ದಯವಿಟ್ಟು ಶೇರ್ ಮಾಡಿ ಗೆಳೆಯರೇ

ನಮ್ಮ ರಂಗದಲ್ಲಿ ಸ್ನೇಹಿತರನ್ನು ಹೊಂದುವುದು ಸಹಜ.ಕನ್ನಡ ಚಿತ್ರರಂಗದಲ್ಲಿ ನಟ ನಟಿಯರು ಸ್ನೇಹವನ್ನು ಹೊಂದುವುದು ಗೊತ್ತಿರುವ ವಿಚಾರ. ಕುಚಿಕು ಕುಚುಕು ಹಾಡಿನಲ್ಲಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡ ಸಾಹಸಸಿಂಹ ವಿಷ್ಣುವರ್ಧನ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅವರ ದೋಸ್ತಿ ಒಳ್ಳೆ ಉದಾಹರಣೆಯಾಗಿದೆ ಚಿತ್ರದಲ್ಲಿ ಅಷ್ಟೇ ಅಲ್ಲದೆ ವೈಯಕ್ತಿಕ ಜೀವನದಲ್ಲೂ ಮಾದರಿಯಾಗುವಂತ ಸ್ನೇಹವನ್ನು ಉಳಿಸಿಕೊಂಡಿರುವ ಜೋಡಿ ಇದು.

ಸಮಕಾಲಿನ ನಟರಾದ ಅಭಿನಯ ಚಕ್ರವರ್ತಿ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸ್ನೇಹ ಕೂಡ ಚೆನ್ನಾಗಿತ್ತು .ಕೆಲವೊಂದು ಇವೆಂಟ್ಸ್ ಗಳಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡು, ಫೋಟೋ ಶೇರ್ ಮಾಡಿದ್ದಿದೆ. ಒಬ್ಬರ ಚಿತ್ರಕ್ಕೆ ಇನ್ನೊಬ್ಬರು ಬೆಂಬಲ ನೀಡಿದ್ದಿದೆ. ಪ್ರಶಸ್ತಿ ಸಮಾರಂಭಗಳಿಗೂ ಒಟ್ಟಿಗೆ ವೇದಿಕೆಯ ಮೇಲೆಕಾಣಿಸಿಕೊಂಡು ಕೈ ಕೈ ಹಿಡಿದು ಸ್ಟೆಪ್ ಹಾಕಿದ್ದನ್ನು ನೋಡಿದ್ದೇವೆ. ಇತ್ತೀಚಿಗೆ ಕಾರಣಾಂತರಗಳಿಂದ ಇವರಿಬ್ಬರೂ ದೂರ ಉಳಿದಿದ್ದಾರೆ ಎನ್ನಲಾಗುತ್ತಿದೆ.

ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಸುದೀಪ್ ಪತ್ನಿ ಪ್ರಿಯ ಸುದೀಪ್ ಇವರಿಬ್ಬರೂ ಕೂಡ ಒಳ್ಳೆಯ ಗೆಳೆತನ ಹೊಂದಿದ್ದು, ಆಗಾಗ ಒಟ್ಟಿಗೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಮಕ್ಕಳ ಪ್ರವಾಸ ಪಾರ್ಟಿಯಲ್ಲೂ ಒಟ್ಟಿಗೆ ಕಾಣಿಸಿಕೊಂಡ ಈ ಜೋಡಿ ಗಂಡಂದಿರ ಸ್ನೇಹದಲ್ಲಿ ಬಿರುಕು ಮೂಡಿದ ಕ್ಷಣದಿಂದ ಮಾತನಾಡುವುದನ್ನು ನಿಲ್ಲಿಸಿ ಬಿಟ್ಟಿದ್ದಾರೆ ಎನ್ನಲಾಗುತ್ತಿತ್ತು. ಕಳೆದ ಒಂದು ವರ್ಷದಿಂದ ಇವರಿಬ್ಬರ ಭೇಟಿ ಕೂಡ ಇರಲಿಲ್ಲವಂತೆ.

ಹೊಸ ವಿಷಯ ಏನಪ್ಪಾ ಅಂದ್ರೆ, ವಿಜಯಲಕ್ಷ್ಮಿ ಹಾಗೂ ಪ್ರಿಯಾ ಸುದೀಪ್ ಮತ್ತೊಮ್ಮೆ ಒಟ್ಟಿಗೆ ಕಾಣಿಸಿಕೊಂಡಿದ್ದು ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಸ್ನೇಹಿತೆಯರ ಮೆಹಂದಿ ಶಾಸ್ತ್ರದಲ್ಲಿ ಇಬ್ಬರು ಭಾಗಿಯಾಗಿದ್ದು, ಸ್ನೇಹಿತೆಯೊಂದಿಗೆ ಆನಂದದ ಕ್ಷಣಗಳನ್ನು ಸವಿದಿದ್ದಾರೆ. ಒಬ್ಬರನ್ನೊಬ್ಬರು ಖುಷಿಯಿಂದ ಸ್ವಾಗತಿಸಿ ಮೊದಲಿನಂತೆ ಫೋಟೋವನ್ನು ಕ್ಲಿಕ್ಕಿಸಿ ಹಳೆಯ ನೆನಪುಗಳನ್ನು ಅಭಿಮಾನಿಗಳಿಗೆ ಮೂಡಿಸಿದ್ದಾರೆ,.ಅವರ ವಿಡಿಯೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ದರ್ಶನ್ ಮತ್ತು ಸುದೀಪ್ ಅವರು ಕೂಡ ಸ್ನೇಹದ ಬಗ್ಗೆ ಪ್ರಶ್ನಿಸಿದಾಗ ಒಬ್ಬರನ್ನೊಬ್ಬರು ಬಿಟ್ಟು ಕೊಟ್ಟಿಲ್ಲ ಎಂಬುದು ಸಂತಸದ ಸಂಗತಿ.

By admin

Leave a Reply

Your email address will not be published.