Kabzaa: ಮೊದಲ ದಿನವೇ ಕಬ್ಜಾ ಗಳಿಕೆ ಮಾಡಿದ್ದೆಷ್ಟು? ಎಲ್ಲಾ ರೆಕಾರ್ಡ್ ಪೀಸ್ ಪೀಸ್!

Kabzaa Collection ರಿಯಲ್ ಸ್ಟಾರ್ ಉಪೇಂದ್ರ(Real Star Upendra) ನಾಯಕನಟನಾಗಿ ನಟಿಸಿರುವ ಬಹು ನಿರೀಕ್ಷಿತ ಕಬ್ಜಾ ಸಿನಿಮಾ ಕೊನೆಗೂ ಕೂಡ ಪಂಚಭಾಷೆಗಳಲ್ಲಿ ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆ ಕಂಡಿದೆ. ಆರ್ ಚಂದ್ರು(R chandru) ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಈ ಸಿನಿಮಾ ಸಾಕಷ್ಟು ವರ್ಷಗಳಿಂದ ಚಿತ್ರೀಕರಣವನ್ನು ಕಾಣುತ್ತಿತ್ತು ಹೀಗಾಗಿ ಬಿಡುಗಡೆ ಮುಂದೂಡುತ್ತಲೇ ಬಂದಿತ್ತು. ಕೊನೆಗೂ ಈಗ ಬಿಡುಗಡೆ ಆಗಿರುವುದು ಸಿನಿಮಾ ಪ್ರೇಮಿಗಳಲ್ಲಿ ಸಂತೋಷವನ್ನು ತಂದಿದೆ.

ನಿಜಕ್ಕೂ ಕೂಡ ಅದ್ಭುತವಾಗಿ ಕಥೆ ಹಾಗೂ ಮೇಕಿಂಗ್ ಮೂಲಕ ಸೌಂಡ್ ಮಾಡುತ್ತಿರುವ ಕಬ್ಜಾ(Kabzaa) ಸಿನಿಮಾ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ ಪರಭಾಷೆಗಳನ್ನು ಕೂಡ ಮೆಚ್ಚಿಸಲು ಯಶಸ್ವಿಯಾಗಿದೆ. ಬಹುತಾರಗಣವನ್ನು ಹೊಂದಿರುವ ಈ ಸಿನಿಮಾದಲ್ಲಿ ಉಪ್ಪಿ ಜೊತೆಗೆ ಕಿಚ್ಚ(Kiccha) ಹಾಗೂ ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸುತ್ತಿರುವುದು ಡಬಲ್ ಧಮಾಕ ಎಂದು ಹೇಳಬಹುದಾಗಿದೆ.

ಇನ್ನೂ ಕ್ಲೈಮ್ಯಾಕ್ಸ್ ನಲ್ಲಿ ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನು ಸೇರಿದಂತೆ ಸಿನಿಮಾ ಪ್ರೇಮಿಗಳೆಲ್ಲರೂ ಕೂಡ ಆಶ್ಚರ್ಯ ಪಡುವಂತಹ ಟ್ವಿಸ್ಟ್ ಕೂಡ ಎದುರಾಗಿದೆ. ಖಂಡಿತವಾಗಿ ಮುಂದಿನ ದಿನಗಳಲ್ಲಿ ಕಬ್ಜಾ ಸಾಕಷ್ಟು ಸಮಯಗಳವರೆಗೆ ಚರ್ಚೆ ಮಾಡುವಂತಹ ಸಿನಿಮಾ ಆಗಿರಲಿದೆ. ಇನ್ನು ಕಬ್ಜಾ(Kabzaa Box Office collectuon ) ಸಿನಿಮಾ ಮೊದಲ ದಿನ ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿರುವ ಗಳಿಕೆ ಎಷ್ಟು ಎಂದು ತಿಳಿಯೋಣ ಬನ್ನಿ.

ಬಾಕ್ಸಾಫೀಸ್ ಮೂಲಗಳ ಪ್ರಕಾರ ಕಬ್ಜಾ ಸಿನಿಮಾ(Kabzaa Film) ಪ್ರಪಂಚದಾದ್ಯಂತ ಸಾವಿರಾರು ಥಿಯೇಟರ್ ಗಳಲ್ಲಿ ಬಿಡುಗಡೆ ಆಗುವ ಮೂಲಕ ಭರ್ಜರಿ ಬಿಡುಗಡೆಯನ್ನು ಕಂಡಿದ್ದು ಮೊದಲ ದಿನವೇ ಪ್ರಪಂಚದಾದ್ಯಂತ 25 ರಿಂದ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಅಂದಾಜಿದೆ ಎಂಬುದಾಗಿ ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ನೀವು ಕೂಡ ಕಬ್ಜಾ ಸಿನಿಮಾವನ್ನು ವೀಕ್ಷಿಸಿದರೆ ತಪ್ಪದೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!