Dboss: ಡಿ ಬಾಸ್ ಜೊತೆಗೆ ಕಿಚ್ಚ ಸುದೀಪ್ ಸಿನಿಮಾದ ನಿರ್ಮಾಪಕನನ್ನು ನೋಡಿ ಡಿಬಾಸ್ ಅಭಿಮಾನಿಗಳು ಹೇಳಿದ್ದೇನು ಗೊತ್ತಾ?

Darshan Thoogudeepa ಕನ್ನಡ ಚಿತ್ರರಂಗದ ಮಾಸ್ ದೊರೆ ಆಗಿರುವ ಬಾಕ್ಸ್ ಆಫೀಸ್ ಸುಲ್ತಾನ(Box Office Sultana) ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಸದ್ಯಕ್ಕೆ ಕಾಟೇರ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಅವರ ಮುಂದಿನ ಸಿನಿಮಾ ಯಾವುದು ಇರಬಹುದು ಎನ್ನುವುದಾಗಿ ಕೂಡ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮನೆಮಾಡಿದೆ ಎಂದು ಹೇಳಬಹುದಾಗಿದೆ.

ಇದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ನಟನೆಯ ಕೋಟಿಗೊಬ್ಬ 2 ಹಾಗೂ 3 ಸಿನಿಮಾದ ನಿರ್ಮಾಪಕರಾಗಿರುವ ಸೂರಪ್ಪ ಬಾಬು(Soorappa Babu) ಜೊತೆ ಹಲವಾರು ಬಾರಿ ಕಾಣಿಸಿಕೊಂಡಿರುವುದು ಡಿ ಬಾಸ್ ಅಭಿಮಾನಿಗಳ ಮನಸ್ಸಿನಲ್ಲಿ ಅನುಮಾನ ಎದ್ದೇಳುವಂತೆ ಮಾಡಿದೆ. ಈ ವಿಚಾರದ ಬಗ್ಗೆ ಡಿ ಬಾಸ್(Dboss) ಅಭಿಮಾನಿಗಳಲ್ಲಿಯೇ ವಿರೋಧ ಇರುವುದನ್ನು ಕೂಡ ನೀವು ಕಾಣಬಹುದಾಗಿದೆ.

Dboss With Soorappa Babu

ಹಲವಾರು ವರ್ಷಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿರುದ್ಧ ಸೂರಪ್ಪ ಬಾಬು ಅವರಿಂದ ಕೆಲವೊಂದು ಹೇಳಿಕೆಗಳು ಕೇಳಿ ಬಂದ ನಂತರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ದರ್ಶನ್(Darshan) ರವರ ತಾಯಿಯ ಬಳಿ ಸೂರಪ್ಪ ಬಾಬು ಕ್ಷಮೆ ಕೇಳಿದ್ದನ್ನು ಕೂಡ ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಆದರೆ ಈಗ ಮತ್ತೆ ಒಂದಾಗುತ್ತಿರುವುದು ನಿಜಕ್ಕೂ ಕೂಡ ಡಿ ಬಾಸ್ ಅಭಿಮಾನಿಗಳಲ್ಲಿ ಆಶ್ಚರ್ಯವನ್ನು ತರಿಸಿದೆ.

ಇದರ ಕುರಿತಂತೆ ಮಾತನಾಡುತ್ತಾ ಡಿ ಬಾಸ್(Dboss) ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ವಿರುದ್ಧ ಕ’ ತ್ತಿ ಮಸೆದಿರುವಂತಹ ಇಂತಹ ವ್ಯಕ್ತಿಗಳನ್ನು ನಿಮ್ಮ ಜೊತೆ ಸೇರಿಸಿಕೊಳ್ಳಬೇಡಿ ಎಂಬುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಿಮಗೆ ಇದರ ಬಗ್ಗೆ ಏನನಿಸುತ್ತದೆ ಡಿ ಬಾಸ್ ಹಾಗೂ ಸೂರಪ್ಪ ಬಾಬು(Soorappa Babu) ಸಿನಿಮಾ ಮಾಡ್ತಾರ ಎನ್ನುವ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!