Kantara: ಭಾರತವನ್ನು ಗೆದ್ದ ಕಾಂತಾರ ಈಗ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ! ಕೆಜಿಎಫ್ RRR ಕೂಡ ಈ ಸಾಧನೆ ಮಾಡಿಲ್ಲ.

Rishab Shetty ಕನ್ನಡದ ಹೆಮ್ಮೆಯ ನಿರ್ದೇಶಕ ಹಾಗೂ ನಟ ಆಗಿರುವಂತಹ ರಿಷಬ್ ಶೆಟ್ಟಿ ನಾಯಕತ್ವ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ(Kantara Film) ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಡಿಮೆ ಬಜೆಟ್ ನಲ್ಲಿ ಮೂಡಿಬಂದು ದೊಡ್ಡಮಟ್ಟದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವ ಮೂಲಕ ದಾಖಲೆ ಮಾಡಿದೆ.

ಇನ್ನು ಇತ್ತೀಚಿಗಷ್ಟೇ ವಿಶ್ವಸಂಸ್ಥೆಯಲ್ಲಿ ಕೂಡ ಪ್ರದರ್ಶನ ಕಂಡಂತಹ ಈ ಸಿನಿಮಾ ಅಂತರಾಷ್ಟ್ರೀಯ ಮಟ್ಟದಲ್ಲಿ ಕೂಡ ಕನ್ನಡದ ಕಂಪನ್ನು ಪಸರಿಸುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿಕೊಳ್ಳಬೇಕಾಗಿರುವ ವಿಚಾರ. ಈಗಾಗಲೇ ಕಾಂತಾರ ಸಿನಿಮಾದ ಎರಡನೇ ಭಾಗಕ್ಕಾಗಿ ಕೂಡ ಭಾರತದದ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗ ಕಾತರರಾಗಿ ಕಾಯುತ್ತಿದ್ದಾರೆ. ಇದರ ನಡುವಲ್ಲಿ ಮತ್ತೊಂದು ಸಾಧನೆಯನ್ನು ಕಾಂತಾರ(Kantara) ಮಾಡುವತ್ತ ಹೊರಟಿದೆ.

ಈ ಸಾಧನೆಯನ್ನು ಇತ್ತೀಚಿಗಷ್ಟೇ ಬಿಡುಗಡೆ ಆಗಿರುವಂತಹ ಹಾಗೂ ಬಾಕ್ಸ್ ಆಫೀಸ್ ನಲ್ಲಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿರುವಂತಹ ರಾಜ ಮೌಳಿ ನಿರ್ದೇಶನದ ಆರ್ ಆರ್ ಆರ್ ಹಾಗೂ ಕನ್ನಡದ ಹೆಮ್ಮೆಯ ಕೆ ಜಿ ಎಫ್ ಸಿನಿಮಾಗಳು ಕೂಡ ಮಾಡಿಲ್ಲ. ಅಷ್ಟಕ್ಕೂ ಆ ಸಾಧನೆ ಏನೆಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ಕಾಂತಾರ ಸಿನಿಮಾ ಈಗಾಗಲೇ ವಿಶ್ವಸಂಸ್ಥೆಯಲ್ಲಿ ಕೂಡ ಪ್ರದರ್ಶನ ಕಂಡಿದ್ದು ಸದ್ಯಕ್ಕೆ ಅತಿ ಶೀಘ್ರದಲ್ಲಿಯೇ ಇಟಾಲಿಯನ್ ಹಾಗೂ ಸ್ಪ್ಯಾನಿಶ್ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಲು ಸಜ್ಜಾಗಿ ನಿಂತಿದೆ. ಇದರ ಬಗ್ಗೆ ಸ್ವತಹ ರಿಷಬ್ ಶೆಟ್ಟಿ(Rishab Shetty) ಅವರೇ ಅಧಿಕೃತವಾಗಿ ಘೋಷಿಸಿದ್ದು ನಿಜಕ್ಕೂ ಕೂಡ ಕನ್ನಡದ ಅಮೂಲ್ಯ ಸಿನಿಮಾ ಸಾಕಷ್ಟು ಎತ್ತರವನ್ನು ಕಾಣುತ್ತಿದೆ ಎನ್ನುವುದು ನಾವೆಲ್ಲರೂ ಗರ್ವದಿಂದ ಹೇಳಿಕೊಳ್ಳಬೇಕಾದ ವಿಚಾರ.

Leave a Comment

error: Content is protected !!