‘ಮೂರು ಜನ ಗಂಡು ಮಕ್ಕಳಿದ್ದರೂ ಒಬ್ಬರಿಂದಲೂ ನನ್ನ ಆಸೆಯನ್ನು ನೆರವೇರಿಸಲು ಸಾಧ್ಯವಾಗಲಿಲ್ಲ’ ಎನ್ನುತ್ತಾ ಬೇಸರ ವ್ಯಕ್ತಪಡಿಸಿದ್ದ ರಾಜಕುಮಾರ್. ಹಾಗಿದ್ರೆ ಅಣ್ಣಾವ್ರ ಆಸೆ ಏನಾಗಿತ್ತು?

ಡಾಕ್ಟರ್ ರಾಜಕುಮಾರ್ ಅವರನ್ನು ಕನ್ನಡ ಚಿತ್ರರಂಗ ಸೇರಿದಂತೆ ಅಭಿಮಾನಿ ಬಳಗವು ಅಪ್ಪಾಜಿ ಎಂದೇ ಕರೆಯುತ್ತದೆ. ತಮ್ಮ ಅಭಿನಯ, ನೃತ್ಯ, ಗಾನಗಳಿಂದ ಕರ್ನಾಟಕದ ಜನತೆಯ ಪ್ರೀತಿಯನ್ನು ಗಳಿಸಿದ್ದರೆ, ಮಾತು ಸರಳತೆ ಹೃದಯವಂತಿಕೆಯಿಂದ ಅಪಾರ ಗೌರವವನ್ನು ಗಳಿಸಿದ್ದರು.

ಅಣ್ಣಾವ್ರ ಕುಟುಂಬವೆಂದರೆ ಎಲ್ಲರಿಗೂ ಪ್ರೀತಿ, ಗೌರವ. ಈ ಕುಟುಂಬದ ಪ್ರತಿ ಸದಸ್ಯನ ಮೇಲು ಎಲ್ಲರಿಗೂ ಕಾಳಜಿ, ನಂಬಿಕೆಯಿದೆ. ದೊಡ್ಮನೆ ಅವರು ಮಾದರಿಯಾಗಿ ಬದುಕಿ ಹಲವಾರು ಮಂದಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಕುಟುಂಬದ ಘನತೆ ಗೌರವಕ್ಕೆ ಧಕ್ಕೆ ತರುವಂತ ಯಾವುದೇ ಕೆಲಸ ಕಾರ್ಯವನ್ನು ಶಿವಣ್ಣರಾಗಲಿ, ರಾಘಣ್ಣರಾಗಲಿ, ಅಪ್ಪು ಅವರಾಗಲಿ ಎಂದಿಗೂ ಮಾಡಿದವರಲ್ಲ. ತಂದೆಯಂತೆ ಮೂರು ಜನ ಗಂಡು ಮಕ್ಕಳು ಕೂಡ ತಮ್ಮ ಸರಳ ಜೀವನ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿಕೆಯಿಂದ ಹೆಸರನ್ನು ಗಳಿಸಿಕೊಂಡೆ ಬಂದಿದ್ದಾರೆ.

ಅಂತಹದರಲ್ಲಿ ಡಾಕ್ಟರ್ ರಾಜಕುಮಾರ್ ಅವರು ವೇದಿಕೆಯಲ್ಲಿ ಎಲ್ಲರೆದುರು ತಮ್ಮ ಬೇಸರವನ್ನು ವ್ಯಕ್ತಪಡಿಸಲು ಕಾರಣವೇನು ಎಂದು ಯೋಚಿಸುತ್ತಿದ್ದೀರಾ?? ಹೌದು..ಸ್ನೇಹಿತರೆ ಡಾಕ್ಟರ್ ರಾಜಕುಮಾರ್ ಅವರಿಗೆ ತಮ್ಮ ಮೂರು ಮಕ್ಕಳನ್ನು ದೊಡ್ಡ ದೊಡ್ಡ ಉದ್ದಿಮೆಗಳಲ್ಲಿ ನೋಡುವ ಆಸೆ ಇತ್ತಂತೆ. ಅದರ ಕುರಿತಾಗಿ ವೇದಿಕೆಯಲ್ಲೊಮ್ಮೆ ಅಣ್ಣಾವ್ರು ಹಂಚಿಕೊಂಡಿದ್ದರು.

ಶಿವರಾಜ್ ಕುಮಾರ್ ಅವರು ಚಿಕ್ಕಂದಿನಿಂದಲೇ ಆಟಗಳಲ್ಲಿ ತುಂಬಾ ಆಸಕ್ತಿಯನ್ನು ತೋರಿ ಕ್ರಿಕೆಟ್ ಆಟವನ್ನು ಬಹಳ ಪ್ರೀತಿಸುತ್ತಿದ್ದರಂತೆ. ಇದನ್ನು ಗಮನಿಸಿದ ಪಾರ್ವತಮ್ಮ ಹಾಗೂ ರಾಜಕುಮಾರ್ ಅವರು ವಿದ್ಯಾಭ್ಯಾಸದಲ್ಲಿಯೂ ಗಮನ ತೋರಿಸಲಿ ಎಂದುಕೊಳ್ಳುತ್ತಾ ಉತ್ತಮ ಶಿಕ್ಷಣವನ್ನು ನೀಡಿದರಂತೆ. ಉತ್ತಮ ಕ್ರಿಕೆಟ್ ಆಟಗಾರನಾಗಿ ಶಿವರಾಜಕುಮಾರ್ ಅವರನ್ನು ನೋಡುತ್ತೇವೆ ಎಂದುಕೊಂಡರಂತೆ. ಆದರೆ ಶಿವರಾಜಕುಮಾರ್ ರವರು ಹಾಡು, ಕುಣಿತ, ಅಭಿನಯ ಎನ್ನುತ್ತಾ ಚಿತ್ರರಂಗವನ್ನು ಪ್ರವೇಶಿಸಿ ಒಳ್ಳೆಯ ಹೆಸರು ಗಳಿಸಿದರಂತೆ.

ಮೊದಲನೆಯ ಮಗನಂತೂ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾಯ್ತು. ಎರಡನೆಯ ಮಗ ರಾಘಣ್ಣನಾದರೂ ತಮ್ಮ ಆಸೆಯನ್ನು ನೆರವೇರಿಸುತ್ತಾನೆಂದು ಕಾದು ಕುಳಿತಿದ್ದರಂತೆ. ಆದರೆ ರಾಘಣ್ಣ ಅವರು ಎಂಬಿಬಿಎಸ್ ಪದವಿಯನ್ನು ಓದುತ್ತಿರುವಾಗಲೇ ಸಿನಿಮಾ ರಂಗದಲ್ಲಿ ಆಸಕ್ತಿ ತೋರಿಸಿ ಓದನ್ನು ಅರ್ಧದಲ್ಲಿಯೇ ನಿಲ್ಲಿಸಿ ಬಂದುಬಿಟ್ಟರಂತೆ. ಪಾರ್ವತಮ್ಮ ರಾಜಕುಮಾರ್ ಅವರು ರಾಘಣ್ಣನನ್ನು ಉತ್ತಮ ನಿರ್ದೇಶಕರನ್ನಾಗಿ ನೋಡಲು ಇಚ್ಛೆಪಟ್ಟರಂತೆ. ಆದರೆ ಅದು ಕೂಡ ಕನಸಾಗಿಯೇ ಉಳಿಯಿತು.

ಇನ್ನು ಅಪ್ಪು ಅವರ ವಿಚಾರಕ್ಕೆ ಬಂದರೆ ಅಪ್ಪಾಜಿ ಅವರ ಆಸೆಯಂತೆ ಮೊದಲು ಬಿಸಿನೆಸ್ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಗ್ರಾನೈಟ್ ಬ್ಯುಸಿನೆಸ್ ಅನ್ನು ಪ್ರಾರಂಭಿಸಿ ನಂತರ ಕಾರಣಾಂತರಗಳಿಂದ ಅದನ್ನು ನಿಲ್ಲಿಸಿ ಚಿತ್ರರಂಗವನ್ನು ಪ್ರವೇಶಿಸುತ್ತಾರೆ. ಅಲ್ಲಿಗೆ ಮೂವರು ಗಂಡು ಮಕ್ಕಳು ಕನ್ನಡ ಚಿತ್ರರಂಗದಲ್ಲಿಯೇ ಗುರುತಿಸಿಕೊಂಡು ಹೆಸರುಗಳಿಸಿದ್ದಾರೆ.
ಈ ವಿಚಾರವಾಗಿ ಯಾವುದೇ ಕೆಟ್ಟ ಭಾವನೆಯಿಂದ ಅಣ್ಣಾವ್ರು ಅಂದು ವೇದಿಕೆಯಲ್ಲಿ ಮಾತನಾಡಿದ್ದಲ್ಲ..

ಅಸಲಿಗೆ ಕಲಾದೇವತೆಯು ಮನೆ ಮಂದಿಯ ಮನದಲ್ಲೇ ನೆಲೆಸಿರುವುದಕ್ಕೆ ಹರ್ಷವನ್ನು ಕೂಡ ವ್ಯಕ್ತಪಡಿಸಿದ್ದರು. ವೇದಿಕೆಯಲ್ಲಿ ಮಾತನಾಡುವಾಗ ‘ನನ್ನ ಮೂರು ಜನ ಗಂಡು ಮಕ್ಕಳನ್ನು ಉದ್ಯಮಿಗಳನ್ನಾಗಿ ಮಾಡುವ ಆಸೆಯನ್ನು ನಾನು ಹೊಂದಿದ್ದೆ; ಆದರೆ ಕಲಾದೇವತೆಯು ನನ್ನ ಮೂರು ಜನ ಗಂಡು ಮಕ್ಕಳಿಗೂ ಒಲಿದು ನಾನಂದುಕೊಂಡಂತೆ ಯಾವುದೂ ನಡೆಯಲಿಲ್ಲ. ಎಲ್ಲವೂ ದೈವ ಇಚ್ಛೆಯಂತೆಯೇ ಸಾಗಿದೆ’ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

Leave a Comment

error: Content is protected !!