Yajamana: ಬಿಡುಗಡೆಯಾಗಿ 4 ವರ್ಷವನ್ನು ಪೂರೈಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಯಜಮಾನ ಗಳಿಸಿದ್ದೆಷ್ಟು ಕೋಟಿ ಗೊತ್ತಾ?
Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟನಾಗಿ ನಟಿಸಿರುವ ಸಿನಿಮಾಗಳೆಲ್ಲವೂ ಕೂಡ ಬಹುತೇಕ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿರುವ ಸಿನಿಮಾಗಳು. ಅವುಗಳಲ್ಲಿ ಒಂದಾಗಿರುವ ಯಜಮಾನ ಸಿನಿಮಾ ಬಿಡುಗಡೆಯಾಗಿ ಇಂದಿಗೆ ನಾಲ್ಕು ವರ್ಷಗಳು ಸಂಪೂರ್ಣಗೊಂಡಿದೆ. ಯಜಮಾನ(Yajamana Kannada Movie) ಸಿನಿಮಾ ಸಾಮಾಜಿಕ ಸಂದೇಶವನ್ನು ಹೊಂದಿರುವಂತಹ ಒಂದು ಒಳ್ಳೆ ಸಿನಿಮಾ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಕೂಡ ಗೆಲುವನ್ನು ಕಂಡಂತಹ.
ಡಿ ಸುರೇಶ್ ಹಾಗೂ ಶೈಲಜಾ ನಾಗ್(Shailaja Nag) ದಂಪತಿಗಳ ನಿರ್ಮಾಣದಲ್ಲಿ ಮೂಡಿಬಂದಂತಹ ಈ ಸಿನಿಮಾವನ್ನು ಸಂಗೀತ ನಿರ್ದೇಶಕ ವಿ ಹರಿಕೃಷ್ಣ(V Harikrishna) ಅವರು ನಿರ್ದೇಶಿಸಿದ್ದರು. ಇದು ಹರಿಕೃಷ್ಣ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಆಗಿತ್ತು. ಇನ್ನು ನಾಯಕನಟಿಯರಾಗಿ ರಶ್ಮಿಕ ಮಂದಣ್ಣ(Rashmika Mandanna) ಹಾಗೂ ತಾನ್ಯ ಹೋಪ್ ಎಲ್ಲರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಡಿ ಬಾಸ್ ರವರ ಖಡಕ್ ಡೈಲಾಗ್ ಗಳು ಈ ಸಿನಿಮಾದ ಮುಖ್ಯ ಆಕರ್ಷಣೆ ಆಗಿತ್ತು ಎಂದರೆ ತಪ್ಪಾಗಲಾರದು.

ಎಲ್ಲಕ್ಕಿಂತ ಪ್ರಮುಖವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರ ಅಭಿಮಾನಿಗಳಿಗೆ ಇಷ್ಟ ಆಗುವಂತಹ ಕಥೆ ಇದರಲ್ಲಿ ಇದ್ದು ಪ್ರತಿಯೊಂದು ಸಾಂಗ್ ಟ್ರೈಲರ್ ಹಾಗೂ ಟೀಸರ್ಗಳು ಕೂಡ ಯೂಟ್ಯೂಬ್ ನಲ್ಲಿ ರೆಕಾರ್ಡ್ ಮುರಿದಿವೆ. ಇನ್ನು ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಕಲೆಕ್ಷನ್ ಮಾಡಿತ್ತು ಎನ್ನುವುದನ್ನು ತಿಳಿಯೋಣ ಬನ್ನಿ.
ಹೌದು ಗೆಳೆಯರೇ, ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಅತ್ಯಂತ ಯಶಸ್ವಿ ಸಿನಿಮಾಗಳಲ್ಲಿ ಒಂದಾಗಿರುವ ಯಜಮಾನ(Yajamana Dboss) ಸಿನಿಮಾ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ಐವತ್ತು ಕೋಟಿಗೂ ಅಧಿಕಕಾಲಕ್ಷಣ ಮಾಡಿತ್ತು ಎನ್ನುವುದು ಮೂಲಗಳಿಂದ ತಿಳಿದು ಬಂದಿರುವಂತಹ ಸುದ್ದಿಯಾಗಿದೆ. ಹಳ್ಳಿಯ ಜನರು ಹಾಗೂ ಕಾರ್ಪೊರೇಟ್ ಕಂಪನಿಗಳ ನಡುವಿನ ನೈಜ ಚಿತ್ರಣದಂತೆ ಕಂಡುಬಂದಿರುವ ಯಜಮಾನ ಸಿನಿಮಾ ಕೆಲವು ವರ್ಗದ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಹಿಡಿದಂತಹ ಕೈಗನ್ನಡಿಯಾಗಿದೆ.