Kaatera: ಕಾಟೇರ ಚಿತ್ರೀಕರಣದಲ್ಲಿ ಡಿ ಬಾಸ್! ಸೆನ್ಸೇಶನ್ ಸೃಷ್ಟಿಸಿದ ಲೇಟೆಸ್ಟ್ ವಿಡಿಯೋ!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯಕ್ಕೆ ಕಾಟೇರ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕ್ರಾಂತಿ ಸಿನಿಮಾದ ನಂತರ ದರ್ಶನ್ ಅಭಿಮಾನಿಗಳಲ್ಲಿ ಕಾಟೇರ(Kaatera) ಸಿನಿಮಾದ ಕುರಿತಂತೆ ನಿರೀಕ್ಷೆ ಹೆಚ್ಚಾಗಿದೆ. ಅದರಲ್ಲೂ ದರ್ಶನ್ ಅವರ ಹೊಸ ಲುಕ್ ಈ ಸಿನಿಮಾಗೆ ಮತ್ತೊಂದು ಮೆರುಗನ್ನು ನೀಡಿದೆ. ಪ್ರತಿಯೊಬ್ಬರೂ ಕೂಡ ಈ ಸಿನಿಮಾದ ಕುರಿತಂತೆ ದೊಡ್ಡ ಮಟ್ಟದ ನಿರೀಕ್ಷೆಯನ್ನು ಹೊಂದಿರುವುದಕ್ಕೆ ಇದು ಕೂಡ ಒಂದು ಕಾರಣವಾಗಿದೆ.

ತರುಣ್ ಸುಧೀರ್(Tharun Sudhir) ನಿರ್ದೇಶನದಲ್ಲಿ ಹಾಗೂ ರಾಕ್ಲೈನ್ ವೆಂಕಟೇಶ್(Rockline Venkatesh) ನಿರ್ಮಾಣದಲ್ಲಿ ಮೂಡಿ ಬರುತ್ತದೆ ಇರುವಂತಹ ಸಿನಿಮಾ ವಾಗಿದ್ದು, ಪಂಚಭಾಷೆಗಳಲ್ಲಿ ಬಿಡುಗಡೆಯಾಗುವುದಕ್ಕೆ ಮತ್ತೊಂದು ನೈಜವಾದ ಕಾರಣ ಈ ಸಿನಿಮಾಗೆ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಇನ್ನು ಸಿನಿಮಾದಲ್ಲಿ ನಟಿ ಮಹಾಲಕ್ಷ್ಮಿ ಅವರ ಮಗಳಾಗಿರುವಂತಹ ರಾಧನ ರಾಮ್(Radhana Ram) ಅವರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಸದ್ಯದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಈ ಬಹು ನಿರೀಕ್ಷಿತ ಕಾಟೇರ ಸಿನಿಮಾದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದು ಚಿತ್ರೀಕರಣಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಚಿತ್ರೀಕರಣ ಮುಗಿಸಿಕೊಂಡು ಅದೇ ಗೆಟಪ್ ನಲ್ಲಿ ಕಾರಿನಿಂದ ಇಳಿದು ವ್ಯಾನಿಟಿ ವ್ಯಾನ್ ಗೆ ಡಿ ಬಾಸ್ ಹೋಗುತ್ತಿರುವಂತಹ ವಿಡಿಯೋದಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಜಯ ಘೋಷಗಳಿಂದ ಸ್ವಾಗತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ.

ಕ್ರಾಂತಿ ಸಿನಿಮಾದ ಯಶಸ್ಸಿನ ನಂತರ ಕಾಟೇರ(Kaatera) ಕೂಡ ಅದೇ ರೀತಿಯ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯಬಹುದು ಎನ್ನುವುದಾಗಿ ಸಿನಿಮಾ ಪಂಡಿತರು ಕೂಡ ಲೆಕ್ಕಾಚಾರ ಹಾಕಿದ್ದು ಚಿತ್ರಿಕರಣ ಮುಗಿದ ನಂತರವಷ್ಟೇ ಸಿನಿಮಾದ ಕುರಿತಂತೆ ಇನ್ನಷ್ಟು ಹೆಚ್ಚಿನ ವಿವರಗಳು ದೊರಕಲಿದೆ. ಕಾಟೇರ ಸಿನಿಮಾದ ಬಗ್ಗೆ ನಿಮಗಿರುವಂತಹ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!