ಮೊದಲ ಸಿನಿಮಾಗೆ ನೆನಪಿರಲಿ ಪ್ರೇಮ್ ಮಗಳು ಕೇಳಿದ ಸಂಭಾವನೆ ನೋಡಿ ಶಾಕ್ ಆದ ನಿರ್ಮಾಪಕರು.. ಎಷ್ಟು ಗೊತ್ತಾ?

ನೆನಪಿರಲಿ ಪ್ರೇಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಚಾಕಲೇಟ್ ಹೀರೋ ಆಗಿ ಲವ್ಲಿ ಸ್ಟಾರ್ ಆಗಿ ನೆನಪಿರಲಿ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ಮಿಂಚಿಮೆರೆದವರು. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಆಗಾಗ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಆದರೆ ಈಗ ನಾವು ಮಾತನಾಡಲು ಹೊರಟಿರುವುದು ನೆನಪಿರಲಿ ಪ್ರೇಮ್ ಅವರ ಬಗ್ಗೆ ಅಲ್ಲ ಬದಲಾಗಿ ಅವರ ಮಗಳಾಗಿರುವ ಅಮೃತ ಪ್ರೇಮ್ ಅವರ ಕುರಿತಂತೆ. ಹೌದು ಗೆಳೆಯರೇ ನೆನಪಿರಲಿ ಪ್ರೇಮ್ ಅವರಿಗೆ ನಾಯಕನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುವಷ್ಟರ ಮಟ್ಟಿಗೆ ಮಗಳು ಬೆಳೆದು ನಿಂತಿದ್ದಾಳೆ ಎಂದರೆ ಎಲ್ಲರೂ ಕೂಡ ಆಶ್ಚರ್ಯ ಪಡಲೇಬೇಕಾಗಿದೆ. ಅಮೃತಾ ಪ್ರೇಮ್ ಅವರಲ್ಲಿ ಕನ್ನಡ ಚಿತ್ರರಂಗದ ನಾಯಕ ನಟಿ ಆಗುವಂತಹ ಎಲ್ಲಾ ಗುಣಲಕ್ಷಣಗಳು ಕೂಡ ಎದ್ದು ಕಾಣುತ್ತಿವೆ.

Nenapirali prem daughter

ಎಲ್ಲಕ್ಕಿಂತ ಪ್ರಮುಖವಾಗಿ ಮೂಲಗಳ ಸುದ್ದಿಯ ಪ್ರಕಾರ ಅಮೃತ ಪ್ರೇಮ್ ಅವರು ನಾಯಕ ನಟಿಯಾಗಿ ಆಯ್ಕೆಯಾಗುತ್ತಿರುವುದು ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ಮಾಪಕ ಆಗಿರುವ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹಾಗೂ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ಟಗರು ಪಲ್ಯ ಸಿನಿಮಾಗಾಗಿ ಎಂಬುದಾಗಿ ತಿಳಿದು ಬಂದಿದೆ. ಎಲ್ಲರೂ ಕೂಡ ಅಮೃತ ಪ್ರೇಮ್ ಅವರಿಗೆ ತಮ್ಮ ಮೊದಲ ಪಾದರ್ಪಣ ಸಿನಿಮಾಗಾಗಿ ಶುಭ ಹಾರೈಸುತ್ತಿದ್ದಾರೆ ಆದರೆ ಇದರ ನಡುವೆ ಅವರು ತಮ್ಮ ಮೊದಲ ಸಿನಿಮಾ ಗಾಗಿ ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆಯ ಬಗ್ಗೆ ಕೂಡ ತಿಳಿದುಬಂದಿದೆ.

ಮಿತ್ರರೇ ನೆನಪಿರಲಿ ಪ್ರೇಮ್ ಅವರ ಮಗಳಾಗಿರುವ ಅಮೃತ ಪ್ರೇಮ್ ಅವರು ತಮ್ಮ ಮೊದಲ ಸಿನಿಮಾಗಾಗಿ ನಿರ್ಮಾಪಕರ ಬಳಿ ಡಿಮ್ಯಾಂಡ್ ಮಾಡುತ್ತಿರುವ ಸಂಭಾವನೆ ಬರೋಬ್ಬರಿ 10 ಲಕ್ಷ ರೂಪಾಯಿ ಆಗಿದೆ. ಮೊದಲ ಸಿನಿಮಾದಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಿರುವುದು ಅಥವಾ ಡಿಮ್ಯಾಂಡ್ ಮಾಡುತ್ತಿರುವುದು ನಿಜಕ್ಕೂ ಕೂಡ ನಿರ್ಮಾಪಕರ ಆಶ್ಚರ್ಯಕ್ಕೆ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಇದು ಯಾವ ರೀತಿ ಟರ್ನ್ ಔಟ್ ಆಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Comment

error: Content is protected !!