ಹೇಗಿದೆ ಗೊತ್ತಾ ಅಪ್ಪು ಅವರ ಕೊನೆ ಚಿತ್ರ ಜೇಮ್ಸ್


ಇಂದು ಮಾರ್ಚ್ 17 ಕರ್ನಾಟಕದ ಹೃದಯ ಸಿಂಹಾಸನದ ರಾಜಾ ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ ದಿನ. ಅವರ ಹುಟ್ಟಿದ ದಿನದ ಪ್ರಯುಕ್ತ ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಇಡೀ ವಿಶ್ವದಾದ್ಯಂತ ಬಿಡುಗಡೆ ಹೊಂದಿದೆ. ಕರ್ನಾಟಕದಲ್ಲಂತೂ ಅಕ್ಷರಶಃ ಜೇಮ್ಸ್ ಜಾತ್ರೆ ಶುರುವಾಗಿದೆ. ಮುಂಜಾನೆ 4 ಗಂಟೆಯಿಂದಲೇ ಜೇಮ್ಸ್ ಚಿತ್ರದ ಅಬ್ಬರ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳೆಲ್ಲಾ ಥಿಯೇಟರ್ ಮುಂದೆ ಕಾತುರದಿಂದ ಕಾಯುತ್ತಿದ್ದರು.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ 4 ಸಾವಿರಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ರಿಲೀಸ್ ಆಗಿದೆ. ಇಂತಹ ರೆಕಾರ್ಡ್ ಗಳನ್ನು ಸೃಷ್ಟಿ ಮಾಡಲು ಅಪ್ಪು ಅವರಿಂದ ಮಾತ್ರ ಸಾಧ್ಯ. ಬಿಡುಗಡೆಯಾಗಿರುವ ಜೇಮ್ಸ್ ಚಿತ್ರ ವನ್ನು ನೋಡಲು ಇಡೀ ಕರ್ನಾಟಕವೇ ಕಾತುರದಿಂದ ಕಾಯುತ್ತಿದೆ ಪುನೀತ್ ಅವರನ್ನು ಕೊನೆಯ ಬಾರಿ ದೊಡ್ಡ ಪರದೆಯ ಮೇಲೆ ನೋಡುವ ಸದಾವಕಾಶ ನಮಗೆ ಒದಗಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡಿರುವ ಗೇಮ್ಸ್ ಚಿತ್ರ ಹೇಗಿದೆ ತಿಳಿದುಕೊಳ್ಳೋಣ ಬನ್ನಿ.

ಜೆಮ್ಸ್ ಚಿತ್ರ ಪ್ರಾರಂಭವಾದಾಗ ಮೊದಲಿಗೆ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಫೋಟೋವೊಂದನ್ನು ಹಾಕಿ ಪುನೀತ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ಚಿತ್ರದಲ್ಲಿ ಅಪ್ಪು ಅವರ ಹೆಸರು ಸಂತೋಷ್ ಕುಮಾರ್. ಸಂತೋಷ್ ಕುಮಾರ್ ವಿಂಗ್ಸ್ ಎಂಬ ಭದ್ರತಾ ಏಜೆನ್ಸಿ ಯಲ್ಲಿ ಸೆಕ್ಯೂರಿಟಿ ಏಜೆಂಟ್ ಆಗಿ ಕೆಲಸ ಮಾಡುವ ಪಾತ್ರದ ಸುತ್ತ ಸುತ್ತುತ್ತದೆ.

ಈ ಚಿತ್ರದ ಹೈಲೈಟ್ ಪಾರ್ಟ್ ಏನೆಂದರೆ ಅಪ್ಪು ಮತ್ತು ಅವರ ಆ್ಯಕ್ಷನ್ ದೃಶ್ಯಗಳು. ಮೈ ರೋಮಾಂಚನವಾಗುವ ಸ್ಟಂಟ್ ಗಳನ್ನು ಅಪ್ ಲೋಡ್ ಮಾಡಿದ್ದಾರೆ. ಇನ್ನೊಮ್ಮೆ ಮಗದೊಮ್ಮೆ ನೋಡಬೇಕು ಎನ್ನುವಂತಹ ಫೈಟಿಂಗ್ ದೃಶ್ಯಗಳು. ಜೇಮ್ಸ್ ಸಿನಿಮಾದ ಫಸ್ಟ್ ಹಾಫ್ ನಲ್ಲಿ ಬೊಂಬಾಟ್ ಆ್ಯಕ್ಷನ್, ರೊಮ್ಯಾನ್ಸ್ ಮತ್ತು ಕೊನೆಯಲ್ಲಿ ಸಕತ್ ಟ್ವಿಸ್ಟ್ ಕೊಟ್ಟಿದ್ದಾರೆ. ಟ್ವಿಸ್ಟ್ ಏನೆಂದು ತಿಳಿಯಲು ನೀವು ಸಿನಿಮಾಗೆ ಹೋಗಿ ನೋಡಬೇಕು.

ತದನಂತರ ಸೆಕೆಂಡ್ ಹಾಫ್ ಪ್ರಾರಂಭದಲ್ಲಿ ಚಿತ್ರ ಸ್ವಲ್ಪ ಎಮೋಷನಲ್ ಆಗಿ ಸಾಗುತ್ತೆ. ಆದರೆ ಪ್ರೇಕ್ಷಕರಿಗೆ ಎಲ್ಲೂ ಬೋರ್ ಬರುವುದಿಲ್ಲ. ಸೆಕೆಂಡ್ ಹಾಫ್ ನಲ್ಲಿ ಕೂಡ ಅಪ್ಪು ಅದ್ದೂರಿ ಆ್ಯಕ್ಷನ್ ದೃಶ್ಯಗಳಿವೆ. ಈ ಸಿನೆಮಾದ ಇನ್ನೊಂದು ಹೈಲೈಟ್ ಪಾಯಿಂಟ್ ಏನೆಂದರೆ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರಾಜ್ ಕುಮಾರ್ ಅವರು ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದೇ ಪರದೆಯ ಮೇಲೆ ರಾಜ್ ಕುಟುಂಬದ 3 ಮಕ್ಕಳನ್ನು ನೋಡುವ ಸದಾವಕಾಶ ಒದಗಿದೆ. ಶಿವರಾಜ್ ಕುಮಾರ್ ಅವರು ಕೂಡ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ರಂಗಾಯಣ ರಘು ಮತ್ತು ಸಾಧು ಕೋಕಿಲಾ ನಂಥ ಕಾಮಿಡಿ ತಿಂಗಳು ಈ ಸಿನಿಮಾದಲ್ಲಿ ಇರುವುದರಿಂದ ಕಾಮಿಡಿಗೆ ಯಾವುದೇ ಕೊರತೆಯಿಲ್ಲ.

ಈ ಚಿತ್ರದಲ್ಲಿ ಪ್ರಿಯ ಆನಂದ್, ಅನು ಪ್ರಭಾಕರ್, ಶ್ರೀಕಾಂತ್, ಶರತ್ ಕುಮಾರ್, ಸಾಧು ಕೋಕಿಲ, ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಈ ಚಿತ್ರ ಅಭಿಮಾನಿಗಳ ಕಣ್ಣಿಗಂತೂ ಹಬ್ಬ. ಪುನೀತ್ ಅವರ ಸಿನಿಮಾ ಅಂದಮೇಲೆ ಸಿನಿಮಾದಲ್ಲಿ ಒಳ್ಳೆಯ ಸಂದೇಶ ಇದ್ದೇ ಇರುತ್ತೆ. ಈ ಸಿನಿಮಾದಲ್ಲಿ ದೇಶಾಭಿಮಾನ ಮತ್ತು ಗೆಳೆತನದ ಬಗ್ಗೆ ಒಳ್ಳೆಯ ಸಂದೇಶಗಳನ್ನು ಕೂಡ ನೀಡಿದ್ದಾರೆ. ಫ್ಯಾಮಿಲಿ ಒಟ್ಟಿಗೆ ಆಗಲಿ ಅಥವಾ ಸ್ನೇಹಿತರ ಒಟ್ಟಿಗೆ ಆಗಲಿ ನೀವೆಲ್ಲಾ ಥಿಯೇಟರ್ ಗೆ ಬಂದು ಶಿಳ್ಳೆ ಚಪ್ಪಾಳೆ ಹೊಡೆದು ಕೊನೇ ಬಾರಿ ಪುನೀತ್ ಅವರ ಪವರ್ ಪ್ಯಾಕ್ ಅವತಾರವನ್ನು ನೋಡುವುದಕ್ಕೆ ಇದೊಂದು ಅದ್ಭುತ ಸಿನೆಮಾ.

ಈ ಸಿನಿಮಾವನ್ನು ನೋಡಿ ಥಿಯೇಟರ್ ನಿಂದ ಹೊರಬರುವಾಗ ಖಡಾಖಂಡಿತವಾಗಿ ನಿಮ್ಮ ಕಣ್ಣಲ್ಲಿ ನೀರು ತುಂಬಿರುತ್ತದೆ. ಮತ್ತೆ ಮತ್ತೆ ಪುನೀತ್ ಅವರನ್ನು ನೋಡಬೇಕು ಎಂದು ಅನಿಸುತ್ತದೆ. ಬಹುಶಃ ಪುನೀತ್ ರಾಜ್ ಕುಮಾರ್ ಅವರು ಸ್ವರ್ಗದಿಂದ ಈ ಎಲ್ಲ ದೃಶ್ಯವನ್ನು ನೋಡುತ್ತಿದ್ದರೆ ಸ್ವರ್ಗಕ್ಕಿಂತ ಭೂಲೋಕವೇ ವಾಸಿಯೆಂದು ಹಿಂತಿರುಗಿ ಬರುತ್ತಾರೋ ಏನೋ ಗೊತ್ತಿಲ್ಲ. ಕೊನೆಯದಾಗಿ ಹೇಳಬೇಕೆಂದರೆ ಪ್ರತಿಯೊಬ್ಬರೂ ಈ ಸಿನಿಮಾವನ್ನು ಥಿಯೇಟರ್ ಗೆ ಹೋಗಿ ನೋಡಿ ಆನಂದಿಸಿ.. ಈಗಾಗಲೇ ನೀವು ಸಿನಿಮಾವನ್ನು ನೋಡಿದ್ದರೆ ಈ ಸಿನಿಮಾ ಹೇಗಿದೆ ಎಂದು ಕಮೆಂಟ್ ನಲ್ಲಿ ತಿಳಿಸಿ


Leave A Reply

Your email address will not be published.