Pavithra Lokesh ವಿವಾದಾತ್ಮಕ ನಟಿ ಪವಿತ್ರಾ ಲೋಕೇಶ್ ರವರ ಸೀಮಂತದ ಅಪರೂಪದ ದೃಶ್ಯಗಳು ಹೇಗಿತ್ತು ಗೊತ್ತಾ?

Pavithra Lokesh ಇಂದು ಪವಿತ್ರ ಲೋಕೇಶ್ ಅವರ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದಕ್ಕೆ ಕಾರಣ ಇತ್ತೀಚೆಗೆ ಅವರ ಜೀವನಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳು ಈಗಾಗಲೇ ಹೊರಬಂದಿದೆ. ಇನ್ನು ನಟಿ ಪವಿತ್ರ ಲೋಕೇಶ್ ಅವರು ಮೈಸೂರು ಲೋಕೇಶ್ ಅವರ ಮಗಳಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಮೈಸೂರು ಲೋಕೇಶ್ ರವರು ಖಳನಾಯಕನ ಹಾಗೂ ಹಾಸ್ಯ(Comedy) ಮತ್ತು ಪೋಷಕ ಪಾತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಇನ್ನು ಬಾಲ್ಯದಿಂದ ಚಿತ್ರರಂಗವನ್ನು ಪವಿತ್ರ ಲೋಕೇಶ್ ಅವರು ಚೆನ್ನಾಗಿ ಅರಿತಿರುತ್ತಾರೆ. ಬಾಲ್ಯದಿಂದಲೂ ಆಟ ಪಾಠ ಹಾಗೂ ನಟನೆಯಲ್ಲಿ ಕೂಡ ಪವಿತ್ರ ಲೋಕೇಶ್ ಅವರು ಮುಂದಿರುತ್ತಾರೆ ಆದರೆ ಮುಂದಿನ ದಿನಗಳಲ್ಲಿ ತಾನು ಕೂಡ ಜನ ಮೆಚ್ಚುವಂತಹ ನಟಿಯಾಗುತ್ತೇನೆ ಎನ್ನುವ ಕಲ್ಪನೆ ಕೂಡ ಅವರಿಗೆ ಇರಲಿಲ್ಲ. ರೆಬೆಲ್ ಸ್ಟಾರ್(Rebel Star) ಅಂಬರೀಶ್ ಅವರ ಪ್ರೇರೇಪಣೆಯಿಂದ ಚಿತ್ರರಂಗಕ್ಕೆ ಪವಿತ್ರ ಲೋಕೇಶ್ ಅವರು ಕಾಲಿಡುತ್ತಾರೆ. ಇನ್ನು ಪವಿತ್ರ ಲೋಕೇಶ್ ಅವರ ಪತಿ ಸುಚೇಂದ್ರ ಪ್ರಸಾದ್ ಕೂಡ ಕನ್ನಡ ಚಿತ್ರರಂಗ ಕಂಡಂತಹ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದಾರೆ.

pavithra lokesh family

ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಾತನ್ನು ಒಪ್ಪಿ ಚಿತ್ರರಂಗದಲ್ಲಿ ಪವಿತ್ರ ಲೋಕೇಶ್ ಅವರು ಪ್ರಯತ್ನ ಪಡುತ್ತಾರೆ. ಅವರ ಸುಂದರ ಮುಖ ಹಾಗೂ ಮುದ್ದಾದ ನಟನೆಗೆ ಕನ್ನಡ ಪ್ರೇಕ್ಷಕರು ತಲೆದೂಗುತ್ತಾರೆ. ಆದರೆ ಪವಿತ್ರ ಲೋಕೇಶ್ ಅವರ ಸಿನಿಮಾ ಕರಿಯರ್ ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಹಾಗೂ ದೊಡ್ಡ ಮಟ್ಟದ ಯಶಸ್ಸನ್ನು ಪಡೆದ ಸಿನಿಮಾ ಎಂದರೆ ಅದು ಜನುಮದ ಜೋಡಿ. ಪೋಷಕ ಪಾತ್ರಗಳಿಗೆ ಪವಿತ್ರ ಲೋಕೇಶ್ ನಿರ್ದೇಶಕರ(Director) ಮೊದಲ ಆಯ್ಕೆಯಾಗಿರುತ್ತಿದ್ದರು.

ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತೆಲುಗು ಚಿತ್ರರಂಗದಲ್ಲಿ ಕೂಡ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿರುವ ನಟಿ ಪವಿತ್ರ ಲೋಕೇಶ್ ಅವರು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಅವರ ಹಾಗೂ ನರೇಶ್ ಬಾಬು ಅವರ ನಡುವೆ ನಡೆದಿರುವಂತಹ ವಿಚಾರಗಳು ಹೊರಬಂದ ಮೇಲೆ ಅವರ ಮೇಲೆ ಜನರಿಗೆ ಬೇರೆಯದೇ ದೃಷ್ಟಿಕೋನ ಬರುವಂತಾಗಿದೆ ಎಂದರೆ ತಪ್ಪಾಗಲಾರದು. ಇನ್ನು ನಟಿ ಪವಿತ್ರ ಲೋಕೇಶ್ ಅವರ ಸೀಮಂತದ ಫೋಟೋಗಳನ್ನು ನೀವೂ ಕೂಡ ನೋಡಬಹುದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ(Social Media) ಇವುಗಳು ಈಗಾಗಲೇ ವೈರಲ್ ಆಗುತ್ತಿವೆ.

Leave a Comment

error: Content is protected !!