Darshan Thoogudeepa: ಕಿಚ್ಚನ ಕೈಯಲ್ಲಿ ದರ್ಶನ್ ಫೋಟೋ. ಇದೇನಿದು ವೈರಲ್ ನ್ಯೂಸ್?

Kiccha Sudeep ಕನ್ನಡ ಚಿತ್ರರಂಗದ ಆಧಾರ ಸ್ಥಂಭಗಳು ಎಂದು ಬಂದಾಗ ಒಂದು ಕಾಲದಲ್ಲಿ ಕಿಚ್ಚ ಸುದೀಪ್(Kiccha Sudeep) ಹಾಗೂ ದರ್ಶನ್(Darshan) ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿತ್ತು ಹಾಗೂ ಈಗಲೂ ಕೂಡ ಕೇಳಿ ಬರುತ್ತದೆ ಆದರೆ ಮೊದಲು ಅವರ ನಡುವೆ ಇದ್ದಂತಹ ಸ್ನೇಹ ಭಾವನೆ ಹಾಗೂ ಈಗ ಇರುವಂತಹ ಮನಸ್ಸಿನ ಭಾವನೆ ಸಾಕಷ್ಟು ವ್ಯತ್ಯಾಸವನ್ನು ಕಂಡುಬರುವಂತೆ ಮಾಡುತ್ತದೆ.

ಇತ್ತೀಚಿನ ದಿನಗಳಲ್ಲಿ ಇಬ್ಬರು ಕೂಡ ನಿಮಗೆಲ್ಲರಿಗೂ ತಿಳಿದಿರಬಹುದು ರಾಜಕೀಯ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಪ್ರಾರಂಭಿಸಿದರು ಹಾಗೂ ಇವರಿಬ್ಬರು ಹೋದಲ್ಲೆಲ್ಲ ಸಹಸ್ರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದು ಕೂಡ ಇವರಿಬ್ಬರ ಜನಪ್ರಿಯತೆ ಕರ್ನಾಟಕ ರಾಜ್ಯದಲ್ಲಿ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಸಾಬೀತು ಪಡಿಸಿತ್ತು.

ಇತ್ತೀಚಿಗಷ್ಟೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ತಮ್ಮ ಕೈಯಲ್ಲಿ ಅವರ ಹಾಗೂ ದರ್ಶನ್ ಅವರು ಒಟ್ಟಿಗೆ ನಿಂತಿರುವಂತಹ ಫೋಟೋವನ್ನು ಹಿಡಿದಿರುವ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ನೀವು ನೋಡಿರಬಹುದು. ಇದು ನಿಜಕ್ಕೂ ಏನಾಗಿತ್ತು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಅಭಿಮಾನಿ ಒಬ್ಬ ಕಿಚ್ಚ ಸುದೀಪ್ ರವರು ಚುನಾವಣಾ ಪ್ರಚಾರ ಮಾಡಲು ಹೋಗಿದ್ದ ಸಂದರ್ಭದಲ್ಲಿ ಅವರಿಬ್ಬರು ಜೊತೆಗೆ ಇರುವಂತಹ ಫೋಟೋವನ್ನು ನೀಡಿದಾಗ ಹಿಂದೂ ಮುಂದು ನೋಡದೆ ಕಿಚ್ಚ ಸುದೀಪ್ ರವರು ಅದರ ಮೇಲೆ ತಮ್ಮ ಆಟೋಗ್ರಾಫ್ ಹಾಕುತ್ತಾರೆ. ಈ ಮೂಲಕ ಕಿಚ್ಚ ಸುದೀಪ್ ಇಂದಿಗೂ ಕೂಡ ದರ್ಶನ್(Darshan) ರವರ ಸ್ನೇಹವನ್ನು ಗೌರವಿಸುತ್ತಾರೆ ಎಂಬುದು ಸಾಬೀತಾಗಿದೆ ಎಂದು ಹೇಳಬಹುದು.

Leave a Comment

error: Content is protected !!