ದಾಖಲೆ ಬರೆದಿರುವ ರಾಬರ್ಟ್ ಸಿನಿಮಾ
ದಿಬಾಸ್ ಎಂದೇ ಖ್ಯಾತಿ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ನೋಡಲು ಸಿನಿ ಪ್ರಿಯರು ಕಾಯುತ್ತಿರುತ್ತಾರೆ. ಹಾಗಿರುವಾಗ ನಿರೀಕ್ಷೆಯನ್ನು ಹೊತ್ತು ತಂದಿರುವ ರಾಬರ್ಟ್ ಸಿನಿಮಾ ನೋಡಲು ದರ್ಶನ್ ಅವರ ಅಭಿಮಾನಿಗಳು ಕಾತುರದಿಂದಿದ್ದಾರೆ, ಅಲ್ಲದೆ ರಾಬರ್ಟ್ ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ರಾಬರ್ಟ್ ಸಿನಿಮಾ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ದರ್ಶನ್ ಅಭಿಮಾನಿಗಳು ಈಗಾಗಲೇ ರಾಬರ್ಟ್ ಸಿನಿಮಾ ನೋಡಲು ಕಾತುರರಾಗಿದ್ದಾರೆ. ರಾಬರ್ಟ್ ಸಿನಿಮಾ ಸಾಕಷ್ಟು ನಿರೀಕ್ಷೆಯನ್ನು ಹೊತ್ತುಕೊಂಡು ಪ್ರೇಕ್ಷಕರ ಮುಂದೆ ಬಂದು ನಿಂತಿದೆ. ರಾಬರ್ಟ್ ಸಿನಿಮಾ ಚಿತ್ರೀಕರಣದ ಆರಂಭದಿಂದಲೂ ಸಾಕಷ್ಟು ಸುದ್ದಿಯಾಗಿದ್ದು, ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡಿದೆ. ದರ್ಶನ್ ಅವರ ಅಭಿಮಾನಿಗಳು ರಾಬರ್ಟ್ ಸಿನಿಮಾವನ್ನು ಹಬ್ಬವನ್ನಾಗಿ ಸಂಭ್ರಮಿಸುತ್ತಾ ಬರಮಾಡಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೀರೊ ಪಾತ್ರದಲ್ಲಿ , ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ರಾಬರ್ಟ್ ಸಿನಿಮಾದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕೆಲಸ ಮಾಡಿ ಸಿನಿಮಾವನ್ನು ಒಂದು ಕನಸಾಗಿ ಕಂಡಿದ್ದಾರೆ. ಸಿನಿಮಾದ ಮೇಲಿನ ಭಕ್ತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ, ರಾಬರ್ಟ್ ಸಿನಿಮಾ ಮೇಲೆ ಸಾಕಷ್ಟು ಕನಸು ಹೊತ್ತು ಎಲ್ಲರ ಮುಂದೆ ತಂದಿದ್ದಾರೆ. ಸಹಸ್ರಾರು ಅಭಿಮಾನಿಗಳ ಒಡೆಯ ದಾಸ ದರ್ಶನ್ ಅವರ ಸಿನಿಮಾದಲ್ಲಿ ಹೊಸದಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕನ್ನಡತಿ ಆಶಾ ಭಟ್ ನಾಯಕಿಯಾಗಿ ತಮ್ಮ ನಟನೆಯಲ್ಲಿ ಕಂಗೊಳಿಸಿದ್ದಾರೆ. ಟೈಸನ್ ವಿನೋದ್ ಪ್ರಭಾಕರ್ , ಜಗಪತಿ ಬಾಬು, ಅವಿನಾಶ್, ರವಿಶಂಕರ್, ದೇವರಾಜ್, ಶಿವರಾಜ್ ಕೆ.ಆರ್.ಪೇಟೆ, ಧರ್ಮಣ್ಣ , ಚಿಕ್ಕಣ್ಣ ಹೀಗೆ ಅನೇಕ ಹಿರಿಯ ಹಾಗೂ ಕಿರಿಯ ಪ್ರತಿಭಾವಂತರ ನಟನೆಯನ್ನು ರಾಬರ್ಟ್ ಸಿನಿಮಾದಲ್ಲಿ ನೋಡಬಹುದು, ಅಲ್ಲದೇ ತೆಲುಗು ಭಾಷೆಗಳಲ್ಲಿ ತೆರೆಕಂಡಿರುವ ರಾಬರ್ಟ್ ಕರ್ನಾಟಕ , ಸೀಮಾಂಧ್ರ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಒಟ್ಟು 1500ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಪ್ರದರ್ಶನಗೊಂಡಿದೆ.
ಬೆಂಗಳೂರಿನ ಅನೇಕ ಕಡೆ ಬೆಳಗ್ಗೆ 6ಗಂಟೆಯಿಂದಲೇ ರಾಬರ್ಟ್ ಪ್ರದರ್ಶನ ಶುರುವಾಗಿದೆ ಇದು ವಿಶೇಷವಾಗಿದೆ. ಶಿವರಾತ್ರಿಯ ಹಿನ್ನೆಲೆ ರಾತ್ರಿ 12.30ವರೆಗೂ ಪ್ರದರ್ಶನ ಕಾಣುವುದು ಇನ್ನೂ ವಿಶೇಷ. ನಿರ್ದೇಶಕ ತರುಣ್ ಸುಧೀರ್ ಅವರಿಗೆ ಖಾಲಿ ಹಾಳೆಯ ಮೇಲೆ ರಾಬರ್ಟ್ ಎಂದು ಬರೆದಾಗಿನಿಂದಲೂ ಅದೇನೋ ಕ್ಯೂರಿಯಾಸಿಟಿ ಈ ಚಿತ್ರದ ಮೇಲೆ ಸೃಷ್ಟಿಯಾಗಿದೆ. ಪೊಸ್ಟರ್, ಟೀಸರ್, ಟ್ರೈಲರ್, ಸಾಂಗ್ಸ್, ಮೇಕಿಂಗ್ ಕಹಾನಿಗಳಿಂದ ರಾಬರ್ಟ್ ಕುತೂಹಲದ ಆಗರವಾಗಿದೆ. ರಾಬರ್ಟ್ ಸೃಷ್ಟಿಸಿರುವ ಎಲ್ಲಾ ಕುತೂಹಲಕ್ಕೂ ಪ್ರೇಕ್ಷಕರ ಪ್ರತಿಕ್ರಿಯೆಯೂ ಅತ್ಯುತ್ತಮವಾಗಿ ದೊರಕುತ್ತಿರುವುದು ವಿಶೇಷ. ಅಭಿಮಾನಿಗಳು ಪಟಾಕಿ ಹೊಡೆದು ನೃತ್ಯ ಮಾಡುತ್ತಾ ರಾಬರ್ಟ್ ಸಿನಿಮಾವನ್ನು ಸಂಭ್ರಮಿಸುತ್ತಿದ್ದಾರೆ. ನಗರದ ಎಲ್ಲಾ ಚಿತ್ರಮಂದಿರಗಳ ಹೊರಗಡೆ ಕೂಡ ರಾಬರ್ಟ್ ಚಿತ್ರಗಳು ರಾರಾಜಿಸುತ್ತಿವೆ, ಅಭಿಮಾನಿಗಳು ದರ್ಶನ್ ಅವರ ಕಟೌಟ್ಗಳಿಗೆ ಹೂವಿನ ಅಭಿಷೇಕ ಮಾಡುತ್ತಿದ್ದಾರೆ. ಮಾಸ್ ಕ್ಲಾಸ್ ದರ್ಶನ್ ಅಭಿಮಾನಿಗಳು ತಮ್ಮ ಆರಾಧ್ಯ ನಟನ ಚಿತ್ರವನ್ನು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಅವರು ಜನರ ಅಭಿಮಾನವನ್ನು ನೋಡಿ ಸಂತೋಷಪಟ್ಟಿದ್ದಾರೆ. ರಾಬರ್ಟ್ ಸಿನಿಮಾ ಹೆಚ್ಚು ದಿನಗಳು ಓಡಲಿ, ಯಶಸ್ಸನ್ನು ತರಲಿ ಎಂದು ಆಶಿಸೋಣ.