Kabzaa Trailer: ಕನ್ನಡಿಗರ ಕೋಪಕ್ಕೆ ಕಾರಣವಾದ ಕಬ್ಜಾ ಟ್ರೈಲರ್. ನಿಜವಾದ ಕಾರಣ ಕೇಳಿದರೆ ನೀವು ಕೂಡ ಸಿಟ್ಟಾಗ್ತೀರಾ!

Kabzaa ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ ಕಬ್ಜಾ ಸಿನಿಮಾದ ಟ್ರೈಲರ್(Kabzaa Trailer) ನಿನ್ನೆ ನಿಗದಿತ ಸಮಯಕ್ಕಿಂತ ಸಾಕಷ್ಟು ಲೇಟ್ ಆಗಿ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು ಇದು ಸಾಕಷ್ಟು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗುತ್ತಿ ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ ಹಾಗೂ ನೀವು ಕೂಡ ಇದೇ ಕಾರಣಕ್ಕಾಗಿ ಕೋಪಿಸಿಕೊಂಡಿರಬಹುದು. ಆದರೆ ಇನ್ನೊಂದು ವಿಚಾರ ಕೂಡ ಈ ಸಂದರ್ಭದಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕ ನಟನಾಗಿ ಹಾಗೂ ಶ್ರೇಯ ಶರಣ್ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಭಾರ್ಗವ್ ಬಕ್ಷಿ ಎನ್ನುವ ಪೊಲೀಸ್ ಪಾತ್ರದಲ್ಲಿ ಮತ್ತು ಅತಿಥಿ ಪಾತ್ರದಲ್ಲಿ ಶಿವಣ್ಣ(Shivanna) ಕೂಡ ಕಾಣಿಸಿಕೊಂಡಿದ್ದು ಸಿನಿಮಾ ಬಹುತಾರಗಣವನ್ನು ಹೊಂದಿದೆ. ಸಿನಿಮಾದ ಟ್ರೈಲರ್ ಅಂತೂ ನೆಕ್ಸ್ಟ್ ಲೆವೆಲ್ ನಲ್ಲಿದ್ದು ಕೆಜಿಎಫ್ ಅನ್ನು ಕೂಡ ಮೀರಿಸಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟ್ರೈಲರ್ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿರುವ ಆರ್ ಚಂದ್ರು ಕಬ್ಜಾ(Kabzaa) ಚಿತ್ರದ ಕಥೆಯ ಮೂಲಕ ಹೇಗೆ ಗೆಲ್ಲುತ್ತಾರೆ ಎನ್ನುವುದು ಈಗ ಎಲ್ಲರೂ ಕಾಯುತ್ತಿರುವ ವಿಚಾರವಾಗಿದ್ದು ಸಿನಿಮಾ ಇದೇ ಮಾರ್ಚ್ 17ರಂದು ಬಹು ಭಾಷೆಗಳಲ್ಲಿ ರಾಜ್ಯ ಹಾಗೂ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆ ಕಾಣಲಿದೆ. ಇನ್ನು ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ ಚಿತ್ರತಂಡ ಮಾಡಿರುವ ಒಂದು ಎಡವಟ್ಟು ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಹಿಂದಿ ಸಿನಿಮಾವನ್ನು ಮೊದಲಿಗೆ ಅಧಿಕೃತವಾಗಿ ಅಮಿತಾಬ್ ಬಚ್ಚನ್(Amitabh Bacchan) ಅವರ ಬಳಿ ಬಿಡುಗಡೆ ಮಾಡಿಸಿ ನಂತರ ಕನ್ನಡ ಟ್ರೈಲರ್ ಅನ್ನು ಕಡೆಗಣಿಸಿ ನಂತರದ ಸ್ಥಾನಗಳಲ್ಲಿ ಬಿಡುಗಡೆ ಮಾಡಲಾಗಿದೆ ಎನ್ನುವುದು ಕನ್ನಡಿಗರ ಕೋಪಕ್ಕೆ ಕಾರಣವಾಗಿರುವಂತಹ ವಿಚಾರವಾಗಿದೆ. ಕನ್ನಡದ ಸಿನಿಮಾದ ಟ್ರೈಲರ್ ಕನ್ನಡದಲ್ಲಿ ಹಿಂದಿಗಿಂತ ನಂತರ ಬರುತ್ತೆ ಎಂದರೆ ಯಾರಿಗೆ ತಾನೇ ಕೋಪ ಬರಲ್ಲ ಹೇಳಿ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.