ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಅದ್ದೂರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ಧ್ರುವ ಸರ್ಜಾ ಅವರು ಒಂದರ ಹಿಂದೊಂದು ಚಿತ್ರಗಳನ್ನು ಮಾಡಿದ್ದಾರೆ. ‘ಹು ಅಂದ್ಳು ಆ ದಿನ, ಉಹೂ ಅಂದ್ಳು ಈ ದಿನ’ ಎನ್ನುತ್ತಾ ಅಮ್ಮಾಟೆ ಹಾಡಿಗೆ ಕುಣಿದು, ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಬಹದ್ದೂರ್ ಆಗಿ ಭರ್ಜರಿ ಮೆರೆದಿದ್ದಾರೆ. ಪ್ರೇಮ ಬರಹದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಪೊಗರು ಚಿತ್ರದಲ್ಲಿ ನಾಯಕನಾಗಿ, ರಶ್ಮಿಕಾ ಮಂದಣ್ಣ ಅವರೊಂದಿಗೆ ನಟಿಸಿದ್ದಾರೆ.ಸದ್ಯ ಮಾರ್ಟಿನ್ ಚಿತ್ರದ ಶೂಟಿಂಗ್ ನಲ್ಲಿ ಇವರು ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ.

ಧ್ರುವ ಸರ್ಜಾ ಅವರು ತಮ್ಮಿಷ್ಟದ ಗೆಳತಿ ಪ್ರೇರಣರೊಂದಿಗೆ ಮದುವೆಯಾಗಿ ವರ್ಷಗಳೆ ಉರುಳಿವೆ. ಸದ್ಯದಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣ ಜೋಡಿ ತಂದೆ ತಾಯಿಯಾಗಲಿದ್ದಾರೆ. ಪ್ರೇರಣ ಅವರು ಪ್ರೆಗ್ನೆಂಟ್ ಎನ್ನುವ ವಿಷಯವನ್ನು ಈ ಹಿಂದೆ ಎಲ್ಲೂ ಹೇಳಿರದ ಧ್ರುವ ಸರ್ಜಾ ಅವರು ಇದೀಗ ಫೋಟೋಶೂಟ್ ಮಾಡಿಸಿಕೊಂಡಿದ್ದು, ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.ಪ್ರೇರಣ ಅವರು ಈಗ ಒಂಬತ್ತು ತಿಂಗಳ ತುಂಬು ಗರ್ಭಿಣಿ.

ಅದ್ದೂರಿ ಹೀರೋ ತಂದೆಯಾಗಲಿದ್ದಾರೆ ಎಂಬ ವಿಷಯವನ್ನು ತಿಳಿದ ಅಭಿಮಾನಿಗಳು ಅವರ ಫೋಟೋಗಳನ್ನು ಲೈಕ್ ಮಾಡಿದ್ದಾರೆ. ಖಾಸಗಿ ಹೋಟೆಲ್ ಒಂದರಲ್ಲಿ ಸೀಮಂತ ಶಾಸ್ತ್ರವನ್ನು ಮುಗಿಸಿರುವ ಇವರಿಗೆ ಗುರು ಹಿರಿಯರ ಮತ್ತು ಅಭಿಮಾನಿಗಳ ಶುಭ ಹಾರೈಕೆಗಳು ದೊರೆತಿವೆ. ಈ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಅವರು ಕೂಡ ಭಾಗಿಯಾಗಿದ್ದರು. ಸರಳವಾಗಿಯೇ ಸೀಮಂತ ಮುಗಿಸಿರುವ ಧ್ರುವ ಸರ್ಜಾ ಅವರು ಮೀಡಿಯಾದ ಮುಂದೆ ತಮ್ಮ ಆಸೆಯನ್ನು ಹೇಳಿದ್ದಾರೆ. ‘ನಿಮಗೆ ಯಾವ ಮಗು ಬೇಕು? ಗಂಡೊ? ಹೆಣ್ಣೊ?’ ಎಂದು ಸಂದರ್ಶನವೊಂದರಲ್ಲಿ ನಿರೂಪಕರು ಕೇಳಿದ ಪ್ರಶ್ನೆಗೆ ಇವರು ಹೆಣ್ಣು ಮಗು ಬೇಕೆಂದಿದ್ದಾರೆ.

‘ನನಗೆ ಗಂಡು ಮಗು ಬೇಡ. ಹೆಣ್ಣು ಮಗು ಬೇಕು’ ಎಂದಿದ್ದಾರೆ. ಗಂಡು ಮಗು ಬೇಡ ಎನ್ನಲು ಕಾರಣವಿದೆ. ‘ನನ್ನ ಪ್ರೀತಿಯ ಅಣ್ಣ ಚಿರಂಜೀವಿ ಅವರಿಗೆ ಗಂಡು ಮಗು ಇದ್ದಾನೆ. ಆತ ನಮಗೂ ಮಗನೇ; ಈಗಾಗಲೇ ನಮ್ಮ ಮನೆಯಲ್ಲಿ ಗಂಡು ಮಗುವಿದ್ದು ನಮಗೆ ಹೆಣ್ಣು ಮಗಳಾಗಲಿ ಎಂಬುದು ಆಸೆ. ನಮ್ಮ ಕುಟುಂಬಕ್ಕೆ ಪುಟ್ಟ ಚಿರಂಜೀವಿ ಒಬ್ಬನೇ ಮಗನಾಗಿ ಸಾಕು; ಅದಕ್ಕಾಗಿ ನನಗೆ ಹೆಣ್ಣು ಮಗು ಬೇಕು’ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ‘ನಿಮಗೆ ಯಾವ ಮಗ ಬೇಕು?’ಎಂದು ಪ್ರಶ್ನೆಸಿದಾಗ ಹೆಣ್ಣು ಮಗುವೇ ಬೇಕು ಎಂದು ಉತ್ತರಿಸುವವರು ಕಡಿಮೆ ಮಂದಿ. ಆದರೆ ಧ್ರುವ ಸರ್ಜಾ ಅವರ ಈ ಮಾತಿಗೆ ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಶನದ ವಿಡಿಯೋ ಸಕ್ಕತ್ ವೈರಲ್ ಆಗಿದ್ದು, ಹೆಣ್ಣು ಮಗುವೆ ಯಾಕೆ ಬೇಕೆಂದು ಅವರು ಉತ್ತರಿಸಿರುವ ಪರಿಗೆ ಫಾಲೋವರ್ಸ್ ಗಳು ಖುಷ್ ಆಗಿದ್ದಾರಂತೆ. ಅಣ್ಣ ಮತ್ತು ಅಣ್ಣನ ಮಗನ ಮೇಲಿನ ಇವರ ಪ್ರೀತಿ ಕಂಡು, ನಿಮ್ಮ ಆಸೆಯಂತೆ ಆಗಲಿ ಎಂದಿದ್ದಾರಂತೆ. ಸದ್ಯದಲ್ಲೆ ಧ್ರುವ ಸರ್ಜಾ ಮತ್ತು ಪ್ರೇರಣ ಜೋಡಿ ಸಿಹಿಸುದ್ದಿ ನೀಡಲಿದ್ದು, ಹೆಣ್ಣು ಮಗು ಜನಿಸುತ್ತೋ ಅಥವಾ ಗಂಡು ಮಗು ಜನಿಸುತ್ತೋ ಎಂದು ಕಾದುನೋಡಬೇಕಿದೆ.

By admin

Leave a Reply

Your email address will not be published.