Kabzaa: ಬಿಡುಗಡೆಯಾದ ಏಳು ದಿನದಲ್ಲಿ ಕಬ್ಜಾ ಸಿನಿಮಾ ಕಲೆಕ್ಷನ್ ಮಾಡಿದ್ದೆಷ್ಟು ಗೊತ್ತಾ? ಬಯಲಾಯ್ತು ನೋಡಿ ಕಬ್ಜಾದ ಕಲೆಕ್ಷನ್ ರಹಸ್ಯ!

Kabzaa Collection ಕಬ್ಜಾ ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆ ಆಗಿದ್ದರೂ ಕೂಡ ದೊಡ್ಡ ಮಟ್ಟದಲ್ಲಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಎಲ್ಲರೂ ಕೂಡ ಈ ಸಿನಿಮಾದ ಮೇಕಿಂಗ್ ಹಾಗೂ ಕಥೆಯನ್ನು ಕೆಜಿಎಫ್(KGF) ಸಿನಿಮಾ ಗೆ ಹೋಲಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಇದು ನೆಗೆಟಿವ್ ಹಾಗೂ ಇನ್ನು ಕೆಲವು ಕಡೆ ಮೆಚ್ಚುಗೆಗೂ ಕೂಡ ಕಾರಣವಾಗಿದೆ.

ಆದರೆ ಸಿನಿಮಾದ ಕಲೆಕ್ಷನ್ ಕುರಿತಂತೆ ಚಿತ್ರತಂಡ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಿಡುತ್ತಿದೆ ಎಂಬುದಾಗಿ ಕೂಡ ಕೆಲವೊಂದು ಆರೋಪಗಳು ಕೇಳಿ ಬರುತ್ತಿವೆ. ಸಿನಿಮಾ ತಂಡದ ಪ್ರಕಾರ ಕೇವಲ ಎರಡು ದಿನದಲ್ಲಿ ಚಿತ್ರ ವಿಶ್ವದ್ಯಂತ 100 ಕೋಟಿ ಅದಕ್ಕೆ ಕಲೆಕ್ಷನ್ ಮಾಡಿದೆ ಎಂಬುದಾಗಿ ಹೇಳಿಕೊಂಡಿತ್ತು. ಆದರೆ ಇದರ ಹಿಂದಿನ ನಿಜವಾದ ಅಸಲಿ ಎಂದು ಬೇರೇನೇ ಇದೆ ಎಂಬುದಾಗಿ ಕೂಡ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಅಷ್ಟಕ್ಕೂ ನಿಜವಾದ ಕಲೆಕ್ಷನ್ ಬಗ್ಗೆ ಬೆಳಕು ಚೆಲ್ಲೋಣ ಬನ್ನಿ.

ಹೌದು ಮಿತ್ರರೇ ಕನ್ನಡ ಚಿತ್ರರಂಗದಲ್ಲೇ ಆಗಲಿ ಅಥವಾ ಬೇರೆ ಭಾಷೆಯ ಸಿನಿಮಾ ರಂಗದಲ್ಲಿ ಆಗಲಿ ಕಲೆಕ್ಷನ್ ವಿಚಾರದ ಕುರಿತಂತೆ ಸುಳ್ಳು ಹೇಳುವ ಕೆಲಸಗಳು ಮೊದಲಿನಿಂದಲೂ ಕೂಡ ನಡೆದುಕೊಂಡು ಬಂದಿವೆ. ಆದರೆ ಒಟ್ಟಾರೆ 7 ದಿನಗಳಲ್ಲಿ ಕಬ್ಜಾ ಸಿನಿಮಾ(Kabzaa Movie) ಮಾಡಿರುವಂತಹ ನಿಜವಾದ ಕಲೆಕ್ಷನ್ ಏನು ಎನ್ನುವುದು ಕೆಲವೊಂದು ಕಡೆಗಳಲ್ಲಿ ಸಿಕ್ಕಿದ್ದು ಇದು ಚಿತ್ರದಂಡ ಅನೌನ್ಸ್ ಮಾಡಿರುವಂತಹ ಕಲೆಕ್ಷನ್ ಗಿಂತ ಸಾಕಷ್ಟು ಅಂತರವನ್ನು ಹೊಂದಿದೆ ಎಂಬುದಾಗಿ ತಿಳಿದುಬಂದಿದೆ.

ಏಳು ದಿನಗಳಲ್ಲಿ ಕೇವಲ 50 ರಿಂದ 30 ಕೋಟಿ ಒಳಗೆ ಕಬ್ಜಾ(Kabzaa) ಸಿನಿಮಾ ಕಲೆಕ್ಷನ್ ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು ಸಿನಿಮಾ ತಂಡ ಇದಕ್ಕಿಂತಲೂ ದ್ವಿಗುಣ ಪಟ್ಟು ಹೆಚ್ಚಿರುವಂತಹ ಕಲೆಕ್ಷನ್ ಅನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ತೋರಿಸುತ್ತಿದೆ. ಇದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಎಲ್ಲರೂ ಕೂಡ ಯಾಕೆ ಈ ರೀತಿ ಸುಳ್ಳು ಕಲೆಕ್ಷನ್ ಹೇಳುತ್ತಿದ್ದೀರಿ ಎಂಬುದಾಗಿ ಆರೋಪಿಸಿದ್ದಾರೆ.

Leave a Comment

error: Content is protected !!