Sanchith Sanjeev: ಕಿಚ್ಚ ಸುದೀಪ್ ಕುಟುಂಬದಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಪ್ರತಿಭೆ ಎಂಟ್ರಿ!

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ನಾಯಕನಾಗಿ ನಿರ್ಮಾಪಕನಾಗಿ ನಿರ್ದೇಶಕನಾಗಿ ಮಾತ್ರವಲ್ಲದೆ ಗಾಯಕನಾಗಿ ಹಾಗೂ ನಿರೂಪಕನಾಗಿ ಕೂಡ ಈಗಾಗಲೇ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಗುರುತನ್ನು ಇಡೀ ಭಾರತೀಯ ಚಿತ್ರರಂಗದಲ್ಲಿ ಸ್ಥಾಪಿಸಿದ್ದಾರೆ. ಕಿಚ್ಚ(Kiccha) ಸುದೀಪ್ ರವರನ್ನು ಸೆಲ್ಫ್ ಮೇಡ್ ಶಹಜಾದ ಎಂದರೂ ಕೂಡ ತಪ್ಪಾಗಲಾರದು.

ಇನ್ನು ಎಲ್ಲಕ್ಕಿಂತ ಪ್ರಮುಖವಾಗಿ ನಟ ಕಿಚ್ಚ ಸುದೀಪ್ ರವರ ಪರಿವಾರದಿಂದ ಈಗ ಮತ್ತೊಂದು ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದೆ. ಹೌದು ನಾವು ಮಾತನಾಡಲು ಹೊರಟಿರುವುದು ಅವರ ಸಹೋದರಿಯ ಮಗ ಆಗಿರುವ ಸಂಚೀತ್ ಸಂಜೀವ್(Sanchith Sanjeev) ಅವರ ಕುರಿತಂತೆ. ಹೌದು ಅತಿ ಶೀಘ್ರದಲ್ಲೇ ಚಿತ್ರರಂಗಕ್ಕೆ ನಾಯಕ ನಟನಾಗಿ ಎಂಟ್ರಿ ನೀಡುವ ಎಲ್ಲಾ ಸಾಧ್ಯತೆಗಳು ಕೂಡ ದಟ್ಟವಾಗಿ ಕಂಡುಬಂದಿದೆ.

ಈಗಾಗಲೇ ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಲ್ಲಿ ಡೈರೆಕ್ಷನ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿರುವಂತಹ ಅನುಭವವನ್ನು ಹೊಂದಿರುವ ಸಂಚೀತ್ ಸಂಜೀವ್(Sanchith Sanjeev) ಅವರು ನ್ಯೂಯಾರ್ಕ್ ನಲ್ಲಿ ಸಿನಿಮಾ ಕುರಿತಂತೆ ಅತ್ಯುನ್ನತ ಶಿಕ್ಷಣವನ್ನೇ ಪೂರೈಸಿ ಬಂದಿದ್ದಾರೆ. ನೋಡೋದಕ್ಕೆ ಹ್ಯಾಂಡ್ಸಮ್ ಆಗಿರುವ ಸಂಚೀತ್ ಸಂಜೀವ್ ರವರು ವಾಯ್ಸ್ ಹಾಗೂ ಹೈಟ್ ನಲ್ಲಿ ತಮ್ಮ ಮಾವ ಕಿಚ್ಚ ಸುದೀಪ್(Kiccha Sudeep) ಅವರ ಹೊಲುತ್ತಿದ್ದಾರೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಭರವಸೆಯ ಯುವ ನಾಯಕ ನಟ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

ಇನ್ನು ಹಲವಾರು ಮೂಲಗಳ ಪ್ರಕಾರ ಸಂಚೀತ್ ಸಂಜೀವ್(Sanchith Sanjeev) ಅವರು ನಾಯಕ ನಟನಾಗಿ ಪಾದಾರ್ಪಣೆ ಮಾಡಲಿರುವ ಮೊದಲ ಸಿನಿಮಾವನ್ನು ಅವರೇ ನಿರ್ದೇಶನ ಕೂಡ ಮಾಡಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬರುತ್ತಿವೆ. ಅದೇನೇ ಇರಲಿ ಒಂದೊಳ್ಳೆ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದು ನಾವೆಲ್ಲರೂ ಅವರಿಗೆ ಪ್ರೋತ್ಸಾಹ ಮಾಡುವ ಮೂಲಕ ಎರಡು ಕೈಗಳನ್ನು ಅಗಲಿಸಿ ಅವರಿಗೆ ಸುಸ್ವಾಗತವನ್ನು ಕೋರೋಣ.

Leave a Comment

error: Content is protected !!