Kiccha 46 ಕನ್ನಡ ಚಿತ್ರರಂಗದ ಖ್ಯಾತ ನಟ ನಿರ್ದೇಶಕ ಸರ್ವಾಂಗೀಣ ಪ್ರತಿಭೆ ಆಗಿರುವಂತಹ ಕಿಚ್ಚ ಸುದೀಪ್(Kiccha Sudeep) ರವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳು ಸಾಕಷ್ಟು ಸಮಯಗಳಿಂದಲೂ ಕೂಡ ತಲೆಕೆಡಿಸಿಕೊಂಡಿದ್ದರು. ಕೊನೆಗೂ ಕೂಡ ಆ ಪ್ರಶ್ನೆಗೆ ಉತ್ತರ ದೊರಕಿದೆ.
ಹೌದು ಕಿಚ್ಚ 46ನೇ ಸಿನಿಮಾ ಯಾವುದು ಎಂಬುದಾಗಿ ಕಳೆದ ಕೆಲವು ತಿಂಗಳಿಂದ ಕಿಚ್ಚನ ಅಭಿಮಾನಿಗಳು ತಲೆಕೆರೆದುಕೊಂಡು ಹುಡುಕಾಡುತ್ತಿದ್ದರು. ಕೊನೆಗೂ ಕೂಡ ಆ ಪ್ರಶ್ನೆಗೆ ಸಾಕಷ್ಟು ಸಮಯಗಳ ನಂತರ ಇವತ್ತು ಅಧಿಕೃತವಾಗಿ ಉತ್ತರ ಸಿಕ್ಕಿದ್ದು ಕಿಚ್ಚನ ಮುಂದಿನ ಸಿನಿಮಾ ಕಬಾಲಿ ಸಿನಿಮಾದ ನಿರ್ಮಾಪಕರ ಜೊತೆಗೆ ಎಂಬುದಾಗಿ ಆದಿಕೃತವಾಗಿ ಹೊರಬಂದಿದೆ. ಕಲೈಪುಲಿ ಎಸ್ ತನು ನಿರ್ಮಾಣದಲ್ಲಿ ಕಿಚ್ಚ ಸುದೀಪ್(Kiccha Sudeep) ನಾಯಕ ನಟನಾಗಿ ನಟಿಸುತ್ತಿರುವಂತಹ ಮುಂದಿನ ಸಿನಿಮಾದ ಅಧಿಕೃತ ವಿಡಿಯೋ ತುಣುಕು ಈಗ ಯುಟ್ಯೂಬ್ ಚಾನೆಲ್ ನಲ್ಲಿ ಹೊರ ಬಂದಿದೆ.
ಹೌದು ಈಗಾಗಲೇ ವಿಡಿಯೋ ತುಣುಕು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹೊರಬಂದಿದ್ದು ಇದೇ ಜೂನ್ ಒಂದರಂದು ಟೀಸರ್ ಕೂಡ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂಬುದಾಗಿ ಮೂಲಗಳು ತಿಳಿಸಿವೆ. ಮೂಲಗಳ ಪ್ರಕಾರ ಹೊಸ ತಮಿಳು ನಿರ್ದೇಶಕ ಈ ಸಿನಿಮಾವನ್ನು ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಮಾಡಲಿದ್ದಾರೆ ಎಂಬುದಾಗಿ ಸುದ್ದಿ ಇದೆ.
ಅಂತೂ ಇಂತೂ ಕೊನೆಗೂ ಕಿಚ್ಚನ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾದ ಕುರಿತಂತೆ ಒಂದೊಂದಾಗಿ ಅಪ್ಡೇಟ್ಗಳು ಸಿಗುತ್ತಿದ್ದು ಸದ್ಯಕ್ಕಂತೂ ಎಲ್ಲರೂ ಖುಷಿಯಲ್ಲಿದ್ದಾರೆ. ಕಿಚ್ಚ ಸುದೀಪ್ ರವರ ಮುಂದಿನ ಸಿನಿಮಾದ ಬಗ್ಗೆ ನಿಮಗಿರುವಂತಹ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.