Kiccha Sudeep: ಕಿಚ್ಚ ಸುದೀಪ್ ಮಾಡಬೇಕಾಗಿದ್ದ ಆ ಒಂದು ಸಿನಿಮಾವನ್ನು ರಮೇಶ್ ಅರವಿಂದ್ ಮಾಡಿ ದಾಖಲೆ ಸೃಷ್ಟಿಸಿದರು. ಯಾವ ಸಿನಿಮಾ ಗೊತ್ತಾ?

Ramesh Aravind ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರ ನಟನೆ ಹಾಗೂ ಅವರ ಸ್ಥಾನದ ತೂಕದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ನಿಜಕ್ಕೂ ಕೂಡ ಕಿಚ್ಚ ಸುದೀಪ್ ಅವರ ನಟನೆಯನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಪರಭಾಷೆಯ ಸಿನಿಮಾರಂಗಗಳು ಕೂಡ ಮನಸ್ಸು ತುಂಬಿ ಹೊಗಳುತ್ತವೆ. ಅಷ್ಟರ ಮಟ್ಟಿಗೆ ತಮ್ಮ ನಟನೆಯ ಚಾಪನ್ನು ಕಿಚ್ಚ ಸುದೀಪ್ ರವರು ಭಾರತೀಯ ಚಿತ್ರರಂಗದಲ್ಲಿ ಅಚ್ಚೊತ್ತಿದ್ದಾರೆ.

ಇನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮಾಡಬೇಕಾಗಿದ್ದ ಸಿನಿಮಾ ಅವರ ಕೈತಪ್ಪಿ ರಮೇಶ್ ಅರವಿಂದ್(Ramesh Aravind) ರವರು ಮಾಡಿ ನಂತರ ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಅಷ್ಟಕ್ಕೂ ಆ ಸಿನಿಮಾ ಯಾವುದು? ಯಾಕೆ ಆ ಅವಕಾಶ ತಪ್ಪಿ ಹೋಯಿತು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ, ನಾಗತಿಹಳ್ಳಿ ಚಂದ್ರಶೇಖರ್(Nagathihalli Chandrashekar) ರವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಅಮೆರಿಕ ಅಮೆರಿಕ ಸಿನಿಮಾದಲ್ಲಿ ಪ್ರಕಾಶ್ ರಾಜ್(Prakash Raj) ರವರ ಜೊತೆಗೆ ನಾಯಕ ನಟನಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಟಿಸಬೇಕಾಗಿತ್ತು ಆದರೆ ಕೆಲವೊಂದು ಕಾರಣಗಳಿಂದಾಗಿ ಸುದೀಪ್ ರವರು ಈ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಆ ಸಂದರ್ಭದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಈ ಅದ್ಭುತ ಸಿನಿಮಾಗೆ ನಾಯಕನಾಗಿದ್ದೆ ರಮೇಶ್ ಅರವಿಂದ್.

ರಮೇಶ್ ಅರವಿಂದ್(Ramesh Aravind) ರವರು ನಾಯಕನಾದ ನಂತರ ಈ ಸಿನಿಮಾ ಚಿತ್ರೀಕರಣ ಪೂರೈಸಿ ಬಿಡುಗಡೆಯಾದ ನಂತರ ಯಾವ ರೀತಿಯಲ್ಲಿ ಯಶಸ್ಸನ್ನು ಪಡೆದುಕೊಂಡಿದೆ ಎನ್ನುವುದನ್ನು ನಾವು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಅಮೆರಿಕ ಅಮೆರಿಕ(America America) ಸಿನಿಮಾದ ನೂರಾರು ಜನ್ಮಕು ಹಾಡು ಎಂದಿಗೂ ಕೂಡ ಎವರ್ಗ್ರೀನ್ ಸಾಂಗ್ ಆಗಿದೆ. ಇಂದಿಗೂ ಕೂಡ ಕಿಚ್ಚ ಸುದೀಪ್ ರವರು ಕೈಗೆ ಬಂದ ಆ ಅವಕಾಶವನ್ನು ಮಿಸ್ ಮಾಡಿಕೊಂಡರೆ ಎನ್ನುವ ಅಭಿಪ್ರಾಯ ಎಂದಿಗೂ ಕೂಡ ಮೂಡಿಬರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment

error: Content is protected !!