Mahesh Babu: ಮಹೇಶ್ ಬಾಬು ಮಾಡಿರೋ ಈ ಕೆಲಸದ ಬಗ್ಗೆ ಕೇಳಿದರೆ ನೀವು ಕೂಡ ಮೆಚ್ತೀರಾ! ನಿಜವಾದ ದೇವರು ಮಹೇಶ್ ಬಾಬು.
Mahesh Babu Actor ಕನ್ನಡದ ನಟರ ಕುರಿತಂತೆ ನಮಗೆ ಸಾಕಷ್ಟು ವಿಚಾರಗಳು ತಿಳಿದಿರುತ್ತವೆ ಆದರೆ ಪರಭಾಷೆಯ ನಟರು ಕೂಡ ಮಾಡುವಂತಹ ಕೆಲವೊಂದು ಜನ ಉಪಯೋಗಿ ಕೆಲಸಗಳ ಬಗ್ಗೆ ತಿಳಿದುಕೊಳ್ಳಬೇಕಾದ ಸನ್ನಿವೇಶಗಳು ಮೂಡಿಬರುತ್ತವೆ. ಅವುಗಳಲ್ಲಿ ಇಂದು ನಾವು ಹೇಳಲು ಹೊರಟಿರುವುದು ಕೂಡ ತೆಲುಗು ಚಿತ್ರರಂಗದ ಖ್ಯಾತ ನಟರೊಬ್ಬರ ಬಗ್ಗೆ. ಹೌದು, ಟೈಟಲ್ ನೋಡಿ ನೀವೇ ತಿಳಿದಿರಬಹುದು ನಾವ್ ಮಾತನಾಡಲು ಹೊರಟಿರುವುದು ಮಹೇಶ್ ಬಾಬು(Mahesh Babu) ಅವರ ಬಗ್ಗೆ.
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿರುವ ಮಹೇಶ್ ಬಾಬು ರವರು ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಆಗಿದ್ದ ಕೃಷ್ಣ(Super Star Krishna) ಅವರ ಸುಪುತ್ರ. ತಂದೆಯ ನಂತರ ಅವರ ಲೆಗಸ್ಸಿಯನ್ನು ಚಿತ್ರರಂಗದಲ್ಲಿ ಸಾರಿದಂತಹ ಯಶಸ್ವಿ ನಾಯಕ ನಟ. ರಾಜ ಮೌಳಿ(Rajamouli) ಅವರ ಮುಂದಿನ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ಅವರು ಕಾಣಿಸಿಕೊಳ್ಳುತ್ತಿದ್ದು ಈ ಸಿನಿಮಾ ಭಾರತ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಬಜೆಟ್ ಅನ್ನು ಹೊಂದಿರುವ ಸಿನಿಮಾ ಆಗಿರಲಿದೆ.

ಇದೆಲ್ಲ ಸಿನಿಮಾ ವಿಚಾರ ಆದರೆ ನಾವೀಗ ಮಾತನಾಡಲು ಹೊರಟಿರುವುದು ಮಹೇಶ್ ಬಾಬು(SSMB) ಅವರ ಇನ್ನೊಂದು ಮುಖದ ಕುರಿತಂತೆ. ಹೌದು ಮಹೇಶ್ ಬಾಬು ಅವರು ಚಿಕ್ಕ ಮಕ್ಕಳ ವಿಚಾರದ ಕುರಿತಂತೆ ಸಾಕಷ್ಟು ಆಸಕ್ತಿ ಹಾಗೂ ಪ್ರೀತಿಯನ್ನು ಹೊಂದಿದ್ದಾರೆ. ಹೀಗಾಗಿಯೇ ಬಡ ಮಕ್ಕಳ ಚಿಕಿತ್ಸೆಗಾಗಿ ಅವರು ಮಾಡುತ್ತಿರುವ ಖರ್ಚು ನೋಡಿದರೆ ಖಂಡಿತವಾಗಿ ನೀವು ಕೂಡ ಬೆಕ್ಕಸ ಬೆರಗಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಇದುವರೆಗೂ ಮಹೇಶ್ ಬಾಬು(Super Star Mahesh Babu) ಅವರು ತಮ್ಮ ಸ್ವಂತ ಖರ್ಚಿನ ಮೂಲಕ ತಮ್ಮ ಟ್ರಸ್ಟ್ ಕಡೆಯಿಂದ ಸಾವಿರಕ್ಕೂ ಹೆಚ್ಚಿನ ಮಕ್ಕಳಿಗೆ ಹೃದಯ ಸಂಬಂಧಿ ಆಪರೇಷನ್ ಸೇರಿದಂತೆ ಚಿಕಿತ್ಸೆಗೆ ತಮ್ಮ ಸ್ವಂತ ಖರ್ಚಿನಿಂದ ಹಣ ನೀಡಿ ಗುಣಪಡಿಸಿದ್ದಾರೆ. ಇವರಿಂದ ಸಹಾಯ ಪಡೆದುಕೊಂಡಿರುವ ಪ್ರತಿಯೊಬ್ಬರೂ ಕೂಡ ದೇವರಿಗಿಂತ ಹೆಚ್ಚಾಗಿ ಮಹೇಶ್ ಬಾಬು ಅವರನ್ನು ತಮ್ಮ ಜೀವನದಲ್ಲಿ ಪೂಜಿಸುತ್ತಿದ್ದಾರೆ ಇದು ಮಹೇಶ್ ಬಾಬು ಅವರು ಸಂಪಾದಿಸಿರುವ ನಿಜವಾದ ಸಂಪಾದನೆ ಎಂದು ಹೇಳಬಹುದು.