Olle Hudga Pratham ಕ್ರಾಂತಿ ಸಿನಿಮಾಗಿಂತ ಪ್ರಥಮ್ ನಟನೆಯ ನಟಭಯಂಕರ ಸಿನಿಮಾದ ಕಲೆಕ್ಷನ್ನೆ ಹೆಚ್ಚಂತೆ! ಈ ಬಗ್ಗೆ ಡಿ ಬಾಸ್ ಗೆ ಪ್ರಥಮ್ ಹೇಳಿದ್ದೇನು?

Pratham Vs Dboss ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ(Kranti) ಸಿನಿಮಾ ಇತ್ತೀಚಿಗಷ್ಟೇ ಅಂದರೆ ಜನವರಿ 26ರಂದು ಬಿಡುಗಡೆಯಾಗಿ ದೇಶ ವಿದೇಶಗಳ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಂಡು ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದ ರೆಕಾರ್ಡ್ ಕಲೆಕ್ಷನ್ ಅನ್ನೇ ಮಾಡುತ್ತಿದೆ. ಈಗಾಗಲೇ ಚಿತ್ರತಂಡ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬುದನ್ನು ಸ್ವತಹ ಚಿತ್ರತಂಡವೇ ಅಧಿಕೃತವಾಗಿ ಘೋಷಿಸಿಕೊಂಡಿದೆ. ಇತ್ತೀಚಿಗಷ್ಟೇ ಖಾಸಗಿ ಹೋಟೆಲ್ ನಲ್ಲಿ ಸಂಭ್ರಮಾಚರಣೆಯನ್ನು ಕೂಡ ಚಿತ್ರ ತಂಡ ಮಾಡಿತ್ತು.

ಇನ್ನು ಕ್ರಾಂತಿ(Kranti) ಸಿನಿಮಾ ತಂಡ ಹೇಳುತ್ತಿರುವುದು ಸುಳ್ಳು ಎಂಬುದಾಗಿ ಬೇರೆ ನಟರ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಾದವನ್ನು ಮಂಡಿಸುತ್ತಿದ್ದಾರೆ. ಇನ್ನು ಅದೆಲ್ಲವನ್ನು ಮೀರಿ ಬೇರೆ ರೀತಿಯ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ ಅದರಲ್ಲಿ ಪ್ರಥಮ್(Pratham) ಅವರನ್ನು ಕೂಡ ಒಳಗೊಂಡಂತೆ ಅವರ ಸಿನಿಮಾದ ಕಲೆಕ್ಷನ್ ಅನ್ನು ಕ್ರಾಂತಿ ಸಿನಿಮಾದ ಕಲೆಕ್ಷನ್ ಗೆ ಹೋಲಿಸಿ ಟೀಕೆ ಮಾಡಲಾಗಿದೆ.

ಕ್ರಾಂತಿ ಸಿನಿಮಾ 35.3 ಕೋಟಿ ರೂಪಾಯಿ ಗಳಿಕೆಯನ್ನು ಮೊದಲ ದಿನ ಗಳಿಸಿತು ಎಂಬುದಾಗಿ ದರ್ಶನ್(Darshan) ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಬೇರೆ ನಟರ ಅಭಿಮಾನಿಗಳು ಇತ್ತೀಚಿಗಷ್ಟೇ ಬಿಡುಗಡೆಯಾದ ಒಳ್ಳೆ ಹುಡುಗ ಪ್ರಥಮ್(Olle Hudga Pratham) ನಟನೆಯ ನಟಭಯಂಕರ ಸಿನಿಮಾದ ಕಲೆಕ್ಷನ್ ಕೂಡ 35.5 ಕೋಟಿ ಆಗಿದೆ ಆ ಲೆಕ್ಕದಲ್ಲಿ ನಿಜವಾದ ಬಾಕ್ಸ್ ಆಫೀಸ್ ಸುಲ್ತಾನ ಒಳ್ಳೆ ಹುಡುಗ ಪ್ರಥಮ್ ಎನ್ನುವುದಾಗಿ ಟೀಕೆ ಮಾಡಿದ್ದರು. ಈಗ ಇದನ್ನು ಗಮನಿಸಿರುವ ಒಳ್ಳೆ ಹುಡುಗ ಪ್ರಥಮ್ ಅವರೇ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಇದು ಸುಳ್ಳು ಸುದ್ದಿ ನಾನು ಪೂಜೆ ಮಾಡುವ ಕಬ್ಬಾಳಮ್ಮನ ಸಾಕ್ಷಿಯಾಗಿಯೂ ಇದಕ್ಕು ನನಗೂ ಸಂಬಂಧವಿಲ್ಲ ಮತ್ತು ನಮ್ಮ ಸಿನಿಮಾ ಅಷ್ಟು ಕಲೆಕ್ಷನ್ ಮಾಡಿಲ್ಲ. ದರ್ಶನ್(Darshan) ಸರ್ ದೊಡ್ಡವರು ಸುಮ್ಮನೆ ಸುಳ್ಳು ಹೋಲಿಕೆ ಬೇಡ. ನಮ್ಮ ಸಿನಿಮಾ ಚೆನ್ನಾಗಿ ಆಗ್ತಾ ಇದೆ ಸಂತೋಷ ಆದರೆ ಈಶ್ವರನ ಸಾಕ್ಷಿಯಾಗಿ ಇದು ಸುಳ್ಳು ಹಾಗೂ ನನಗೂ ಇದಕ್ಕೂ ಸಂಬಂಧವಿಲ್ಲ ದಯವಿಟ್ಟು ನಿಲ್ಲಿಸಿ ಎಂಬುದಾಗಿ ಕೇಳಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು ಇದರ ಕುರಿತಂತೆ ಪ್ರತಿಯೊಬ್ಬರೂ ಕೂಡ ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Leave a Comment

error: Content is protected !!