Dboss: ಅಭಿಮಾನಿಯ ಸೀಮಂತ ಕಾರ್ಯಕ್ರಮಕ್ಕೆ ಹೋದ ಡಿಬಾಸ್. ವೀಡಿಯೋ ವೈರಲ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲನೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಯಾವುದೇ ಅನುಮಾನವಿಲ್ಲದೆ ನಾವು ಒಪ್ಪಿಕೊಳ್ಳ ಬೇಕಾಗಿರುವಂತಹ ವಿಚಾರವಾಗಿದೆ. ಇನ್ನು ಅಭಿಮಾನಿಗಳನ್ನು ಅವರು ಎಷ್ಟು ಚೆನ್ನಾಗಿ ಪ್ರೀತಿಯಿಂದ ಕಾಣುತ್ತಾರೆ ಎನ್ನುವುದಕ್ಕೆ ಈಗಾಗಲೇ ಹಲವಾರು ಉದಾಹರಣೆಗಳು ನಮಗೆ ಸಿಕ್ಕಿವೆ.

ಇನ್ನು ಅವರ ಅಭಿಮಾನಿಗಳು ಕೂಡ ದರ್ಶನ್(Darshan) ರವರನ್ನು ಡಿ ಬಾಸ್(Dboss) ಎನ್ನುವುದಾಗಿ ಪ್ರೀತಿಯಿಂದ ಕರೆದು ಅವರು ಹೇಳುವಂತಹ ಎಲ್ಲಾ ಕಾರ್ಯಗಳನ್ನು ಕೂಡ ಶಿರಸಾವಹಿಸಿ ಪಾಲಿಸುತ್ತಾರೆ. ಇದಕ್ಕಾಗಿ ಅಭಿಮಾನಿಗಳನ್ನು ಡಿ ಬಾಸ್ ಪ್ರೀತಿಯಿಂದ ಸೆಲೆಬ್ರಿಟಿಗಳು ಎಂಬುದಾಗಿ ಕರೆಯುತ್ತಾರೆ. ದರ್ಶನ್ ಅವರಂತೆ ಅವರ ಅಭಿಮಾನಿಗಳು ಕೂಡ ಸಮಾಜೋದ್ಧಾರದ ಕೆಲಸಗಳನ್ನು ಆಗಾಗ ಮಾಡುತ್ತಲೇ ಇರುತ್ತಾರೆ.

ದರ್ಶನ್ ರವರು ಈಗಾಗಲೇ ಫಾರ್ಮ್ ಹೌಸ್ ನಲ್ಲಿ ಮಲಗೋಕು ಸೈ ಫೈವ್ ಸ್ಟಾರ್ ಹೋಟೆಲ್ನಲ್ಲಿ ಮಲಗೋಕು ಸೈ ಸಾಬೀತುಪಡಿಸಿ ತೋರಿಸದವರು. ಕ್ಲಾಸ್ ಹಾಗೂ ಮಾಸ್ ಎರಡು ಜೀವನವನ್ನು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan Thoogudeepa) ರವರು ಚಿಕ್ಕವಯಸ್ಸಿನಿಂದ ಇಲ್ಲಿಯವರೆಗೆ ನೋಡಿದ್ದಾರೆ. ಅಭಿಮಾನಿಗಳನ್ನು ಅವರು ಎಷ್ಟು ಪ್ರೀತಿಯಿಂದ ಕಾಣುತ್ತಾರೆ ಎನ್ನುವುದಕ್ಕೆ ಇಂದು ಘಟನೆ ಉದಾಹರಣೆಯಾಗಿ ನೀಡಬಹುದಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಒಬ್ಬರ ಮನೆಯಲ್ಲಿ ಶ್ರೀಮಂತ ಕಾರ್ಯಕ್ರಮ ಇದ್ದಿದ್ದು ಅವರಿಗೆ ತಿಳಿದು ಬಂದಿತ್ತು. ಕೂಡಲೇ ಅವರ ಮನೆಗೆ ಹೋಗಿ ಮಗುವನ್ನು ಜನ್ಮ ನೀಡಲಿರುವ ಆ ಹೆಣ್ಣು ಮಗಳಿಗೆ ತಾವೇ ಹೋಗಿ ಆಶೀರ್ವಾದವನ್ನು ಮಾಡಿ ಬಂದಿದ್ದಾರೆ. ಅಭಿಮಾನಿಗಳ(Dboss Fans) ಮನೆಗೆ ಹೋಗಲು ಹಿಂದೂ ಮುಂದು ನೋಡುವ ಸ್ಟಾರ್ ನಟರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲು ನಿಜಕ್ಕೂ ಕೂಡ ಹೆಮ್ಮೆಯಾಗುತ್ತದೆ.

Leave a Comment

error: Content is protected !!