Kranti ಡಿ ಬಾಸ್ ಅಭಿಮಾನಿಗಳ ನಿರೀಕ್ಷೆ ಹುಸಿ ಆಯ್ತಾ? ಕ್ರಾಂತಿ ಮೊದಲ ದಿನ ಗಳಿಸಿದ್ದೆಷ್ಟು ಕೋಟಿ?

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ಕ್ರಾಂತಿ ಸಿನಿಮಾ ಕೊನೆಗೂ ಈಗ ಬಿಡುಗಡೆ ಆಗಿದ್ದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಸಾಕಷ್ಟು ವರ್ಷಗಳ ನಂತರ ಡಿ ಬಾಸ್ ನಟನೆಯ ಸಿನಿಮಾ ದೊಡ್ಡಪರದೆಯ ಮೇಲೆ ಬಿಡುಗಡೆ ಕಾಣುತ್ತಿದ್ದು ಸಹಜವಾಗಿ ಅಭಿಮಾನಿಗಳಲ್ಲಿ(Fans) ಸಂತಸದ ವಾತಾವರಣ ನಿರ್ಮಾಣವಾಗಿತ್ತು ಎಂದರೆ ತಪ್ಪಾಗಲಾರದು.

ಆದರೆ ಕೆಲವೊಂದು ಮೂಲಗಳ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹನಿರೀಕ್ಷಿತ ಕ್ರಾಂತಿ ಸಿನಿಮಾ ಅಭಿಮಾನಿಗಳ ಹಾಗೂ ಕೆಲವು ವರ್ಗದ ಪ್ರೇಕ್ಷಕರ ಮನವನ್ನು ಗೆಲ್ಲಲು ಯಶಸ್ವಿಯಾಗಿಲ್ಲ ಎಂಬುದಾಗಿ ತಿಳಿದು ಬಂದಿದೆ. ಅದೇ ಹಳೆ ಮಾದರಿಯ ಕಥೆಯನ್ನು ಹೊಸ ಮುಖಪುಟದೊಂದಿಗೆ ತರಲಾಗಿದೆ ಎಂಬುದಾಗಿ ಕೆಲವರು ಸಿನಿಮಾ ವಿಮರ್ಶಕರು(Reviewer) ಕೂಡ ಮೂಗು ಮುರಿದಿದ್ದಾರೆ. ಇನ್ನು ಇದಲ್ಲದೆ ಕ್ರಾಂತಿ ಸಿನಿಮಾ ಹಾಗೂ ಸಿನಿಮಾಗೆ ಸಂಬಂಧಪಟ್ಟ ಕಲಾವಿದರ ಕುರಿತಂತೆ ಇರುವಂತಹ ಕೆಲವೊಂದು ವಿಚಾರಗಳು ಕೂಡ ಕ್ರಾಂತಿ ಸಿನಿಮಾದ ಕಲೆಕ್ಷನ್ ಗೆ ನಕಾರಾತ್ಮಕವಾಗಿ ಪರಿಣಮಿಸಿದೆ ಎನ್ನಬಹುದು.

Dboss Kranti

ವರ್ಷದ ಮೊದಲ ದೊಡ್ಡ ಬಜೆಟ್(Budget) ಕನ್ನಡ ಸಿನಿಮಾ ಗೆಲುವು ಕಾಣ ಬೇಕಾಗಿತ್ತು ಎಂಬುದಾಗಿ ಎಲ್ಲರೂ ಕೂಡ ಬಯಸಿದ್ದರು ಆದರೆ ಕ್ರಾಂತಿ ಸಿನಿಮಾ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನವನ್ನು ತೋರಿಲ್ಲ ಎಂದು ಹೇಳಬಹುದಾಗಿದೆ. ಇದಕ್ಕೆ ಬಾಲಿವುಡ್ ನ ಬಿಗ್ ಬಜೆಟ್ ಸಿನಿಮಾ ಆಗಿರುವ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಕೂಡ ಕಾರಣವಾಗಿದೆ. ಇಷ್ಟೆಲ್ಲ ಜಂಜಾಟದ ನಡುವೆ ಕೂಡ ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ ಮೊದಲ ದಿನ ಎಷ್ಟು ಗಳಿಸಿದೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮಿತ್ರರೇ ಕ್ರಾಂತಿ ಬಾಕ್ಸ್ ಆಫೀಸ್ ನಲ್ಲಿ ಸಂಪೂರ್ಣವಾಗಿ ಕ್ರಾಂತಿ ಮಾಡಲು ವಿಫಲವಾದರೂ ಕೂಡ ಇಷ್ಟೆಲ್ಲ ವಿಚಾರಗಳ ನಡುವೆಯೂ ಕೂಡ ಅಧಿಕಾರ ಯುದ್ಧ 13 ರಿಂದ 15 ಕೋಟಿ ಕಲೆಕ್ಷನ್ ಅನ್ನು ಮೊದಲ ದಿನ ಗಳಿಸಿದೆ. ಮುಂದಿನ ದಿನಗಳಲ್ಲಿ ಸಿನಿಮಾದ ಕುರಿತಂತೆ ಉತ್ತಮ ಪ್ರತಿಕ್ರಿಯೆ ಒಂದು ವೇಳೆ ವ್ಯಕ್ತವಾದರೇ ಖಂಡಿತವಾಗಿ ದರ್ಶನ್ ಅವರ ಶಿಕ್ಷಣ ಕ್ರಾಂತಿಯ ಈ ಕ್ರಾಂತಿ ಸಿನಿಮಾ ದೊಡ್ಡಮಟ್ಟದ ಕಲೆಕ್ಷನ್(Collection) ಅನ್ನು ನಿರ್ಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಒಂದು ವೇಳೆ ನೀವು ಕೂಡ ಕ್ರಾಂತಿ ಸಿನಿಮಾವನ್ನು ನೋಡಿದರೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!