ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದು ಪ್ರಾರಂಭದಲ್ಲಿ ಅವರು ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಜೊತೆಗೆ ಕಿರುತೆರೆ ಲೋಕಕ್ಕೂ ಕೂಡ ಕಾಲಿಡುತ್ತಾರೆ. ಇಬ್ಬರು ಜೊತೆಯಾಗಿಯೇ ಚಿತ್ರರಂಗದಲ್ಲಿ ಕಾಲಿಟ್ಟು ಜೊತೆಯಾಗಿಯೇ ಬೆಳೆದು ಇಂದು ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಇಂದು ರಾಧಿಕಾ ಪಂಡಿತ್(Radhika Pandith) ತಮ್ಮ 39ನೇ ವಯಸ್ಸಿನ ಹುಟ್ಟುಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಆಚರಿಸಿಕೊಂಡಿದ್ದು ಅಭಿಮಾನಿಗಳು ಈಗಾಗಲೇ ಅವರಿಗೆ ಜನ್ಮದಿನದ ಶುಭಾಶಯಗಳು ಕೋರಿದ್ದಾರೆ. ಇಷ್ಟೊಂದು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯ ರಾಗಿದಂತಹ ರಾಧಿಕಾ ಪಂಡಿತ್ ಇದುವರೆಗೂ ಎಷ್ಟು ಸಿನಿಮಾಗಳಲ್ಲಿ ಹಾಗೂ ಧಾರವಾಹಿಗಳಲ್ಲಿ ನಟಿಸಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ನಟಿ ರಾಧಿಕಾ ಪಂಡಿತ್ ಅವರು ಇದುವರೆಗೂ ಭರ್ಜರಿ 21 ಸಿನಿಮಾಗಳಲ್ಲಿ ಹಾಗೂ ಮೂರು ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ತಿಳಿದಿರುವ ವಿವರವಾಗಿದೆ. ಮದುವೆಯಾದ ನಂತರ ನಟನೆಯನ್ನು ಸಂಪೂರ್ಣವಾಗಿ ನಿಲ್ಲಿಸಿರುವ ರಾಧಿಕಾ ಪಂಡಿತ್(Radhika Pandit) ಮತ್ತೊಮ್ಮೆ ಚಿತ್ರರಂಗಕ್ಕೆ ಕಾಲಿಡಲಿ ಎಂಬುದೇ ಅವರ ಅಭಿಮಾನಿಗಳ ಆಶಯವಾಗಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.