ನೆಗೆಟಿವ್ ಪ್ರಚಾರದ ನಡುವೆ ಅಪ್ಪು ಅವರ ವಿಚಾರದಲ್ಲಿ ದೊಡ್ಡ ತಪ್ಪು ಮಾಡ್ತು ಕ್ರಾಂತಿ ಚಿತ್ರತಂಡ! ಬೇಕಿತ್ತಾ ಇದು?

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟನಾಗಿ ಕಾಣಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿರುವ ವಿ ಹರಿಕೃಷ್ಣ ನಿರ್ದೇಶನದ ಹಾಗೂ ಶೈಲಜ ನಾಗ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕ್ರಾಂತಿ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಕಂಡಿದ್ದು ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ನಲ್ಲಿ ತೋರಿಸಲು ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಸಿನಿಮಾ ಬಿಡುಗಡೆಯ ಸಮೀಪದಲ್ಲಿ ಚಿತ್ರತಂಡದ ಕಳಪೆ ಪ್ರಚಾರವೇ ಇದಕ್ಕೆ ಕಾರಣ ಎಂದರು ಕೂಡ ತಪ್ಪಾಗಲಾರದು. ದರ್ಶನ್ ಸಿನಿಮಾಗೆ ಸಿಗಬೇಕಾಗಿದ್ದ ಓಪನಿಂಗ್(Opening) ಈ ಸಿನಿಮಾಗೆ ಸಿಕ್ಕಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.

ಒಂದೊಳ್ಳೆ ಸಂದೇಶವನ್ನು(Message) ಸಮಾಜಕ್ಕೆ ಸಾರುವಂತ ಸಿನಿಮಾ ಇದಾಗಿದ್ದು ಇದನ್ನು ಪ್ರೇಕ್ಷಕರಿಗೆ ಕಟ್ಟಿಕೊಟ್ಟ ರೀತಿ ಸರಿಯಾಗಿಲ್ಲ ಎಂಬುದಾಗಿ ಪ್ರತಿಯೊಬ್ಬ ವಿಮರ್ಶಕರು ಕೂಡ ಈ ಕುರಿತಂತೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ವಿಹರಿಕೃಷ್ಣ ಸಂಪೂರ್ಣ ನಿರ್ದೇಶಕನಾಗಿ ಈ ಸಿನಿಮಾದ ಮೂಲಕ ವಿಫಲರಾಗಿದ್ದು ತಮ್ಮ ಕಥೆ ಹೇಳುವ ಶೈಲಿಯ ಕುರಿತಂತೆ ಅವರು ಬದಲಾವಣೆಗಳನ್ನು ಮಾಡಬೇಕಾಗಿರುವುದು ಅತ್ಯಗತ್ಯವಾಗಿದೆ. ಡಿ ಬಾಸ್ ಅವರ ಲುಕ್ ಕೂಡ ಈ ಸಿನಿಮಾದಲ್ಲಿ ಅಷ್ಟೊಂದು ಸಮಂಜಸವಾಗಿಲ್ಲ. ಹೇಳುತ್ತಾ ಹೋದರೆ ಕ್ರಾಂತಿ ಸಿನಿಮಾದಲ್ಲಿ ಹಲವಾರು ಲೋಪದೋಷಗಳು ಬಹಿರಂಗವಾಗಿಯೇ ಕಂಡುಬರುತ್ತದೆ. ಕೆಲವು ವರ್ಗದ ಡಿ ಬಾಸ್ ಅಭಿಮಾನಿಗಳನ್ನು ಕೂಡ ಈ ಸಿನಿಮಾ ಸಿಟ್ಟಿಗೆಳುವಂತೆ ಮಾಡಿದೆ.

kranti challenging star darshan

ಚಿತ್ರದ ಕಲೆಕ್ಷನ್ ಕೂಡ ಬಾಲಿವುಡ್ ಚಿತ್ರದ ಪಠಾಣ್ ಕಲೆಕ್ಷನ್(Collection) ಅನ್ನು ಕೂಡ ಬೆಂಗಳೂರಿನಲ್ಲಿ ಮೀರಿಸುತ್ತಿಲ್ಲ ಎನ್ನುವುದೇ ನಿಜಕ್ಕೂ ಬೇಸರದ ಸಂಗತಿಯಾಗಿದೆ. ಇದರ ನಡುವೆ ಕೂಡ ಕ್ರಾಂತಿ ಸಿನಿಮಾ ಇನ್ನೊಂದು ದೊಡ್ಡ ತಪ್ಪನ್ನು ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಅಭಿಮಾನಿಗಳ ಮತ್ತು ಅಪ್ಪು ಅಭಿಮಾನಿಗಳ ನಡುವೆ ಎಲ್ಲವೂ ಸರಿಯಾಗಿಲ್ಲ. ಸಾಕಷ್ಟು ಸಮಯಗಳಿಂದ ಇವರ ನಡುವೆ ನೇರ ಗುದ್ದಾಟ ನಡೆಯುತ್ತಿದೆ. ಇದರ ನಡುವಲ್ಲಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ಕಾಣಿಸಿಕೊಂಡಿರುವ ಕ್ರಾಂತಿ ಸಿನಿಮಾ ತಂಡ ಮತ್ತೊಂದು ದೊಡ್ಡ ತಪ್ಪು ಮಾಡಿ ಈ ಜಗಳಕ್ಕೆ ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದಾರೆ.

ಹೌದು ಮಿತ್ರರೇ ಕನ್ನಡ ಸಿನಿಮಾಗಳಿಂದ ಹಿಡಿದು ಪರಭಾಷಾ ಸಿನಿಮಾ ಹಾಗೂ ಕಿರು ಚಿತ್ರಗಳವರೆಗೂ ಕೂಡ ಆರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸುವ ಟ್ರಿಬ್ಯುಟ್(Tribute) ವಿಡಿಯೋವನ್ನು ಪ್ರತಿಯೊಂದು ಸಿನಿಮಾ ತಂಡಗಳು ಕೂಡ ಹಾಕುತ್ತಿವೆ. ಆದರೆ ಕನ್ನಡಕ್ಕೆ ಸಿನಿಮಾ ಆಗಿರುವ ಕ್ರಾಂತಿ ಸಿನಿಮಾದಲ್ಲಿ ಮಾತ್ರ ಅಪ್ಪು ಅವರನ್ನು ಸ್ಮರಿಸುವ ಕಾರ್ಯ ಎಲ್ಲಿಯೂ ಕೂಡ ನಡೆದಿಲ್ಲ. ಇದು ಕೇವಲ ಅಪ್ಪು ಅಭಿಮಾನಿಗಳಿಗೆ ಮಾತ್ರವಲ್ಲದೆ ಕನ್ನಡ ಸಿನಿಮಾ ರಸಿಕರೆಲ್ಲರಿಗೂ ಕೂಡ ಅಸಮಾಧಾನವನ್ನು ತರಿಸಿದೆ ಎನ್ನಬಹುದಾಗಿದೆ. ಚಿತ್ರತಂಡದ ನಿರ್ಲಕ್ಷವೇ ಈಗ ಚಿತ್ರದ ಕುರಿತಂತೆ ಇನ್ನಷ್ಟು ಅಸಮಾಧಾನವನ್ನು ಪ್ರೇಕ್ಷಕರಲ್ಲಿ ಮೂಡುವಂತೆ ಮಾಡಿದೆ ಎನ್ನಬಹುದಾಗಿದೆ.

Leave a Comment

error: Content is protected !!