ಅತ್ಯಂತ ದುಬಾರಿ ಮನೆಯನ್ನು ಹೊಂದಿರುವ ದಕ್ಷಿಣದ ಸ್ಟಾರ್ ನಟರು ಯಾರೆಲ್ಲಾ ಗೊತ್ತಾ? ಇಲ್ಲಿದೆ ನೋಡಿ ಫುಲ್ ಲಿಸ್ಟ್.


South Indian Film Industry ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿ ತಯಾರಾಗುತ್ತಿದ್ದು ದಕ್ಷಿಣ ಭಾರತದ ಸಿನಿಮಾಗಳ ಬೇಡಿಕೆ ಎನ್ನುವುದು ಉತ್ತರ ಭಾರತದಲ್ಲಿ ಸೇರಿದಂತೆ ವಿಶ್ವದಾದ್ಯಂತ ಅಧಿಕವಾಗಿದೆ. ಈ ಕಾರಣದಿಂದಲೇ ನಮ್ಮ ದಕ್ಷಿಣದ ನಟರು ಸಂಭಾವನೆಯ(Remuneration) ರೂಪದಲ್ಲಿ ಕೂಡ ಹೆಚ್ಚಿನ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಹಾಗಿದ್ದರೆ ಬನ್ನಿ ದಕ್ಷಿಣ ಭಾರತ ಚಿತ್ರರಂಗದ ನಟರಲ್ಲಿ ಅತ್ಯಂತ ಹೆಚ್ಚು ದುಬಾರಿ ಮೌಲ್ಯದ ಮನೆಯನ್ನು ಯಾರೆಲ್ಲಾ ಹೊಂದಿದ್ದಾರೆ ಎಂಬುದನ್ನು ತಿಳಿಯೋಣ.

ಮೊದಲನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar ಅವರ ಸದಾಶಿವ ನಗರದ ನಿವಾಸ ಭರ್ಜರಿ 7 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರ ಬೆಂಗಳೂರಿನ ಜೆಪಿ ನಗರದ ನಿವಾಸ ಭರ್ಜರಿ 20 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿತ್ತು. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಅವರ ಮನೆ 25 ಕೋಟಿಗೂ ಅಧಿಕ ಮೌಲ್ಯವನ್ನು ಹೊಂದಿದೆ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು(Mahesh Babu) ಅವರ ನಿವಾಸ 28 ಕೋಟಿಗೂ ಅಧಿಕ ಮೌಲ್ಯವನ್ನು ಹೊಂದಿದೆ.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್(Superstar Rajinikanth) ಅವರ ನಿವಾಸ 35 ಕೋಟಿಗೂ ಅಧಿಕ ಬೆಲೆಯನ್ನು ಹೊಂದಿದೆ. ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಹಳೆಮನೆ 5 ಕೋಟಿ ರೂಪಾಯಿ ಮೌಲ್ಯವನ್ನು ಹೊಂದಿದ್ದು ಈಗ ಅವರು ಕಟ್ಟಿಸುತ್ತಿರುವ ಹೊಸ ಮನೆಯ ಬೆಲೆ 35 ಕೋಟಿಗೂ ಮೀರಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ತಮಿಳು ಚಿತ್ರರಂಗದ ತಲಪತಿ ವಿಜಯ್(Thalapathy Vijay) ಅವರ ನಿವಾಸ 35 ಕೋಟಿ ಮೌಲ್ಯವನ್ನು ಹೊಂದಿದೆ. ಯಂಗ್ ಟೈಗರ್ ಜೂನಿಯರ್ ಎನ್ಟಿಆರ್(Jr Ntr) ಅವರ ನಿವಾಸವು ಕೂಡ 35 ಕೋಟಿಗೂ ಅಧಿಕ ಮೌಲ್ಯವನ್ನು ಹೊಂದಿದೆ.

ಮೆಗಾ ಪವರ್ ಸ್ಟಾರ್ ರಾಮಚರಣ್(RamCharan) ಅವರ ನಿವಾಸ 38 ಕೋಟಿ ಅಧಿಕ ಬೆಲೆಯನ್ನು ಹೊಂದಿದೆ. ಡಾರ್ಲಿಂಗ್ ರೆಬೆಲ್ ಸ್ಟಾರ್ ಪ್ರಭಾಸ್(Rebel Star Prabhas) ಅವರ ನಿವಾಸ 60 ಕೋಟಿಗೂ ಅಧಿಕ ಬೆಲೆಯನ್ನು ಹೊಂದಿದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಅವರ ಮನೆ ಭರ್ಜರಿ 100 ಕೋಟಿಗೂ ಅಧಿಕ ಹಣದಲ್ಲಿ ಮೂಡಿ ಬಂದಿದೆ. ಕೊನೆಯದಾಗಿ ಮಲಯಾಳಂ ಚಿತ್ರರಂಗದ ಯುವ ಭರವಸೆಯ ನಟ ಮುಮ್ಮುಟಿ ಅವರ ಮಗ ದುಲ್ಕರ್ ಸಲ್ಮಾನ್(Dulquer Salman) ಅವರ ಮನೆ ಭರ್ಜರಿ 110 ಕೋಟಿ ರೂಪಾಯಿ ಬೆಲೆಯದ್ದಾಗಿದೆ. ಇವರೇ ಮಿತ್ರರೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಬೆಲೆಯ ಮನೆಯನ್ನು ಹೊಂದಿರುವ ಸ್ಟಾರ್ ನಟರು.


Leave A Reply

Your email address will not be published.