Rishab Shetty: ರಿಶಬ್ ಶೆಟ್ಟಿ ಮಗಳ ಮೊದಲ ವರ್ಷದ ಬರ್ತಡೆಗೆ ಡಿ ಬಾಸ್ ಕೊಟ್ಟ ಗಿಫ್ಟ್ ಏನು ಗೊತ್ತಾ?

Darshan Thoogudeepa ಕಾಂತಾರ ಖ್ಯಾತಿಯ ನಟ ರಿಷಬ್ ಶೆಟ್ಟಿ(Rishab Shetty) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಿಂದ ಹೊರ ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಸಾಧಿಸಿರುವಂತಹ ನಟ. ಪ್ರತಿಯೊಬ್ಬರೂ ಕೂಡ ಕಾಂತಾರ 2(Kantara 2) ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ ಎನ್ನುವುದು ಕೂಡ ಕನ್ನಡ ಚಿತ್ರರಂಗ ಹೆಮ್ಮೆ ಪಡಬೇಕಾಗಿರುವಂತಹ ಮತ್ತೊಂದು ವಿಚಾರ. ರಿಷಬ್ ಶೆಟ್ಟಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಪ್ರತಿ ಬಾರಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲಲು ಯಶಸ್ವಿಯಾಗುತ್ತಾರೆ.

ಇನ್ನು ಕೇವಲ ಸಿನಿಮಾ ವಿಚಾರದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದ ವಿಚಾರದಲ್ಲಿಯೂ ಕೂಡ ರಿಷಬ್ ಶೆಟ್ಟಿ ತಮ್ಮ ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡುತ್ತಾರೆ. ಕಾಂತರಾ(Kantara) ಸಿನಿಮಾದ ಗೆಲುವಿನ ನಂತರ ತಮ್ಮ ಕುಟುಂಬವನ್ನು ದುಬೈಗೆ(Dubai) ಕರೆದುಕೊಂಡು ಹೋಗಿ ಉತ್ತಮ ಸಮಯವನ್ನು ಕಳೆದುಕೊಂಡು ಬಂದಿದ್ದರು ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ವಿಡಿಯೋದ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ.

ಇನ್ನು ನಿನ್ನೆಯಷ್ಟೇ ರಿಷಬ್ ಶೆಟ್ಟಿ ತಮ್ಮ ಮಗಳಾಗಿರುವ ರಾದ್ಯಾ ಶೆಟ್ಟಿ(Raadya Shetty) ರವರ ಬರ್ತಡೆಯನ್ನು ಅದ್ದೂರಿಯಾಗಿ ಆಚರಿಸಿದ್ದು ಈ ಬರ್ತಡೆ ಸೆಲೆಬ್ರೇಶನ್ ಗೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕೂಡ ಆಗಮಿಸಿರುವುದು ವಿಶೇಷವಾದ ಸುದ್ದಿಯಾಗಿದೆ.

ಹೌದು ಗೆಳೆಯರೇ ಡಿ ಬಾಸ್(Dboss) ಕೂಡ ರಿಷಬ್ ಶೆಟ್ಟಿ ಅವರ ಮಗಳ ಬರ್ತಡೆ ಸೆಲೆಬ್ರೇಶನ್ ಗೆ ಆಗಮಿಸಿದ್ದು ಮಗಳ ಕೈಗೆ ಪುಟ್ಟ ಉಡುಗೊರೆಯ ಬಾಕ್ಸ್ ಅನ್ನು ನೀಡಿದ್ದಾರೆ. ಅಧಿಕೃತವಾಗಿ ಇದು ಏನು ಎಂಬುದಾಗಿ ತಿಳಿದು ಬಂದಿಲ್ಲ ಆದರೆ ಪುಟ್ಟ ಮಗುವಿಗೆ ಚಿನ್ನದ ಸರವನ್ನು ನೀಡಿರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಅದೇನೇ ಇರಲಿ ಚಿತ್ರರಂಗದಲ್ಲಿ ಮಾಸ್ ನಟನಾಗಿ ಮಿಂಚಿದರೂ ಕೂಡ ರಿಷಬ್ ಶೆಟ್ಟಿ(Rishab Shetty) ಅವರ ಮಗುವಿನ ಜೊತೆಗೆ ಮಗುವಿನ ರೀತಿ ನಡೆದುಕೊಂಡಿದ್ದು ನಿಜಕ್ಕೂ ಕೂಡ ಎಲ್ಲರ ಕಣ್ಣನ್ನು ಅರಳಿಸಿತ್ತು.

Leave a Comment

error: Content is protected !!