ತೆಲುಗು ನಟಿ ಶೋಭಿತಾ ಜೋತೆ ಫಾರಿನ್ ನಲ್ಲಿ ಸುತ್ತಾಡಿ ಎಂಜಾಯ್ ಮಾಡುತ್ತಿರುವ ನಾಗ ಚೈತನ್ಯ. ಅಸಲಿ ಸತ್ಯ ಬಯಲು


ನಾಗ ಚೈತನ್ಯ ಹಾಗೂ ಶೋಭಿತಾ ಡೇಟಿಂಗ್ ನಲ್ಲಿದ್ದಾರೆ ಎಂಬ ವದಂತಿಯು ಹರಡಿರುವಾಗಲೇ, ಫೋಟೋವೊಂದು ವೈರಲ್ ಆಗಿದ್ದು, ಇವರಿಬ್ಬರ ರಿಲೇಷನ್ಶಿಪ್ ಕನ್ಫರ್ಮ್ ಆಗಿದೆ ಎಂದ ನೆಟ್ಟಿಗರು..!!ತೆಲುಗು ಚಿತ್ರರಂಗದ ಖ್ಯಾತ ನಟ ನಾಗಚೈತನ್ಯ ಅವರು ಸಮಂತಾ ಅವರೊಂದಿಗಿನ ವಿಚ್ಛೇದನದ ಬಳಿಕ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿಲ್ಲೊಂದು ಕಾರಣಕ್ಕಾಗಿ ನಾಗಚೈತನ್ಯ ಅವರ ಕುರಿತಾದ ವದಂತಿಗಳು ಚರ್ಚೆಯಲ್ಲಿರುತ್ತವೆ.

ಈ ವರ್ಷ ಹೊಸ ಹೊಸ ಚಿತ್ರಗಳ ಕುರಿತಾದ ಸುದ್ದಿಗಿಂತಲೂ ಹೆಚ್ಚಾಗಿ ಡೇಟಿಂಗ್ ನ ವಿಚಾರವಾಗಿ ನಾಗಚೈತನ್ಯ ಅವರು ಸುದ್ದಿಯಲ್ಲಿದ್ದಾರೆ. ಇತ್ತೀಚಿಗಷ್ಟೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ನಾಗ ಚೈತನ್ಯ ಅವರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಪ್ರೀತಿ ಪ್ರೇಮದ ವಿಚಾರವಾಗಿ ಫೋಟೋ ಒಂದು ಎಲ್ಲೆಡೆ ಹರಿದಾಡುತ್ತಿದೆ.

ಹೌದು. ಖ್ಯಾತ ನಟಿ ಸಮಂತಾ ಹಾಗೂ ನಾಗಚೈತನ್ಯ ಅವರು ಪ್ರೀತಿಸಿ ವಿವಾಹವಾಗಿದ್ದರು. ವಿವಾಹವಾದ ಕೆಲವು ವರ್ಷಗಳ ಬಳಿಕ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ, ವಿಚ್ಛೇದನವನ್ನು ಪಡೆದರು. ವಿಚ್ಛೇದನವನ್ನು ಪಡೆದ ಬಳಿಕ ನಾಗಚೈತನ್ಯ ಅವರು ಮತ್ತೋರ್ವ ನಟಿಯೊಂದಿಗೆ ಪ್ರೇಮದಲ್ಲಿ ತೇಲಾಡುತ್ತಿದ್ದಾರೆ ಎಂಬ ಸುದ್ದಿಯು ಆಗಾಗ ಕೇಳಿ ಬರುತ್ತಿತ್ತು. ಸ್ಟಾರ್ ನಟ ನಾಗಚೈತನ್ಯ ಹಾಗೂ ನಟಿ ಶೋಭಿತ ಡೇಟಿಂಗ್ ನಲ್ಲಿದ್ದಾರೆ ಎಂದು ಸುದ್ದಿಯಾಗಿತ್ತು. ಅವರಿಬ್ಬರೂ ಒಟ್ಟಿಗೆ ಔಟಿಂಗ್ ಹೋಗುತ್ತಾರೆ; ಔತಣ ಮಾಡುತ್ತಾರೆ ಎಂದೆಲ್ಲ ಕೆಲ ತಿಂಗಳ ಹಿಂದಷ್ಟೇ ಸುದ್ದಿಯಾಗಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ ನಾಗ ಚೈತನ್ಯ ಹಾಗೂ ನಟಿ ಶೋಭಿತ ಜೊತೆಯಾಗಿ ನಿಂತ ಫೋಟೋ ವೈರಲ್ಲಾಗಿದೆ.

ಫೋಟೋದಲ್ಲಿ ಕಾಣುವಂತೆ ನಾಗಚೈತನ್ಯ ಹಾಗೂ ನಟಿ ಶೋಭಿತ ಇಬ್ಬರೂ ಕೂಡ ಕಪ್ಪಗಿನ ಉದ್ದವಾದ ಜಾಕೆಟ್ ಅನ್ನು ಧರಿಸಿದ್ದಾರೆ. ನಾಗಚೈತನ್ಯ ಅವರು ಗಾಗಲ್ ಒಂದನ್ನು ಬಟ್ಟೆಗೆ ಸಿಕ್ಕಿಸಿಕೊಂಡಿದ್ದಾರೆ. ನಟಿ, ಶೋಭಿತಾ ಕ್ಯಾಪ್ ಅನ್ನು ಧರಿಸಿದ್ದು, ಬ್ಯಾಗ್ ಒಂದನ್ನು ಭುಜಕ್ಕೇರಿಸಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಬಳಿಕ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.

Nagachaitanya dating telugu actress shobhita

ಕೆಲವರು ‘ಈ ಫೋಟೋವನ್ನು ಎಡಿಟ್ ಮಾಡಲಾಗಿದೆ; ಇದು ಫೇಕ್ ಫೋಟೋ’ ಎಂದು ಹೇಳಿದ್ದರೆ, ಇನ್ನೂ ಕೆಲವರು ‘ನಾಗಚೈತನ್ಯ ಹಾಗೂ ಶೋಭಿತಾ ಅವರ ರಿಲೇಶನ್ಶಿಪ್ ಕನ್ಫರ್ಮ್ ಆಗಿದೆ’ ಎಂದಿದ್ದಾರೆ. ಇನ್ನು ಸಮಂತಾ ಅಭಿಮಾನಿಗಳು ‘ನಾಗಚೈತನ್ಯ ಅವರು ಶೋಭಿತಾ ಅವರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ ಎಂಬ ಕಾರಣಕ್ಕಾಗಿ ವಿಚ್ಛೇದನ ನೀಡಿದ್ದಾರೆ’ ಎಂದು ಕಾಮೆಂಟ್ಸ್ ಮಾಡಿದ್ದಾರೆ. ನಾಗಚೈತನ್ಯ ಅವರು ವೆಂಕಟ ಪ್ರಭು ನಿರ್ದೇಶನದ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದ್ದು ಹೆಚ್ಚೆಚ್ಚು ವೀವ್ಸ್ ಹಾಗೂ ಲೈಕ್ಸ್ ಗಳು ದೊರೆತಿವೆ.


Leave A Reply

Your email address will not be published.