ಅಪ್ಪುವಿನ ಮರ’ಣೋತ್ತರ ಡಾಕ್ಟರೇಟ್ ಪದವಿ ಪಡೆದ ಅಶ್ವಿನಿ ಪುನೀತ್ ಅವರು ಆಡಿದ ಭಾವುಕ ಮಾತುಗಳನ್ನು ಕೇಳಿದರೆ ಮನಸ್ಸು ಕರಗುತ್ತೆ

ಮನುಷ್ಯ ಬದುಕಿದ್ದಾಗ ಅಷ್ಟೇ ಅಲ್ಲದೆ ಅವನು ಇಲ್ಲದಿದ್ದಾಗ ಕೂಡ ಸಾಧನೆ ಮಾಡಬಹುದು ಎನ್ನುವುದಕ್ಕೆ ಪುನೀತ್ ರಾಜ್ ಕುಮಾರ್ ಅವರೇ ಸಾಕ್ಷಿ. ನಾವೆಲ್ಲ ಬದುಕಿದ್ದಾಗ ಮಾಡಿದ ಕೆಲಸದ ಪ್ರತಿಫಲವು ನಾವು ಸ ತ್ತ ಮೇಲೆ ಸಿಗುತ್ತೆ. ನಾವೆಲ್ಲ 4 ಜನರಿಗೆ ಸಹಾಯ ಮಾಡಿದರೆ ಅದನ್ನೇ ನಲವತ್ತು ಜನರಿಗೆ ಹೇಳಿಕೊಂಡು ತಿರುಗುತ್ತೇವೆ ಆದರೆ ಸದ್ದಿಲ್ಲದೆ ಸಾವಿರಾರು ಮಂದಿಗೆ ಸಹಾಯ ಮಾಡಿದ ಪುನೀತ್ ನಿಜಕ್ಕೂ ಗ್ರೇಟ್ ಅಲ್ವಾ. ಅದಕ್ಕೆ ಅವರಿಗೆ ಸಿಗಬೇಕಾದ ಗೌರವ ಈಗ ಸಿಕ್ಕಿದೆ.

ಪುನೀತ್ ಅವರು ತೀರಿಕೊಂಡ ನಂತರವೇ ಅವರಿಗೆ ಕರ್ನಾಟಕ ರತ್ನ ಪದವಿಯನ್ನು ನೀಡಲಾಯಿತು ರಾಜ್ಕುಮಾರ್ ಅವರನ್ನು ಬಿಟ್ಟರೆ ಚಿತ್ರರಂಗದಲ್ಲಿ ಕರ್ನಾಟಕ ರತ್ನ ಪದವಿ ಪಡೆದವರು ಪುನೀತ್ ಮಾತ್ರ. ಅಷ್ಟೇ ಅಲ್ಲ ಇದೀಗ ಪುನೀತ್ ಅವರಿಗೆ ಗೌರವ ಮರ’ಣೋತ್ತರ ಡಾಕ್ಟರೆಟ್ ಪದವಿ ಕೂಡ ಸಿಕ್ಕಿದೆ. ಶಾಲೆಗೆ ಹೋಗದೇ ಇದ್ದರೂ ಕೂಡ ಪುನೀತ್ ಅವರಿಗೆ ಡಾಕ್ಟರೇಟ್ ಸಿಕ್ಕಿದೆ. ಡಾಕ್ಟರೇಟ್ ಪಡೆಯುವುದಕ್ಕೆ ಶಿಕ್ಷಣ ಮುಖ್ಯ ಅಲ್ಲ.

ಇಂದು ಮಾರ್ಚ್ ರಂದು ಮೈಸೂರು ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಂತಹ ಮೈಸೂರು ವಿಶ್ವವಿದ್ಯಾಲಯ ಘಟಕದ ಕಾರ್ಯಕ್ರಮವೊಂದರಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗಿದೆ ಇದನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸ್ವೀಕರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ದೊಡ್ಮನೆ ಕುಟುಂಬದ ಸದಸ್ಯರು ಕೂಡ ಭಾಗಿಯಾಗಿದ್ದರು. ಅಶ್ವಿನಿ ಅವರಿಗೆ ಸನ್ಮಾನ ಮಾಡುವ ಸಂದರ್ಭದಲ್ಲಿ ದೊಡ್ಮನೆ ಕುಟುಂಬದವರೆಲ್ಲ ಭಾವುಕರಾಗಿದ್ದರು.

ಪ್ರತಿಯೊಬ್ಬರ ಕಣ್ಣಲ್ಲೂ ನೀರು ತುಂಬಿತ್ತು. ಅಶ್ವಿನಿ ಅಶ್ವಿನಿ ಅವರ ಮುಖದಲ್ಲಿ ಪುನೀತ್ ಅವರ ಸಾಧನೆಯ ಪ್ರತಿಬಿಂಬ ಕಾಣುತ್ತಿತ್ತು. ಡಾಕ್ಟರೇಟ್ ಪದವಿ ಸ್ವೀಕರಿಸಿದ ನಂತರ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಆಡಿದ ಭಾವುಕ ಮಾತುಗಳು ಪ್ರತಿಯೊಬ್ಬರ ಹೃದಯವನ್ನು ಕರಗಿಸಿತು. ಕೂಡ ಪುನೀತ್ ಅವರಿಗೆ ಡಾಕ್ಟರೇಟ್ ಪದವಿ ಸ್ವೀಕರಿಸಲು ಆಹ್ವಾನಗಳು ಬಂದಿದ್ದವು. ಆದರೆ ಪುನೀತ್ ಅವರು ನಾನಿದಕ್ಕೆ ಅರ್ಹನಲ್ಲ ಎಂದು ವಿನಯದಿಂದಲೇ ತಿರಸ್ಕರಿಸಿದ್ದರು ಎಂದು ಅಶ್ವಿನಿ ಅವರು ನೆನಪಿಸಿಕೊಂಡಿದ್ದಾರೆ.

ನಿಮ್ಮ ತಂದೆಯವರಿಗೂ ಕೂಡ ನೀಡಿದ್ದೇವೆ ನೀವು ಕೂಡ ಸ್ವೀಕರಿಸಿ ಎಂದು ಪುನೀತ್ ಬಳಿ ಹಲವಾರು ಸಲ ಹೇಳಿದ್ದರು ಆದರೆ ಪುನೀತ್ ಅವರು ನನ್ನ ತಂದೆಯ ತೂಕ ಬೇರೆ ನನ್ನ ತೂಕ ಬೇರೆ ನಾನು ಇನ್ನೂ ಏನೂ ಸಾಧನೆ ಮಾಡಿಲ್ಲ ಎಂದು ಸಮಾಧಾನದಿಂದಲೇ ಉತ್ತರಿಸಿದರು. ಪುನೀತ್ ಅವರು ಆ ದಿನ ಹೇಳಿದ ಮಾತುಗಳನ್ನು ಮೆಲುಕು ಹಾಕಿದ ಅಶ್ವಿನಿ ಅವರ ಕಣ್ಣಲ್ಲಿ ನೀರು ಜಾರಿ ಬಂತು. ತಕ್ಷಣವೇ ವೇದಿಕೆಯಿಂದ ಕೆಳಗಿಳಿದು ಅಶ್ವಿನಿಯವರು ತಲೆ ಬಗ್ಗಿಸಿಕೊಂಡು ಮನೆಯ ಕಡೆಗೆ ಸಾಗಿದರು. ಮನುಷ್ಯ ಸಹಾಯ ಮಾಡಬೇಕಾದ ಸಮಯದಲ್ಲಿ ಸಹಾಯ ಮಾಡಬೇಕು, ಒಂದಲ್ಲ ಒಂದು ದಿನ ಸನ್ಮಾನ ಸಿಕ್ಕೇ ಸಿಗುತ್ತೆ ಎನ್ನುವುದಕ್ಕೆ ನಮ್ಮ ಪುನೀತ್ ಅವರೇ ಸಾಕ್ಷಿ.

Leave a Comment

error: Content is protected !!