Kabzaa: ಕಬ್ಜಾ ಸಿನಿಮಾ ನೋಡಿ ಒಳ್ಳೆ ಹುಡುಗ ಪ್ರಥಮ್ ನೀಡಿದ ಹೇಳಿಕೆ ಏನು ಗೊತ್ತಾ? ಯಪ್ಪಾ ಹಿಂಗಾ ಹೇಳೋದು!

Olle Hudga Pratham ಕಬ್ಜಾ ಸಿನಿಮಾ(Kabzaa Film) ಈಗಾಗಲೇ ಬಿಡುಗಡೆಯಾಗಿ ರಾಜ್ಯಾದ್ಯಂತ ದೇಶಾದ್ಯಂತ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿ ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಆರ್ ಚಂದ್ರು(R chandru) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಮಲ್ಟಿ ಸ್ಟಾರರ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ವಿಚಾರದಲ್ಲಿ ಕೂಡ ಹಿಂದೆ ಬಿದ್ದಿಲ್ಲ. ಉಪೇಂದ್ರ(Upendra) ನಾಯಕನಾಗಿ ಕೂಡ ಈ ಸಿನಿಮಾದಲ್ಲಿ ಅಬ್ಬರಿಸುವ ಮೂಲಕ ಫ್ಯಾನ್ ಇಂಡಿಯನ್ ಸ್ಟಾರ್ ಆಗಿ ಮುಂದಿನ ದಿನಗಳಲ್ಲಿ ಕಾಣಿಸಿಕೊಳ್ಳಬಹುದಾಗಿದೆ.

ಕಿಚ್ಚ ಸುದೀಪ್(Kiccha Sudeep) ರವರ ಪೊಲೀಸ್ ಪಾತ್ರ ಹಾಗೂ ಶಿವಣ್ಣನವರ(Shivanna) ಅತಿಥಿ ಪತ್ರ ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ಸಡಗರವನ್ನು ಉಂಟುಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು. ಇನ್ನು ಬಹುಭಾಷೆಗಳಲ್ಲಿ ಬಿಡುಗಡೆಯಾಗಿರುವ ಕಬ್ಜಾ ಸಿನಿಮಾದ ಪ್ರೀಮಿಯರ್ ಶೋ ನೋಡಿದ ನಂತರ ಒಳ್ಳೆ ಹುಡುಗ ಪ್ರಥಮ್(Olle Hudga Pratham) ಈ ಸಿನಿಮಾದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಮೂರು ಸ್ಟಾರ್ ನಟರನ್ನು ಒಂದೇ ಸಿನಿಮಾದಲ್ಲಿ ತಂದು ತೋರಿಸುವುದು ಅಷ್ಟೊಂದು ಸುಲಭದ ಮಾತಲ್ಲ ನಿರ್ದೇಶಕ ಆರ್ ಚಂದ್ರು ಅವರು ರಿಸ್ಕ್ ಅನ್ನು ತೆಗೆದುಕೊಂಡು ಮೂರನ್ನು ಕೂಡ ಚೆನ್ನಾಗಿ ತೋರಿಸಿದ್ದಾರೆ ಅದಕ್ಕಾಗಿ ಮೊದಲು ನಾವು ಮೆಚ್ಚಲೇಬೇಕು ಎಂಬುದಾಗಿ ಹೇಳಿದ್ದಾರೆ. ಇದೊಂದೇ ಸಿನಿಮಾಗಾಗಿ ಬರೋಬ್ಬರಿ ಮೂರು ವರ್ಷಗಳನ್ನು ತೆಗೆದುಕೊಂಡು ಚೆನ್ನಾಗಿ ಒಂದು ಸಿನಿಮಾವನ್ನು ತಯಾರಿಸಿ ಪ್ರೇಕ್ಷಕರಿಗೆ ನೀಡಿದ್ದಾರೆ. ನಾವು ಮೆಚ್ಚುವಂತಹ ಮೂರು ಸ್ಟಾರ್ಗಳು ಕೂಡ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಅತ್ಯಂತ ಅಪರೂಪ.

ಎಲ್ಲದಕ್ಕಿಂತ ಪ್ರಮುಖವಾಗಿ ಅಪ್ಪು(Appu) ಅವರಿಗೆ ಈ ಸಿನಿಮಾ ತಂಡ ನೀಡಿರುವ ಟ್ರಿಬ್ಯೂಟ್ ವಿಶೇಷ ಮಾದರಿಯಾಗಿದ್ದು ಪ್ರತಿಯೊಬ್ಬರೂ ಕೂಡ ಇದನ್ನು ಮೆಚ್ಚಲೇಬೇಕು. ಒಂದೊಳ್ಳೆ ಪ್ರಯತ್ನ ಇದಾಗಿದ್ದು ಪ್ರತಿಯೊಬ್ಬರೂ ಕೂಡ ಕಬ್ಜಾ ಸಿನಿಮಾವನ್ನು ಥಿಯೇಟರ್ ಗಳಲ್ಲಿ ಬಂದು ನೋಡಲೇಬೇಕು ಎಂಬುದಾಗಿ ಹೇಳುವ ಮೂಲಕ ಕಬ್ಜಾ(Kabzaa) ಸಿನಿಮಾದ ಕುರಿತಂತೆ ಒಳ್ಳೆ ಹುಡುಗ ಪ್ರಥಮ್ ಪಾಸಿಟಿವ್ ಆಗಿಯೇ ಮಾತನಾಡಿದ್ದಾರೆ. ನಿಮ್ಮ ಪ್ರಕಾರ ಕಬ್ಜಾ ಸಿನಿಮಾ ಹೇಗಿದೆ ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!