Darshan ಡಿ ಬಾಸ್ ಅಭಿಮಾನಿಗಳಿಂದ ಘೋಷಣೆಯಾಯಿತು ಸಿಹಿ ಸುದ್ಧಿ. ಡಿ ಬಾಸ್ ಅಭಿಮಾನಿಗಳು ಕಾಲರ್ ಎತ್ತೋ ಟೈಮ್ ಬಂತು.

Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವಂತಹ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಗಣರಾಜ್ಯೋತ್ಸವದ ದಿನದ ವಿಶೇಷವಾಗಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಆರಂಭಿಕವಾಗಿ ಚಿತ್ರ ಅಷ್ಟೊಂದು ಗಣನೀಯವಾದ ಕಲೆಕ್ಷನ್ ಅನ್ನು ಪಡೆದಿರಲಿಲ್ಲ ಎನ್ನುವ ಮಾತಿತ್ತು. ಆದರೆ ವಾರಾಂತ್ಯದಲ್ಲಿ(Weekend) ಒಳ್ಳೆಯ ಕಲೆಕ್ಷನ್ ಅನ್ನೇ ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಕ್ರಾಂತಿ ಸಿನಿಮಾ ಮಾಡಿದೆ. ಇದು ಅಭಿಮಾನಿಗಳ ಮನಸ್ಸಿನಲ್ಲಿ ಸಂತೋಷ ಮೂಡುವಂತೆ ಮಾಡಿದೆ.

ಹೌದು ಮಿತ್ರರೇ ವಾರಂತ್ಯದಲ್ಲಿ ಎರಡು ದಿನಗಳಲ್ಲಿಯೂ ಕೂಡ ಹಲವಾರು ಕಡೆಗಳಲ್ಲಿ ಕ್ರಾಂತಿ ಸಿನಿಮಾ ಹೌಸ್ ಫುಲ್ ಬೋರ್ಡ್ ಗಳನ್ನು ಕಂಡಿದೆ. ಮಾಧ್ಯಮಗಳ ಪ್ರಚಾರ ಇಲ್ಲದೆ ಬೇರೆ ಯಾವುದೇ ಸಪೋರ್ಟ್ ಇಲ್ಲದಿದ್ದರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಈ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ಈಗ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಾಕ್ಸ್ ಆಫೀಸ್ ನಲ್ಲಿ(Box office) ಸೌಂಡ್ ಮಾಡುತ್ತಿದೆ. ಈ ವಿಚಾರವನ್ನು ಪ್ರತಿಯೊಬ್ಬರೂ ಕೂಡ ಮೆಚ್ಚಬೇಕು.

ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದ ವಿರುದ್ಧವಾಗಿ ಬಿಡುಗಡೆಯಾದ ಕ್ರಾಂತಿ ಸಿನಿಮಾ ಕರ್ನಾಟಕದಲ್ಲಿ ಗೆಲುವಿನ(Victory) ಕೇಕೆಯನ್ನು ಹಾಕಿದೆ ಎನ್ನಬಹುದಾಗಿದೆ. ಇದರ ಬೆನ್ನಲ್ಲೇ ಕ್ರಾಂತಿ ಸಿನಿಮಾ ತಂಡ ಈಗ ಅಭಿಮಾನಿಗಳಿಗೆ ಒಂದು ಸಂತೋಷದ ಸುದ್ದಿಯನ್ನು ಅಧಿಕೃತವಾಗಿ ಹಂಚಿಕೊಂಡಿದೆ. ಹಾಗಿದ್ದರೆ ಆ ಸಂತೋಷದ ಸುದ್ದಿ ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ದರ್ಶನ್ ಅವರ ಸೆಲೆಬ್ರಿಟಿಗಳು ಸೆಲೆಬ್ರೇಟ್ ಮಾಡುವಂತಹ ವಿಚಾರವೊಂದು ಕ್ರಾಂತಿ ಚಿತ್ರತಂಡದಿಂದ ಹೊರಬಂದಿದ್ದು ಕ್ರಾಂತಿ ಸಿನಿಮಾ ಇದಾಗಲೇ ಬಾಕ್ಸ್ ಆಫೀಸ್ ಕಲೆಕ್ಷನ್ ಡಿಜಿಟಲ್ ಹಕ್ಕುಗಳು ಹಾಗೂ ಟಿವಿ ಮತ್ತು ಆಡಿಯೋ ರೈಟ್ಸ್ ಮೂಲಕ ಒಟ್ಟಾರೆಯಾಗಿ ನೂರು ಕೋಟಿ ರೂಪಾಯಿ ಗಳಿಕೆಯನ್ನು ದಾಟಿದೆ ಎಂಬುದಾಗಿ ತಿಳಿದು ಬಂದಿದೆ‌. ಈ ಮೂಲಕ ದರ್ಶನ್ ನಟನೆಯ ಮತ್ತೊಂದು ಸಿನಿಮಾ ನೂರು ಕೋಟಿ ಗಳಿಕೆಯ ಸಿನಿಮಾಗಳ ಸಾಲಿನಲ್ಲಿ ಕಂಡುಬಂದಿರುವುದು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕರಿಗೂ ಕೂಡ ಹೆಮ್ಮೆಪಡುವಂತಹ ವಿಚಾರವಾಗಿದೆ. ನೀವು ಕೂಡ ಕ್ರಾಂತಿ ಸಿನಿಮಾವನ್ನು ನೋಡಿದರೆ ತಪ್ಪದೇ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Comment

error: Content is protected !!