Radhika Pandit: ಬರ್ತಡೆಗೂ ಒಂದು ದಿನ ಮುಂಚೆನೇ ಅಭಿಮಾನಿಗಳಿಗೆ ಶಾ’ ಕ್ ನೀಡಿದ ರಾಧಿಕಾ ಪಂಡಿತ್!

Radhika Pandit ಕನ್ನಡ ಚಿತ್ರರಂಗದ ಸಿಂಡ್ರೆಲ್ಲಾ ಆಗಿರುವ ರಾಧಿಕಾ ಪಂಡಿತ್(Radhika Pandit Actress) ರವರ ಬರ್ತಡೆ ನಾಳೆ ಅಂದ್ರೆ ಮಾರ್ಚ್ 7 ರಂದು ಇದ್ದು ಇದಕ್ಕೂ ಮುನ್ನವೇ ತಮ್ಮ ಅಭಿಮಾನಿಗಳಿಗೆ ರಾಧಿಕಾ ಪಂಡಿತ್ ಈಗ ಸೋಶಿಯಲ್ ಮೀಡಿಯಾದ ಮುಖಾಂತರ ಒಂದು ಸಂದೇಶವನ್ನು ನೀಡಿದ್ದಾರೆ. ಬನ್ನಿ ಈ ಕಹಾನಿಯ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.

ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದ ರಾಧಿಕಾ ಪಂಡಿತ್ ರವರು ರಾಕಿಂಗ್ ಸ್ಟಾರ್ ಯಶ್(Rocking Star Yash) ರವರನ್ನು ಮದುವೆಯಾದ ನಂತರ ಚಿತ್ರರಂಗದಲ್ಲಿ ನಟಿಸುವುದನ್ನು ಬಹುತೇಕ ಸಂಪೂರ್ಣವಾಗಿ ನಿಲ್ಲಿಸಿ ಬಿಟ್ಟಿದ್ದರು. ಹೀಗಿದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತಹ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಲೇ ಇದ್ದರು.

ಇದರಿಂದಾಗಿ ರಾಧಿಕಾ ಪಂಡಿತ್(Kannada Actress Radhika) ಅವರ ಜೀವನದಲ್ಲಿ ಏನು ನಡೆಯುತ್ತಿದೆ ಎನ್ನುವುದು ಅವರ ಅಭಿಮಾನಿಗಳಿಗೆ ನೇರ ಅಪ್ಡೇಟ್ ಸಿಗುತ್ತಿತ್ತು. ಇನ್ನು ನಾಳೆ ಅಂದರೆ ಮಾರ್ಚ್ 7ರಂದು ಅವರ ಬರ್ತಡೆ ಇದ್ದು ಇದಕ್ಕೂ ಮುಂಚೇನೆ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮನೆಗೆ ಬರಬೇಡಿ ಎಂಬುದಾಗಿ ಅಭಿಮಾನಿಗಳಿಗೆ ಹೇಳಿದ್ದಾರೆ. ಅಷ್ಟಕ್ಕೂ ಅವರು ಹೇಳಲು ಹೊರಟಿರುವುದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಬರ್ತಡೆ ದಿನದಂದು ನಾನು ಮನೆಯಿಂದ ತುಂಬಾ ದೂರ ಜನ್ಮದಿನವನ್ನು ಆಚರಿಸಲು ಹೋಗುತ್ತಿದ್ದೇನೆ ಇದರಿಂದಾಗಿ ಅಭಿಮಾನಿಗಳಾದ ನಿಮಗೆ ಬೇಸರವಾಗಲಿದೆ ಎಂಬುದಾಗಿ ತಿಳಿದಿದ್ದೇನೆ. ಹೀಗಾಗಿ ಇಲ್ಲೊಂದು ಚಟುವಟಿಕೆ ಮಾಡಲು ಯೋಚಿಸಿದ್ದೇನೆ ಇದರೊಂದಿಗೆ ನಿಮ್ಮೊಂದಿಗೆ ನಾಳೆ ಕನೆಕ್ಟ್ ಆಗುವ ಸಾಧ್ಯತೆಯಿದೆ ಏನ್ ಹೇಳ್ತೀರಾ ಎನ್ನುವುದಾಗಿ ತಮ್ಮ ಫೋಟೋವನ್ನು ಪೋಸ್ಟ್ ಮಾಡಿ ರಾಧಿಕಾ ಪಂಡಿತ್(Radhika Pandit) ಹೇಳಿಕೊಂಡಿದ್ದಾರೆ. ಹಾಗಿದ್ದರೆ ಆ ಸರ್ಪ್ರೈಸ್ ಏನಿರಬಹುದು ಎಂಬುದನ್ನು ನಾಳೆ ನಾವು ಕಾದು ನೋಡಬೇಕಾಗಿದೆ.

Leave A Reply

Your email address will not be published.